Sunday, April 20, 2025
Google search engine

Homeರಾಜ್ಯಸುದ್ದಿಜಾಲವಿವಿಧ ಗ್ರಾಮಗಳಲ್ಲಿ 9.87 ಕೋಟಿ ಮೊತ್ತದ ಕಾಮಗಾರಿಗಳ ಅಡಿಗಲ್ಲು ಕಾರ್ಯಕ್ರಮ

ವಿವಿಧ ಗ್ರಾಮಗಳಲ್ಲಿ 9.87 ಕೋಟಿ ಮೊತ್ತದ ಕಾಮಗಾರಿಗಳ ಅಡಿಗಲ್ಲು ಕಾರ್ಯಕ್ರಮ

ಕೊಪ್ಪಳ : ಕೊಪ್ಪಳದ ಮಾನ್ಯ ಶಾಸಕರಾದ ಕೆ ರಾಘವೇಂದ್ರ ಹಿಟ್ನಾಳ ಅವರು ಅಳವಂಡಿ ಜಿ.ಪಂ ವ್ಯಾಪ್ತಿಯ ಕಂಪ್ಲಿ, ಅಳವಂಡಿ, ಕವಲೂರು, ಗುಡುಗೇರಿ,ಮುರ್ಲಾಪುರ, ಘಟ್ಟರಡ್ಡಿಹಾಳ, ಬೆಳಗಟ್ಟಿ, ಹಟ್ಟಿ, ಹೈದರ್ ನಗರ, ಕೇಸಲಾಪುರ ಹಾಗೂ ರಘುನಾಥನಹಳ್ಳಿ ಗ್ರಾಮಗಲ್ಲಿ ಅಂದಾಜು ಮೊತ್ತ 9.87 ಕೋಟಿ ಮೊತ್ತದಲ್ಲಿ ಸಿಸಿ ರಸ್ತೆ, ಚರಂಡಿ, ಶಾಲಾ ಕೊಠಡಿ ನಿರ್ಮಾಣ ಹಾಗೂ ಸ್ಮಾರ್ಟ್ ಕ್ಲಾಸ್ ಗಳ ನಿರ್ಮಾಣದ ಕಾಮಗಾರಿಗೆ ಅಡಿಗಲ್ಲು ನೆರೆವೇರಿಸಿದರು.

ನಂತರ ಮಾತನಾಡಿದ ಅವರು, ಅಳವಂಡಿ-ಬೆಟಗೇರಿ ಭಾಗದ ಬಹುದಿನಗಳ ಹೋರಾಟ ಆಗಿದ್ದ ಅಳವಂಡಿ-ಬೆಟಗೇರಿ ಏತ ನೀರಾವರಿ ಯೋಜನೆಯನ್ನು ಈ ಹಿಂದೆಯೇ ಮಂಜೂರು ಮಾಡಿಸಿ 88 ಕೋಟಿ ಅನುಧಾನವನ್ನು ಈ ನೀರಾವರಿ ಯೋಜನೆಗೆ ಮೀಸಲಿಟ್ಟೆದ್ದೆವು. ಇನ್ನೇನೂ ಕಾಮಗಾರಿ ಕೊನೆ ಹಂತದಲ್ಲಿದ್ದು ಲಿಫ್ಟ್ ಇರಿಗೇಷನ್ ನ ಪ್ರಾರಂಭ ಮಾಡಿ 8-10 ಸಾವಿರ ಎಕರೆ ನೀರಾವರಿ ಪ್ರದೇಶ ಮಾಡಲು ನಾವು ಕಂಕಣಬದ್ದರಾಗಿ ಶೀಘ್ರದಲ್ಲಿ ನೀರು ಹರಿಸಿಯೇ ಹರಿಸುತ್ತೇವೆ ಎಂಬ ವಿಸ್ವಾಸ ವ್ಯಕ್ತಪಡಿಸಿದರು. ಅಳವಂಡಿ-ಬೆಟಗೇರಿ ಹೋಬಳಿಯ ಅಚ್ಚುಕಟ್ಟು ಪ್ರದೇಶದಲ್ಲಿ ಬರುವ ಎಲ್ಲಾ ಬ್ರಿಡ್ಜ್ ಗಳ ಅಭಿವೃದ್ಧಿ ರಸ್ತೆಗಳ ಅಭಿವೃದ್ಧಿ, ಚೆಕ್ ಡ್ಯಾಮ್ ಗಳ ಅಭಿವೃದ್ಧಿಗೆ , ಕ್ಯಾನಲ್ ಗಳ ಅಭಿವೃದ್ಧಿಗೆ ಹೀಗಾಗಲೇ 350 ಕೋಟಿ ಮೊತ್ತದ ಡಿ ಪಿ ಆರ್ ನ್ನು ಮಾಡಿಸಿದ್ದೇನೆ. ಶೀಘ್ರದಲ್ಲಿ ಅನುದಾನ ಬಿಡುಗಡೆ ಮಾಡಿಸಿ ಈ ಭಾಗದ ಅಭಿವೃದ್ಧಿ ಕೆಲಸಗಳ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುತ್ತೇವೆ ಎಂದರು.

