ಪೌರ ಕಾರ್ಮಿಕರು ಮತ್ತು ಸಾಮಾಜಿಕ ಕಾರ್ಯಕರ್ತರಿಗೆ ಸನ್ಮಾನ.
ಮಂಗಳೂರು (ದಕ್ಷಿಣ ಕನ್ನಡ):ಪೌರ ಕಾರ್ಮಿಕರು ಮತ್ತು ಸಾಮಾಜಿಕ ಕಾರ್ಯಕರ್ತರಿಗೆ ಸನ್ಮಾನ ಮಾಡುವ ಮೂಲಕ ಕರಾವಳಿ ಟೀಮ್ ವತಿಯಿಂದ 77ನೇ ಸ್ವಾತಂತ್ರ ದಿನಾಚರಣೆಯನ್ನು ಮಂಗಳೂರು ನಗರದ ಬಜ್ಪೆ ಜಂಕ್ಷನ್ ನಲ್ಲಿ ಆಚರಿಸಲಾಯಿತು. ಧ್ವಜಾರೋಹಣವನ್ನು ಎಂ ದೇವದಾಸ್ ನೆರವೇರಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ನಿಸಾರ್ ಕರಾವಳಿ ಅಧ್ಯಕ್ಷರು ಐಟಿ ಸೆಲ್ ಮುಲ್ಕಿ ಮೂಡಬಿದ್ರೆ ವಿಧಾನಸಭಾ ಕ್ಷೇತ್ರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಿರಾಜ್ ಬಜ್ಪೆ ,ಶಿವರಾಂ ಪೂಜಾರಿ ,ಬಿ ಜೆ ರಹೀಮ್,ರಾಕೇಶ್ ಕುಂದರ್ ಉಮೇಶ್ ಶೆಟ್ಟಿ ,ಜೇಕಬ್ ಪಿರೇರಾ ಅಶ್ರಫ್ ಮಾಚಾರ್ ,ಜಲಾಲುದ್ದೀನ್ ಮರವೂರು ,ಮಂಜಪ್ಪ ಪುತ್ರನ್ ಹನೀಫ್ ಹಿಲ್ ಟಾಪ್ ,ನಜಿರ್ ಕಿನ್ನಿಪದವ ,ಖಾದರ್ ಏರ್ಪೋರ್ಟ್, ಎಂ ಕೆ ಅಶ್ರಫ್ ಹಕೀಮ್ ಪ್ಯಾರಾ ಮತ್ತು ಊರಿನ ಗಣ್ಯರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಹಫೀಜ್ ಕೊಳಂಬೆ ನಿರೂಪಿಸಿದರು.
