ಮೈಸೂರು: ಕೇರಗಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ೨೦೨೩-೨೪ನೇ ಸಾಲಿನಲ್ಲಿ ೬೩೧ ಜನ ಸದಸ್ಯರಿಗೆ ೮,೯೫,೪೩,೬೨೦/- ರೂ. ಸಾಲ ವಿತರಿಸಲಾಗಿದೆಎಂದು ಸಂಘದ ಅಧ್ಯಕ್ಷ ಕಾಳೇಗೌಡ ತಿಳಿಸಿದರು.
ಮೈಸೂರು ತಾಲ್ಲೂಕು ಕೇರಗಹಳ್ಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಶ್ರೀ ಹೊಂಬಾಳಮ್ಮ ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ನಡೆದ ೨೦೨೩-೨೪ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ನಮ್ಮ ಸಂಘಕ್ಕೆ ೯ ಗ್ರಾಮಗಳಾದ ಕೇರ್ಗಳ್ಳಿ, ಬಡಗಲಹುಂಡಿ, ನಂಜರಾಜಯ್ಯನಹುಂಡಿ, ರಾಮನಹುಂಡಿ, ಕೆ. ಸಾಲುಂಡಿ, ಮೂಗನಹುಂಡಿ, ನಗರ್ತಹಳ್ಳಿ, ಯಡಹಳ್ಳಿ, ಕೆಂಚಲಗೂಡಿನ ೧೦೫೦ ಸದಸ್ಯರಿದ್ದುರೈತರಿಗೆಕೊಟ್ಟ ಸಾಲದಲ್ಲಿ ಶೇ. ೯೭% ಸಾಲ ವಸೂಲಾಗಿದೆ. ಬ್ಯಾಂಕಿಗೆ ಶೇ. ೧೦೦ ಸಾಲವನ್ನು ಸಂಘದಿಂದಕಟ್ಟಿದ್ದೇವೆ. ಯಡಹಳ್ಳಿಯ ಮಹಿಳಾ ಸಂಘಕ್ಕೆ ಶೇ. ೧೨% ಬಡ್ಡಿದರದಲ್ಲಿ ೧೦ ಲಕ್ಷರೂ. ಸಾಲ ನೀಡಿದ್ದೇವೆ. ಇನ್ನೂ ಹೆಚ್ಚಿನ ಮಹಿಳಾ ಸಂಘಗಳು ಸಾಲ ಕೇಳಿದರೆ ನಾವು ಕೊಡಲು ಸಿದ್ಧರಿದ್ದೇವೆ.
ನಮ್ಮ ಸಹಕಾರ ಸಂಘಕ್ಕೆ ೨೦೨೩-೨೪ನೇ ಸಾಲಿನಲ್ಲಿ ೧೧,೦೨,೬೯೫/- ರೂ. ಆದಾಯ ಬಂದಿದೆ. ೪೦೦ ಜನಸದಸ್ಯರಿಗೆ ಯಶಸ್ವಿನಿ ಯೋಜನೆ ನೋಂದಾವಣೆಯಾಗಿದೆ. ಉಳಿದ ಸದಸ್ಯರು ಸಹ ಯಶಸ್ವಿನಿ ನೋಂದಾವಣಿ ಮಾಡಿಸಿ, ಸರ್ಕಾರದ ಸವಲತ್ತುಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದ ಅವರು ಪ್ರತಿ ವರ್ಷ ಎಸ್‌ಎಸ್‌ಎಲ್‌ಸಿ ಯಲ್ಲಿ ಹೆಚ್ಚು ಅಂಕ ಪಡೆದ ಸದಸ್ಯರ ೧೮ ಜನ ವಿದ್ಯಾರ್ಥಿಗಳಿಗೆ ನಗದು ಪ್ರೋತ್ಸಾಹಧನ ನೀಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಸಂಘದಆವರಣದಲ್ಲಿಕ್ರೋಢೀಕೃತ ಬಂಡವಾಳದಿಂದ ನೂತನಕಟ್ಟಡ ನಿರ್ಮಾಣ ಮಾಡಲುಯೋಜನೆರೂಪಿಸಲಾಗುತ್ತಿದೆ ಹಾಗೂ ಸದಸ್ಯರಿಗೆಉಚಿತಆರೋಗ್ಯತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಸಭೆಯಲ್ಲಿ ಸಂಘದ ಮಾಜಿಅಧ್ಯಕ್ಷ ಹಾಗೂ ತಾ.ಪಂ. ಮಾಜಿ ಸಸ್ಯಎಂ.ಕೆಂಚಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಕೆ. ಪ್ರಭುಸ್ವಾಮಿ, ಸಂಘದಉಪಾಧ್ಯಕ್ಷಚಿಕ್ಕತಿಮ್ಮಯ್ಯ, ನಿರ್ದೇಶಕರಾದ ಸಿದ್ದೇಗೌಡ, ಚಿಕ್ಕೇಣಮ್ಮ, ಪಚ್ಚೇಗೌಡ, ಎಂ. ಮಹಾದೇವು, ಚಿಕ್ಕಣ್ಣೇಗೌಡ, ಹುಚ್ಚಮ್ಮ, ಬಿಳಿಗಿರಿರಂಗೇಗೌಡ, ಮಹಾಲಿಂಗೇಗೌಡ, ರೇಣುಕಮ್ಮ, ಮೇಲ್ವಿಚಾರಕ ವಿ. ಕೃಷ್ಣ, ಮುಖ್ಯಕಾರ್ಯನಿರ್ವಾಹಕ ಮೂಗಶಾಂತೇಗೌಡ, ಎಂ. ಮಹಾದೇವು, ಮಲ್ಲಯ್ಯಹಾಜರಿದ್ದರು.