Saturday, March 21, 2026
Google search engine

Homeರಾಜ್ಯಸುದ್ದಿಜಾಲಮುಂದಿನ ಪೀಳಿಗೆಗಾಗಿ ಗುಬ್ಬಚ್ಚಿ ಉಳಿಸೋಣ : ಮೃಗಾಲಯ ಮಾಜಿ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ

ಮುಂದಿನ ಪೀಳಿಗೆಗಾಗಿ ಗುಬ್ಬಚ್ಚಿ ಉಳಿಸೋಣ : ಮೃಗಾಲಯ ಮಾಜಿ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ

ಮೈಸೂರು : ಇತ್ತೀಚಿನ ದಿನಗಳಲ್ಲಿ ಗುಬ್ಬಚ್ಚಿ ಅಳಿವಿನಂಚಿನಲ್ಲಿದೆ. ಗುಬ್ಬಚ್ಚಿ ಉಳಿದರೆ ಉತ್ತಮ ಪರಿಸರ ನೋಡಲು ಸಾಧ್ಯ. ನಾವು ಗುಬ್ಬಚ್ಚಿಗಳೊಂದಿಗೆ ಬೆಳೆದವರು, ಪರಿಸರ ಸಮತೋಲನ ಬಹಳ ಮುಖ್ಯ, ಗುಬ್ಬಚ್ಚಿ ಮಾತ್ರವಲ್ಲ ಎಲ್ಲ ಪಕ್ಷಿಗಳು ಕೂಡ ಅಳಿವಿನಂಚಿನಲ್ಲಿದೆ. ಆದ್ದರಿಂದ ಮುಂದಿನ ಪೀಳಿಗೆಗೂ ಗುಬ್ಬಿ ಸಂತತಿ ಉಳಿಸಿ ಎಂದು ಮೃಗಾಲಯ ಮಾಜಿ ಅಧ್ಯಕ್ಷರಾದ ಎಲ್.ಆರ್.ಮಹದೇವಸ್ವಾಮಿ ಸಲಹೆ ನೀಡಿದರು.

ನಗರದ ಮಹಾರಾಜ ಮೈದಾನದ ಮುಂಭಾಗ ಕೆಎಂಪಿಕೆ ಟ್ರಸ್ಟ್ ವತಿಯಿಂದ ವಿಶ್ವ ಗುಬ್ಬಚ್ಚಿ ದಿನಾಚರಣೆ ಅಂಗವಾಗಿ ಗುಬ್ಬಚ್ಚಿ ಹಬ್ಬ ಆಚರಿಸಲಾಯಿತು. ಈ ವೇಳೆ ಪಕ್ಷಿಗಳಿಗೆ ನೀರಿನ ಬೌಲು ಅಳವಡಿಸಿ ನೀರು ಹಾಗೂ ಆಹಾರ ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಇಂದು ಕೃಷಿಗೆ ಕ್ರಿಮಿನಾಶಕಗಳನ್ನು ಬಳಸಲಾಗುತ್ತಿದೆ. ಇದು ವಿಷಕಾರಿಯಾಗಿದ್ದು, ಗುಬ್ಬಿಗಳು ಸಾವನಪ್ಪುತ್ತಿದೆ. ಗುಬ್ಬಚ್ಚಿ ಉಳಿಸಿದರೆ ಪರಿಸರದ ಉಳಿವು. ಮನುಷ್ಯರು ನಾವು ಮಾತ್ರ ಬದುಕದೆ, ಎಲ್ಲಾ ಜೀವಿಗಳು ಬದುಕಲು ಅವಕಾಶ ಮಾಡಿಕೊಡಬೇಕೆಂದು ಹೇಳಿದರು.

ಮುಂದುವರೆದು, ಸುಮಾರು 25ಕ್ಕೂ ಅಧಿಕ ಗುಬ್ಬಿಗಳ ಪ್ರಬೇಧವಿದ್ದು, ಆದರೆ ಗುಬ್ಬಿ ಸಂತತಿ ಇಂದು ಅಳಿವಿನಂಚಿನಲ್ಲಿದೆ. ಮನುಷ್ಯನಿಂದ ಗುಬ್ಬಿಗೆ ಕಂಟಕ ಎದುರಾಗಿದೆ ಎಂದರಲ್ಲದೆ, ವಾಸಿಸಲು ಪೂರಕ ವಾತಾವರಣ ಇಲ್ಲದಿರುವುದು ಗುಬ್ಬಿ ಸಂತತಿ ಇಳಿಮುಖವಾಗಲು ಪ್ರಮುಖ ಕಾರಣ. ಗುಬ್ಬಿಯ ಸಂಕುಲವನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸುವುದು ನಮ್ಮ ಕರ್ತವ್ಯ ಎಂದು ಹೇಳಿದರು.