100 ಸ್ಮಾರ್ಟ್ ಕ್ಲಾಸ್ ನಿರ್ಮಾಣ : ವಿದ್ಯಾರ್ಥಿಗಳಿಗೆ ಅನುಕೂಲಕ್ಕಾಗಿ ಕ್ಷೇತ್ರದಲ್ಲಿ 100 ಸ್ಮಾರ್ಟ್ ಕ್ಲಾಸ್ ಗಳ ನಿರ್ಮಾಣ ಮಾಡಲಿದ್ದೇವೆ ಮತ್ತೆ ಮುಂದೆ ಮಾರ್ಚ್ ನಂತರ ಮತ್ತೆ 100 ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ ನಿರ್ಮಾಣ ಮಾಡಲಾಗುವುದುಎಂದರು.

ನುಡಿದಂತೆ ನಡೆದಿದ್ದೇವೆ : ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಒಳ್ಳೆಯ ಜನಪರ ಆಡಳಿತ ನಡೆಸುತ್ತಿದೆ. ಚುನಾವಣೆ ಪೂರ್ವದಲ್ಲಿ ಘೋಷಣೆ ಮಾಡಿದ್ದ ಅನ್ನಭಾಗ, ಗೃಹಜ್ಯೋತಿ, ಗೃಹಲಕ್ಷ್ಮಿ, ಶಕ್ತಿ ಯೋಜನೆ ಹಾಗೂ ಯುವನಿಧಿ ಎಂಬ ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದು ನುಡಿದಂತೆ ನಡೆದಿದ್ದೇವೆ ಎಂದರು.
ತುಂತುರು ನೀರಾವರಿ ಘಟಕ ವಿತರಣೆ: ಅಳವಂಡಿ ಗ್ರಾಮದಲ್ಲಿ ಕೃಷಿ ಸಿಂಚಾಯಿ ಯೋಜನೆಡಿಯಲ್ಲಿ ಆಯ್ಕೆಗೊಂಡ ರೈತರಿಗೆ ಫೈಪ್ ಮತ್ತು ಸ್ಪಿಂಕ್ಲರ್ ಗಳನ್ನು ವಿತರಣೆ ಮಾಡಿದರು.

ಈ ಸಂಧರ್ಭದಲ್ಲಿ ಮಾಜಿ ಜಿ. ಪಂ ಅಧ್ಯಕ್ಷರಾದ ಕೆ ರಾಜಶೇಖರ್ ಹಿಟ್ನಾಳ, ಮುಖಂಡರುಗಳಾದ ಭರಮಪ್ಪ ಹಟ್ಟಿ, ವೆಂಕನಗೌಡ ಹಿರೇಗೌಡ್ರು,ಬಾಲಚಂದ್ರ ಮುನಿರಾಬಾದ್, ಪ್ರಸನ್ನ ಗಡಾದ,ಗಾಳೆಪ್ಪ ಪೂಜಾರ್, ತೋಟಪ್ಪ ಸಿಂಟ್ರ,ಪ್ರಕಾಶ್ ಸ್ವಾಮಿ ಇನಾಮ್ದಾರ್, ಯಲ್ಲಪ್ಪ ಜಿರ್, ಗುರುಬಸವರಾಜ್ ಹಳ್ಳಿಕೇರಿ, ಅನ್ವರ್ ಗಡಾದ, ಮಹಾಂತೇಶ್ ಕವಲೂರು ,ಹೊನ್ನಕೆರಪ್ಪ ಕವಲೂರು, ನಜಿರ್ ಅಳವಂಡಿ, ಭೀಮಣ್ಣ ಬೋಚನಹಳ್ಳಿ, ಪರಶುರಾಮ್ ಮೆಕ್ಕಿ, ಜಿಲ್ಲಾ ಕೆಡಿಪಿ ಸದಸ್ಯ ಕುರ್ಗೋಡ್ ರವಿ,ತಹಸೀಲ್ದಾರ್ ವಿಠ್ಠಲ್ ಚೌಗಲೇ, ತಾಲೂಕು ಪಂಚಾಯತ್ ಇಓ ದುಂಡೇಶ್ ತುರಾದಿ, ಅಳವಂಡಿ ಪಿಎಸ್ಐ ನಾಗಪ್ಪ, ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಅಕ್ಬರ್ ಪಲ್ಟಾನ ಅವರು ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular