ಎಡತೊರೆ ಮಹೇಶ್
ಎಚ್.ಡಿ.ಕೋಟೆ: ಜಪಾನ್ ನಲ್ಲಿ ಶೇ 90 ರಷ್ಟು ಕೌಶಲಾಭಿವೃದ್ಧಿ ಹೊಂದಿರುವವರು ಇದ್ದಾರೆ, ಆದರೆ ಭಾರತದಲ್ಲಿ ಶೇ 90 ರಷ್ಟು ಮಂದಿ ಕೌಶಲಾಭಿವೃದ್ಧಿಯಿಂದ ವಂಚಿತರಾಗಿದ್ದಾರೆ ಎಂದು ಜನಶಿಕ್ಷಣ ಸಂಸ್ಥಾನದ ನಿರ್ದೇಶಕ ರಮೇಶ್ ಬೇಸರ ವ್ಯಕ್ತಪಡಿಸಿದರು.
ತಾಲ್ಲೂಕಿನ ಮಾಗುಡಿಲು ಗ್ರಾಮದಲ್ಲಿ ಶುಕ್ರವಾರ ಮಧ್ಯಾಹ್ನ 1 ಗಂಟೆ ಸಮಯದಲ್ಲಿ ಮೈಸೂರಿನ ಜೆಎಸ್ ಎಸ್ ಜನ ಶಿಕ್ಷಣ ಸಂಸ್ಥೆ ಮತ್ತು ಭಾರತೀಯ ಕೌಶಲಾಭಿವೃದ್ಧಿ ಮತ್ತು ಉದ್ಯಮ ಶೀಲತೆ ಅಭಿವೃದ್ಧಿ ಯೋಜನೆಯ ವತಿಯಿಂದ ವಿವೇಕಾನಂದರ ೧೬೧ ಜನ್ಮ ದಿನಾಚರಣೆ ಅಂಗವಾಗಿ ರಾಷ್ಟ್ರೀಯ ಯುವ ದಿನ ಮತ್ತು ಹೊಲಿಗೆ ತರಭೇತಿ ಶಿಬಿರದ ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.
ಕೇಂದ್ರ ಸರ್ಕಾರವು ದೇಶದಲ್ಲಿ ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ಸುಮಾರು 40 ಕೋಟಿ ಮಂದಿಗೆ ಕೌಶಲ್ಯಾಭಿವೃದ್ಧಿ ತರಬೇತಿಯ ಗುರಿ ಹೊಂದಲಾಗಿದೆ ಈ ಹಿನ್ನಲೆಯಲ್ಲಿ ದೇಶದಲ್ಲಿ 304 ಜನಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ. ರಾಜ್ಯದಲ್ಲೂ 12 ಸಂಸ್ಥೆಗಳಿದ್ದು, ಮೈಸೂರು ಮತ್ತು ಬೆಂಗಳೂರಿನ ಸಂಸ್ಥೆಗಳನ್ನು ಜೆಎಸ್ ಎಸ್ ವಿದ್ಯಾಪೀಠವು ವಹಿಸಿಕೊಂಡಿದೆ ಎಂದು ತಿಳಿಸಿದರು.
ದೇಶವು ಜನಸಂಖ್ಯೆಯಲ್ಲಿ ಮೊದಲ ಸ್ಥಾನಕ್ಕೆ ತಲುಪಿದೆ, ಹೆಚ್ಚಿನ ಜನಸಂಖ್ಯೆಯುಳ್ಳ ಭಾರತದಲ್ಲಿ ಆರ್ಥಿಕವಾಗಿ ಸದೃಡರಾಗಲು ಕೌಶಲ್ಯಾಭಿವೃದ್ಧಿ ತರಭೇತಿಗಳು ಅಗತ್ಯವಾಗಿದೆ ಎಂದರು.
ಆರ್ಥಿಕವಾಗಿ ಸದೃಢರಾಗಲು 57 ಸಾವಿರ ಮಂದಿಗೆ ವಿವಿಧ ತರಬೇತಿಯನ್ನು ಜೆಎಸ್ ಎಸ್ ವತಿಯಿಂದ ನೀಡಲಾಗಿದೆ. ವರ್ಷಕ್ಕೆ 90 ಬ್ಯಾಚ್ ನಿಂದಾಗಿ 1800 ಮಂದಿಗೆ ಕೌಶಲ್ಯ ತರಭೇತಿಯನ್ನು ನೀಡಲಾಗುತ್ತಿದೆ ಎಂದರು.
ಕೌಶಲ್ಯ ತರಭೇತಿ ಪಡೆದವರಿಗೆ ಮುದ್ರಾ ಯೋಜನೆಯಡಿ ಬ್ಯಾಂಕ್ ಗಳಲ್ಲಿ ಹಲವು ಸಾಲ ಸೌಲಭ್ಯಗಳು ದೊರೆಯುತ್ತವೆ ಎಂದರು.
ಜನಶಿಕ್ಷಣ ಯೋಜನೆಯ ಸೌಭಾಗ್ಯ, ಸಹಾಯಕ ಕಾಯ್ರಕರಮ ಅಧಿಕಾರಿ ಸುರೇಶ್, ಹಾಲಿನ ಡೈರಿ ಅಧ್ಯಕ್ಷೆ ಅಮೃತ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಿ ರಮೇಶ್, ಮಾಜಿ ಸದಸ್ಯೆ ಯಶೋಧಮ್ಮ , ಸದಸ್ಯ ಎಂ.ಎಸ್. ರವಿ, ಗಂಗಾಧರಗೌಡ, ನಾಗೇಂದ್ರ, ಎಂ.ಎಸ್. ನಾಗರಾಜು, ಜವರಯ್ಯ, ಸಣ್ಣಗಂಡಯ್ಯ, ಶಿವಪ್ಪ, ಎಸ್.ಡಿ.ಎಂ.ಸಿ ಅಧ್ಯಕ್ಷ ರವಿ, ಶಾಲಾ ಮುಖ್ಯ ಶಿಕ್ಷಕ ಚಂದ್ರು, ಶೀಲಾ, ಪ್ರೇಮ, ಸಣ್ಣಕೂಸಮ್ಮ, ತರಭೇತಿದಾರರಾದ ಲಕ್ಷ್ಮೀ ಇದ್ದರು.