Saturday, April 19, 2025
Google search engine

Homeರಾಜ್ಯಸುದ್ದಿಜಾಲರಾಜ್ಯಕ್ಕೆ ಮುಂಗಾರು ಪ್ರವೇಶವಾದ ಹತ್ತು ದಿನಗಳಲ್ಲಿ ಶೇ 80ರಷ್ಟು ಹೆಚ್ಚುವರಿ ಮಳೆ

ರಾಜ್ಯಕ್ಕೆ ಮುಂಗಾರು ಪ್ರವೇಶವಾದ ಹತ್ತು ದಿನಗಳಲ್ಲಿ ಶೇ 80ರಷ್ಟು ಹೆಚ್ಚುವರಿ ಮಳೆ

ಬೆಂಗಳೂರು: ರಾಜ್ಯಕ್ಕೆ ಮುಂಗಾರು ಪ್ರವೇಶವಾದ ಕೇವಲ ಹತ್ತು ದಿನಗಳಲ್ಲಿ ವಾಡಿಕೆಗಿಂತ ಶೇ 80ರಷ್ಟು ಹೆಚ್ಚುವರಿ ಮಳೆಯಾಗಿದೆ.

ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಜೂನ್ 1 ರಿಂದ ಸಾಮಾನ್ಯ ಮಳೆಯ ಪ್ರಮಾಣ 47.6 ಮಿಮೀಗೆ ಬದಲಾಗಿ ರಾಜ್ಯದಲ್ಲಿ 85.6 ಮಿಮೀ ಮಳೆಯಾಗಿದೆ. ದಕ್ಷಿಣ ಕನ್ನಡ, ಚಿಕ್ಕಮಗಳೂರು ಮತ್ತು ಕೊಡಗು ಹೊರತುಪಡಿಸಿ ಎಲ್ಲಾ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆ ದಾಖಲಾಗಿದೆ.

ದಕ್ಷಿಣ ಕನ್ನಡ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಮಾತ್ರ ಅನುಕ್ರಮವಾಗಿ ಶೇ 26, ಶೇ 3 ಮತ್ತು ಶೇ 30 ರಷ್ಟು ಕೊರತೆ ದಾಖಲಾಗಿದೆ. ಒಟ್ಟಾರೆಯಾಗಿ ಕರಾವಳಿ ಕರ್ನಾಟಕದಲ್ಲಿ ಶೇ 25ರಷ್ಟು ಅಧಿಕ ಮಳೆ ದಾಖಲಾಗಿದೆ. 155.6 ಮಿಮೀ ವಾಡಿಕೆ ಮಳೆಗೆ ವಿರುದ್ಧವಾಗಿ, ಈ ಪ್ರದೇಶದಲ್ಲಿ 192.4 ಮಿಮೀ ಮಳೆಯಾಗಿದೆ.

ಉತ್ತರ ಒಳನಾಡಿನಲ್ಲಿ ಶೇ 140 ರಷ್ಟು ಅಧಿಕ ಮಳೆ ದಾಖಲಾಗಿದೆ. ಈ ಪ್ರದೇಶದಲ್ಲಿ ವಾಡಿಕೆಯ 33 ಮಿಮೀ ಮಳೆಗೆ ಬದಲಾಗಿ 79.3 ಮಿಮೀ ಮಳೆಯಾಗಿದೆ. ದಕ್ಷಿಣ ಒಳನಾಡಿನಲ್ಲಿ ಶೇ 82 ರಷ್ಟು ಅಧಿಕ ಮಳೆ ದಾಖಲಾಗಿದೆ. ಇಲ್ಲಿ ವಾಡಿಕೆಯ 38.5 ಮಿಮೀಗೆ ಬದಲಾಗಿ 70.2 ಮಿಮೀ ಮಳೆಯಾಗಿದೆ.

ವಿಜಯಪುರದಲ್ಲಿ ಗರಿಷ್ಠ ಶೇ 329 ರಷ್ಟು ಹೆಚ್ಚು ಮಳೆಯಾಗಿದೆ. ನಂತರ ಬೆಂಗಳೂರು ಗ್ರಾಮಾಂತರದಲ್ಲಿ ಶೇ 272 ರಷ್ಟು ಅಧಿಕ ಮಳೆ ದಾಖಲಾಗಿದೆ. ರಾಮನಗರ ಮತ್ತು ವಿಜಯನಗರದಲ್ಲಿ ಶೇ 222ರಷ್ಟು ಅಧಿಕ ಮಳೆ ದಾಖಲಾಗಿದೆ. ಉಡುಪಿಯಲ್ಲಿ ಶೇ 5ರಷ್ಟು ಅಧಿಕ ಮಳೆ ದಾಖಲಾಗಿದೆ.

ಬೆಂಗಳೂರು ನಗರ ಪ್ರದೇಶದಲ್ಲಿ ಶೇ 145ರಷ್ಟು ಅಧಿಕ ಮಳೆ ದಾಖಲಾಗಿದೆ. ಜೂನ್ 1-10ರವರೆಗೆ ವಾಡಿಕೆಯ 37 ಮಿಮೀ ಮಳೆಗೆ ಬದಲಾಗಿ 90.6 ಮಿಮೀ ಮಳೆಯಾಗಿದೆ.

2023 ರಲ್ಲಿ ಜೂನ್ 1-14 ರ ಅವಧಿಯಲ್ಲಿ ಶೇ 66 ರಷ್ಟು ಮಳೆ ಕೊರತೆಯಾಗಿತ್ತು. ಈ ವರ್ಷ ಮುಂಗಾರು ಮಳೆ ಚೆನ್ನಾಗಿ ಸುರಿಯುತ್ತಿದೆ. ಆದರೆ, ಮೂರು ದಿನಗಳ ನಂತರ, ಮಳೆ ಕಡಿಮೆಯಾಗಬಹುದು ಎಂದು ಹವಾಮಾನ ಇಲಾಖೆ ತಜ್ಞರು ಸುಳಿವು ನೀಡಿದ್ದಾರೆ.

RELATED ARTICLES
- Advertisment -
Google search engine

Most Popular