Friday, April 4, 2025
Google search engine

Homeರಾಜ್ಯದೇಶದಲ್ಲಿ ೯೬.೮೮ ಕೋಟಿ ಮತದಾರರು : ಚುನಾವಣಾ ಆಯೋಗ ಘೋಷಣೆ

ದೇಶದಲ್ಲಿ ೯೬.೮೮ ಕೋಟಿ ಮತದಾರರು : ಚುನಾವಣಾ ಆಯೋಗ ಘೋಷಣೆ

ಹೊಸದಿಲ್ಲಿ : ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಲು ೯೬.೮೮ ಕೋಟಿ ಮತದಾರರು ಅರ್ಹರಾಗಿದ್ದಾರೆ ಎಂದು ಚುನಾವಣಾ ಆಯೋಗ ಘೋಷಿಸಿದೆ. ೧೮ ರಿಂದ ೨೯ ವರ್ಷದೊಳಗಿನ ಎರಡು ಕೋಟಿಗೂ ಹೆಚ್ಚು ಯುವ ಮತದಾರರನ್ನು ಮತದಾರರ ಪಟ್ಟಿಗೆ ಸೇರಿಸಲಾಗಿದೆ. ೨೦೧೯ರ ಲೋಕಸಭಾ ಚುನಾವಣೆ ಬಳಿಕ ನೋಂದಾಯಿತ ಮತದಾರರಲ್ಲಿ ಶೇ,೬ ರಷ್ಟು ಹೆಚ್ಚಳವಾಗಿರುವುದಾಗಿ ಆಯೋಗ ಹೇಳಿಕೆಯಲ್ಲಿ ತಿಳಿಸಿದೆ.

ಮುಂಬರುವ ಸಾರ್ವತ್ರಿಕ ಚುನಾವಣೆಗಳಿಗೆ ಮತ ಚಲಾಯಿಸಲು ೯೬.೮೮ ಕೋಟಿ ಜನರು ನೋಂದಾಯಿಸಿಕೊಂಡಿದ್ದಾರೆ. ಮತದಾರರ ಸಂಖ್ಯೆಯ ಪೈಕಿ ಇದು ವಿಶ್ವದಲ್ಲೇ ಅತಿದೊಡ್ಡ ಸಂಖ್ಯೆಯಾಗಿದೆ ಎಂದು ಚುನಾವಣಾ ಆಯೋಗ ಟ್ವೀಟ್ ಮಾಡಿದೆ. ಇದೇ ವೇಳೆ ಲಿಂಗಾನುಪಾತವು ೨೦೨೩ರಲ್ಲಿ ೯೪೦ ಇತ್ತು. ೨೦೨೪ರಲ್ಲಿ ೯೪೮ಕ್ಕೆ ಏರಿಕೆಯಾಗಿರುವುದಾಗಿಯೂ ತಿಳಿಸಿದೆ.

ಕರಡು ಪಟ್ಟಿ ಸಿದ್ದಪಡಿಸುತ್ತಿದ್ದ(ಆಡಿಚಿಜಿಣ) ವೇಳೆ ೯೫,೭೩,೫೨,೦೭೭ ಇದ್ದ ಮತದಾರರ ಸಂಖ್ಯೆಯು, ಫೆ.೮ರ ಅಂತಿಮ ಪಟ್ಟಿಯ ವೇಳೆ ೯೬,೮೮,೨೧,೯೨೬ ಒಟ್ಟು ಮತದಾರರು ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ ೪೯,೭೨,೩೧,೯೯೪ ಮಂದಿ ಪುರುಷ ಮತದಾರರು, ೪೭,೧೫,೪೧,೮೮೮ ಮಂದಿ ಮಹಿಳೆಯರಿದ್ದಾರೆ ಎಂದು ಅಂಕಿ-ಸಂಖ್ಯೆಗಳನ್ನು ಆಯೋಗ ಪ್ರಕಟಿಸಿದೆ.

RELATED ARTICLES
- Advertisment -
Google search engine

Most Popular