- ಡಿಸೆಂಬರ್ 13 ರಂದು ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿ ನಡೆಯುವ ಸ್ಕೇಟಿಂಗ್ ಗೆ ಆಯ್ಕೆ
ಹುಣಸೂರು: ಗೋವದಲ್ಲಿ ನಡೆದ ಕ್ಯಾಷ್ ಹಾಕ್ ಸ್ಕೇಟಿಂಗ್ ಪಂದ್ಯಾವಳಿಯಲ್ಲಿ ಎಂಟು ವಿದ್ಯಾರ್ಥಿಗಳು ಚಿನ್ನದ ಪದಕ ಪಡೆದು ರಾಜ್ಯಕ್ಕೆ ಎರಡನೇ ಸ್ಥಾನ ತಂದಿದ್ದಾರೆ ಎಂದು ಅಂತರಾಷ್ಟ್ರೀಯ ತರಬೇತುದಾರ ಮುಸಾವೀರ್ ಪಾಷ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಭಾನುವಾರ ಗೋವದಲ್ಲಿ ನಡೆದ ಕ್ಯಾಷ್ ಹಾಕ್ ಪಂದ್ಯಾವಳಿಯಲ್ಲಿ ಹುಣಸೂರಿನ ಕಿಂಗ್ಸ್ ಸ್ಕೇಟಿಂಗ್ ಅಕಾಡೆಮಿಯ ಆರು ವಿದ್ಯಾರ್ಥಿಗಳು ಚಿನ್ನದ ಪದಕ ಪಡೆದರೆ ಇನ್ನಿಬ್ಬರು ಬೆಳ್ಳಿ ಪದಕ ಪಡೆದು ಡಿಸೆಂಬರ್ 13 ರಂದು ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿ ನಡೆಯುವ ಸ್ಕೇಟಿಂಗ್ ಗೆ ಆಯ್ಕೆಯಾಗಿದ್ದಾರೆ. ಅಲ್ಲೂ ಜಯಗಳಿಸಿದರೆ ಮುಂಬೈಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ನಮ್ಮ ರಾಜ್ಯದಿಂದ ಸುಮಾರು 4 ರಿಂದ 11 ವರ್ಷದ ಮಕ್ಕಳು ಗೋವದಲ್ಲಿ ಜಯಗಳಿಸಿದ ಮಕ್ಕಳು. ಚಾರ್ವಿ.ವಿ, ನಿರೀಕ್ಷಾ ಎಸ್, ದಿಶಾ, ಡಿ.ಆದ್ಯಾ, ಬಿ.ಮನನ್ ಪ್ರಿನ್ಸ್, ಲಕ್ಷಿತ್ ಗೌಡ, ಸನ್ಮಿತ್ ರೀತು, ಪ್ರೀಯಾಂಶ್ ಹಾಗೂ ಅಂತರಾಷ್ಟ್ರೀಯ ತರಬೇತುದಾರು ಇದ್ದರು.