Saturday, April 19, 2025
Google search engine

Homeರಾಜ್ಯಕುಲಪತಿಗಳಿಂದ ಅತಿಥಿ ಉಪನ್ಯಾಸಕರ ಮೇಲೆ ದರ್ಪದ ಆರೋಪ: ಅತಿಥಿ ಉಪನ್ಯಾಸಕರ ಪ್ರತಿಭಟನೆ

ಕುಲಪತಿಗಳಿಂದ ಅತಿಥಿ ಉಪನ್ಯಾಸಕರ ಮೇಲೆ ದರ್ಪದ ಆರೋಪ: ಅತಿಥಿ ಉಪನ್ಯಾಸಕರ ಪ್ರತಿಭಟನೆ

ಮಂಡ್ಯ: ಕುಲಪತಿಗಳಿಂದ ಅತಿಥಿ ಉಪನ್ಯಾಸಕರ ಮೇಲೆ ದರ್ಪ ತೋರಿಸುತ್ತಿದ್ದಾರೆ ಎಂದು ಆರೋಪಿಸಿ ಹಾಗೂ ಗೌರವಧನ ಬಿಡುಗಡೆಗೆ ಆಗ್ರಹಿಸಿ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರು ಮಂಡ್ಯದ ವಿವಿ ಎದುರು ಪ್ರತಿಭಟನೆ ನಡೆಸಿದ್ದಾರೆ.

ಅತಿಥಿ ಉಪನ್ಯಾಸಕರನ್ನು ಸರ್ಕಾರ ಸಂಪೂರ್ಣವಾಗಿ ಕಡೆಗಣಿಸಿದೆ. ಅತಿಥಿ ಉಪನ್ಯಾಸಕರು ಆರ್ಥಿಕ ಸಂಕಷ್ಟಗಳಿಗೆ ಒಳಗಾಗಿದ್ದಾರೆ. ಆದರೆ ಪ್ರಸ್ತುತ ಶೈಕ್ಷಣಿಕ ಸಾಲಿನ 3 ತಿಂಗಳ ಗೌರವಧನ ವೇತನ ಪಾವತಿ ಮಾಡಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ಪರೀಕ್ಷೆ ಕಾರ್ಯವನ್ನು ಬಹಿಷ್ಕಾರ ಮಾಡುವ ಎಚ್ಚರಿಕೆಯನ್ನು ನೀಡಿದ್ದಾರೆ.

ಕುಲಪತಿಗಳಿಗೂ ಸಹ ಮನವಿ ಸಲ್ಲಿಸಿದ್ದೇವೆ. ಆದರೂ ಸಹ ನಮ್ಮನ್ನು ಕಡೆಗಣಿಸಿದ್ದಾರೆ. ಬೆಲೆ ಏರಿಕೆಯಲ್ಲಿ ಕುಟುಂಬ ನಿರ್ವಹಣೆಗೂ ಪರದಾಡುವಂತಾಗಿದೆ. ಆದ್ದರಿಂದ ಕೂಡಲೇ ಗೌರವಧನದ ವೇತನ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.

ಪರೀಕ್ಷಾ ಕಾರ್ಯಕ್ಕೆ ಬಂದರೆ ಕೆಲಸ ಮಾಡುವವರು ಒಳಗೆ ಬನ್ನಿ ಉಳಿದವರು ಹೊರಗೆ ಹೋಗಿ ಅಂತ ಉಡಾಫೆ ಉತ್ತರ ಕೊಡುತ್ತಾರೆ. ಅಧಿಕಾರ ದರ್ಪವನ್ನು ತೋರುತ್ತಿದ್ದಾರೆ. ಅತ್ಯಂತ ಕೀಳು ಮಟ್ಟದಲ್ಲಿ ಅಧ್ಯಾಪಕರನ್ನು ನೋಡ್ತಿದ್ದಾರೆ ಎಂದು ಆರೋಪಿಸಿದರು.

ಮೋಸ ವಂಚನೆ ತಡೆಗಟ್ಟುವ ಕೆಲಸವನ್ನು ಶಾಸಕರು-ಸಚಿವರು ಮಾಡಬೇಕು. ಇಲ್ಲದಿದ್ದರೆ ಉಗ್ರಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

RELATED ARTICLES
- Advertisment -
Google search engine

Most Popular