ಹುಣಸೂರು: ಪ್ರತಿ ವರ್ಷದಂತೆ ಈ ಭಾರಿಯೂ ಅದ್ದೂರಿ ವಾರ್ಷಿಕೋತ್ಸವ ಮತ್ತು ಜಾತ್ರಾ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಶನೈಶ್ಚರ ಸೇವಾ ಸಮಿತಿ ಅಧ್ಯಕ್ಷೆ ಕಲಾವತಿ ಬಸಪ್ಪ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನಗರದ ಕಲ್ಕುಣಿಕೆ ರಂಗನಾಥ ಬಡಾವಣೆಯಲ್ಲಿ ನೆಲೆಗೊಂಡಿರುವ, ಶ್ರೀ ಶನೈಶ್ಚರ ಸ್ವಾಮಿಯ 9 ನೇ ವಾರ್ಷಿಕೋತ್ಸವ ದಿನಾಂಕ 09.03.2024 ರ ಶನಿವಾರ ಬೆಳಿಗ್ಗೆ 5.30.ರಿಂದ ಪೂಜಾಕೈಕಂರ್ಯ ನಡೆಯಲಿದ್ದು, 6 ಗಂಟೆಗೆ ಶನಿಶಾಂತಿ ಹೋಮ, 8. 30 ಕ್ಕೆ ಉತ್ಸವ ಮೂರ್ತಿ ಮೆರವಣಿಗೆ, 11 ಕ್ಕೆ ಕಲಶಾಭಿಷೇಕ ನಂತರ ಮಹಾಮಂಗಳಾರತಿ ನಡೆಯಲಿದೆ ಎಂದು ತಿಳಿಸಿದ್ದಾರೆ.
ಮಧ್ಯಾಹ್ನ 12 ಗಂಟೆಯಿಂದ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಯನ್ನು ಏರ್ಪಡಿಸಲಾಗಿದೆ. ಭಕ್ತಾಧಿಗಳು, ಅಕ್ಕಪಕ್ಕದ ಗ್ರಾಮಸ್ಥರು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕಾಗಿ ಮನವಿಮಾಡಿದ್ದಾರೆ.
ಬೆಳಿಗ್ಗೆ 6 ರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಬೆಳಿಗ್ಗೆ 9 ಗಂಟೆಗೆ ಶ್ರೀ ಮ್ಯೂಜಿಕ್ ತಂಡದವರಿಂದ ಭಕ್ತಿಗೀತೆಗಳು, 11 ಗಂಟೆಗೆ ಮಲ್ಲಿಗೆರೆ ತಿಮ್ಮರಾಜು ಮತ್ತು ತಂಡದವರಿಂದ ಜನಪದಗೀತೆ, ಹಾಡುಗಾರಿಕೆ ಇರುತ್ತದೆ.
ವಾರ್ಷಿಕೋತ್ಸವ ದಿನದಂದು ಶಾಸಕರಾದ ಜಿ.ಡಿ.ಹರೀಶ್ ಗೌಡ , ಮಾಜಿ ಶಾಸಕ ಹೆಚ್.ಪಿ.ಮಂಜುನಾಥ್ ಭಾಗವಹಿಸಲಿದ್ದಾರೆ ಮತ್ತು ತಾಲೂಕಿನ ಗಾವಡಗೆರೆ ಮಠದ ಶ್ರೀ ನಟರಾಜ ಸ್ವಾಮಿ ಮತ್ತು ಮಾದಳ್ಳಿ ಮಠದ ಶ್ರೀ ಸದಾಶಿವಸಾಂಬ ಸ್ವಾಮಿ ಬರುವ ಭಕ್ತಾದಿಗಳಿಗೆ ಆರ್ಶೀವಚನ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ..