Friday, April 18, 2025
Google search engine

Homeರಾಜ್ಯಬಾಗಲಕೋಟೆ ತಾಲೂಕು ಛಾಯಾಗ್ರಾಹಕರ ಸಂಘದಿಂದ 77ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ

ಬಾಗಲಕೋಟೆ ತಾಲೂಕು ಛಾಯಾಗ್ರಾಹಕರ ಸಂಘದಿಂದ 77ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ

ಬಾಗಲಕೋಟೆ: ತಾಲೂಕು ಛಾಯಾಗ್ರಾಹಕರ  ಮತ್ತು ವಿಡಿಯೋಗ್ರಾಫರ್ ಸಂಘದಿಂದ 77 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಸಂಘದ ಅಧ್ಯಕ್ಷರಾದ ಚಂದ್ರು ಅಂಬಿಗೇರ ಭಾರತಮಾತೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು,  1947ರ ಆಗಸ್ಟ್ 14ರ ಮಧ್ಯರಾತ್ರಿ ಕಳೆದ ಬಳಿಕ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ ಕಾರಣ ಆಗಸ್ಟ್ 15ನ್ನು ಸ್ವಾತಂತ್ರ್ಯ ದಿನವನ್ನಾಗಿ ಆಚರಿಸಲಾಗುತ್ತಿದೆ. ನಮ್ಮ ದೇಶ ನಮ್ಮ ಹೆಮ್ಮೆ ಹಾಗೂ ದೇಶಭಕ್ತಿಯ ಪ್ರತೀಕವಾಗಿ ಇಡೀ ದೇಶವೇ ತ್ರಿವರ್ಣದಿಂದ ಕಂಗೊಳಿಸುತ್ತದೆ ಎಂದರು.

ಹಿರಿಯರಾದ ರಾಜು ಗವಳಿ ಮಾತನಾಡಿ ಭಾರತ ದೇಶವನ್ನು ಬ್ರಿಟಿಷರ ಕಪಿಮುಷ್ಠಿಯಿಂದ ಬಿಡುಗಡೆಗೊಳಿಸಲು ಹಲವಾರು ಜನ ತಮ್ಮ ಪ್ರಾಣವನ್ನು ಬಲಿದಾನ ಮಾಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ವಿಠ್ಠಲ,  ಸಂಘದ ಉಪಾಧ್ಯಕ್ಷ ಸಂತೋಷ ಹಂಜಗಿ, ಕಾರ್ಯದರ್ಶಿ ರಾಘು ಕಲಾಲ, ಸಂಗು ಅಂಬಿಗೇರ, ವಿರೇಶ ಹಿರೇಮಠ, ಸದಸ್ಯರಾದ ವಿಠ್ಠಲ ಮೂಲಿಮನಿ, ಶಬ್ಬೀರ ಬಿಜಾಪುರ, ಮಂಜು ಗೋಡೆಕಟ್ಟು, ಸದಾನಂದ ಯತ್ನಟ್ಟಿ, ರವಿ ಲಮಾಣಿ, ಕಾಶಿನಾಥ್ ಬಿಸನಾಳ, ಸಂತೋಷ್ ಹೆಳವರ, ಹನಮಂತ ದಾಳಿ, ಸುರೇಶ ಮಜ್ಜಗಿ, ವಿಶಾಲ ಗವಳಿ ಸೇರಿದಂತೆ ಇತರರು ಇದ್ದರು.

RELATED ARTICLES
- Advertisment -
Google search engine

Most Popular