Monday, April 21, 2025
Google search engine

Homeಸ್ಥಳೀಯಅನುರಾಗ್ ಬಸವರಾಜ್ ಛಾಯಾಚಿತ್ರಗಳಿಗೆ ೧೪ ಅಂತಾರಾಷ್ಟ್ರೀಯ ಪದಕ

ಅನುರಾಗ್ ಬಸವರಾಜ್ ಛಾಯಾಚಿತ್ರಗಳಿಗೆ ೧೪ ಅಂತಾರಾಷ್ಟ್ರೀಯ ಪದಕ

ಮೈಸೂರಿನ ಪತ್ರಿಕಾ ಛಾಯಾಗ್ರಾಹಕ ಅನುರಾಗ್ ಬಸವರಾಜ್ (ಎಂ.ಎಸ್. ಬಸವಣ್ಣ) ಅವರ ಛಾಯಾಚಿತ್ರಗಳಿಗೆ ಫೋಟೋಗ್ರಫಿ ಸೊಸೈಟಿ ಆಫ್ ಅಮೆರಿಕಾ ಸಂಸ್ಥೆಯ ಎರಡು ಚಿನ್ನದ ಪದಕ ಸೇರಿದಂತೆ ಒಟ್ಟು ೧೪ ಪದಕಳು ಲಭಿಸಿದೆ.

ಅನುರಾಗ್ ಬಸವರಾಜ್ ಅವರ ನಾಗರಹೊಳೆ ಅಭಯಾರಣ್ಯದಲ್ಲಿ ತೆಗೆದಿರುವ ಕಾಡು ಹಂದಿಯೊಂದನ್ನು ಬೇಟೆಯಾಡಲು ಅಟ್ಟಾಡಿಸುತ್ತಿರಿವ ಹುಲಿ ಚಿತ್ರ, ಚಿರತೆ ಸೆರೆ ಕಾರ್ಯಾಚರಣೆ ವೇಳೆ ಜನರನ್ನು ಅಟ್ಟಾಡಿಸುತ್ತಿರುವ ಚಿರತೆ ಮತ್ತು ದಸರಾ ಗಜಪಡೆಯ ತಾಲೀಮಿನ ಚಿತ್ರಕ್ಕೆ ಫೋಟೋಗ್ರಫಿ ಫಾರ್ ಲೈಫ್ ಸಂಸ್ಥೆ ಆಯೋಜಿಸಿದ್ದ ಅಂತಾರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯಲ್ಲಿ ಫೋಟೋಗ್ರಫಿ ಸೊಸೈಟಿ ಆಫ್ ಅಮೆರಿಕಾ ಸಂಸ್ಥೆಯ ಎರಡು ಚಿನ್ನದ ಪದಕ ಹಾಗೂ ಒಂದು ಕ್ಲಬ್ ಗೋಲ್ಡ್, ಕ್ಲಬ್ ಸಿಲ್ವರ್ ಹಾಗೂ ಮೆರಿಟ್ ಚಾಯ್ಸ್ ಗೋಲ್ಡ್ ಮೆಡಲ್ ಲಭಿಸಿದೆ.

ಅಲ್ಲದೆ, ಕಲಾಕುಂಬ ಫೋಟೋಗ್ರಫಿ ಕ್ಲಬ್ ಸಂಸ್ಥೆಯಿಂದ ಒಂದು ಚಿನ್ನ, ಒಂದು ಬೆಳ್ಳಿ, ಕಂಚಿನ ಪದಕ ಸೇರಿದಂತೆ ವಿವಿಧ ಸ್ಪಧೆಯಲ್ಲಿ ಒಟ್ಟು ೧೪ ಪದಕಗಳು ಲಭಿಸಿವೆ.

RELATED ARTICLES
- Advertisment -
Google search engine

Most Popular