ಇನ್ನೂ ಜನಸಂಖ್ಯೆಗಿಂತ ವಾಹನಸಂದ್ರತೆ ನಿಯಂತ್ರಣವಾಗದೇ ಹೆಚ್ಚಾಗಿರುವುದರಿಂದ ಪರಿಸರ ವಿಕೋಪಕ್ಕೆ ತೆರಳಿ ಸಣ್ಣಪುಟ್ಟ ಪ್ರಾಣಿಪಕ್ಷಿಗಳ ಸಂಕುಲ ನಾಶವಾಗುತ್ತಿದೆ, ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರೀಕನ ಹೊಣೆ, ಹವಮಾನ ಮಾಸಗಳ ಬದಲಾವಣೆ ಮುನ್ಸೂಚನೆ ಕೊಡುವುದು ಪ್ರಾಣಿಪಕ್ಷಿಗಳೇ ಮೊದಲು ಹಾಗಾಗಿ ನಾಗರೀಕತೆಯೊಂದಿಗೆ ಉತ್ತಮ ಒಡನಾಟದಲ್ಲೆ ಜೀವಿಸುವ ಪ್ರಾಣಿಪಕ್ಷಿಗಳಿಗೆ ಇಂತಹ ರಣಬಿಸಿಲಿನಲ್ಲಿ ಒಂದಷ್ಟು ನೀರು ಆಹಾರ ನೀಡುವ ಕಾರ್ಯಕ್ಕೆ ಸಾರ್ವಜನಿಕರು ಮುಂದಾಗಬೇಕಿದೆ ಎಂದರು.

ವಿವಿಧ ಘೋಷ ವಾಕ್ಯದ ಫಲಕಗಳ ಪ್ರದರ್ಶಿಸಿ ಪ್ರಕೃತಿ ಸಮತೋಲನಕ್ಕಾಗಿ ಗುಬ್ಬಚ್ಚಿಗಳನ್ನು ಉಳಿಸೋಣ, ಬೇಸಿಗೆಯ ಬಿಸಿಲಿನ ತಾಪದಿಂದ ಪ್ರಾಣಿ ಪಕ್ಷಿಗಳನ್ನು ರಕ್ಷಿಸೋಣ, ಅಳಿದು ಹೋಗುತ್ತಿರುವ ಗುಬ್ಬಚ್ಚಿ ಸಂಕುಲಗಳ ಉಳಿವಿಗಾಗಿ ಜನಜಾಗೃತಿ ಮೂಡಿಸೋಣ ನಶಿಸಿ ಹೋಗುತ್ತಿರುವ ಗುಬ್ಬಚ್ಚಿ ಸಂಕುಲವನ್ನು ಸಂರಕ್ಷಿಸೋಣ, ಎಂಬ ಘೋಷವಾಕ್ಯ ನಾಮಫಲಕದ ಮೂಲಕ ಪಕ್ಷಿಗಳ ಸಂರಕ್ಷಣೆಯ ಸಂದೇಶ ಸಾರಿದರು.

ಇದೇ ಸಂದರ್ಭದಲ್ಲಿ ಮೂಢ ಮಾಜಿ ಸದಸ್ಯರಾದ ಲಕ್ಷ್ಮೀದೇವಿ, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರಾದ ರೇಣುಕಾ ರಾಜ್, ಮಾಜಿ ನಗರ ಪಾಲಿಕಾ ಸದಸ್ಯರಾದ ಜಗದೀಶ್, ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ನಿರೂಪಕ ಅಜಯ್ ಶಾಸ್ತ್ರಿ, ಎಸ್.ಎನ್.ರಾಜೇಶ್, ಬೈರತಿ ಲಿಂಗರಾಜು, ಚಕ್ರಪಾಣಿ, ಸುಚಿಂದ್ರ ಹಾಗೂ ಇನ್ನಿತರರು ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular