ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಅರ್.ನಗರ : ಸಾಲಿಗ್ರಾಮ ತಾಲೂಕಿನ ಮಾಯಿಗೌಡನಹಳ್ಳಿ ಗ್ರಾಮದಲ್ಲಿ ಮಾ.30 ರ ಸೋಮವಾರ ಶ್ರೀ ಮಹದೇಶ್ವರ ಜೀರ್ಣೋದ್ಧಾರಿತ ನೂತನ ದೇವಾಲಯದ ಪ್ರವೇಶೋತ್ಸವ ಮತ್ತು ನೂತನ ವಿಗ್ರಹ ಗೋಪುರದ ಬ್ರಹ್ಮ ಕಲಶ ಪ್ರತಿಷ್ಠಾಪನಾ ನಡೆಯಲಿದೆ ಎಂದು ಮಹದೇಶ್ವರ ಸೇವಾ ಸಮಿತಿ ಅಧ್ಯಕ್ಷರಾದ ವಕೀಲ ಎಚ್.ಪಿ.ಮಹದೇವಪ್ಪ ತಿಳಿಸಿದರು.
ಶುಕ್ರವಾರ ದೇವಾಲಯದ ಅವರಣದಲ್ಲಿ ಕಾರ್ಯಕ್ರಮದ ಪ್ರಚಾರದ ಆಹ್ವಾನ ಪತ್ರಿಕೆಗಳನ್ನು ಬಿಡುಗಡೆ ಮಾಡಿ ನಂತರ ಮಾತನಾಡಿದ ಅವರು ಅಂದು ಬೆಳಿಗ್ಗೆ 11 ಗಂಟೆಗೆ ನಡೆಯುವ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಜಿ, ಸಿದ್ದಗಂಗಮಠದ ಶ್ರೀ ಸಿದ್ದಲಿಂಗ ಸ್ವಾಮಿಜಿ ವಹಿಸಲಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಶಾಸಕ ಡಿ.ರವಿಶಂಕರ್, ದಾಸೋಹ ಮಂದಿರವನ್ನು ಮಾಜಿ ಸಚಿವ ಸಾ.ರಾ.ಮಹೇಶ್, ಕಲಾ ಮಂಟಪವನ್ನು ಗುಂಡ್ಲುಪೇಟೆ ಶಾಸಕ ಗಣೇಶ ಪ್ರಸಾದ್ ಉದ್ಘಾಟಿಸಲಿದ್ದು ಅಧ್ಯಕ್ಷತೆಯನ್ನು ಐ.ಎ.ಎಸ್ ಅಧಿಕಾರಿ ಡಿ.ಭಾರತಿ ವಹಿಸಲಿದ್ದಾರೆ ಎಂದು ತಿಳಿಸಿದರು.
ತಾ.ಪಂ ಮಾಜಿ ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ ಮಾತನಾಡಿ ಕಾರ್ಯಕ್ರಮದ ಹಿನ್ನಲೆಯಲ್ಲಿ ಮಾ.29.ಗಣಪತಿ ಹೋಮ, ಮಂಡಲ ಪೂಜೆ ,ಮೃತ್ಯಂಜಯ ಹೋಮ ,ನೂತನ ವಿಗ್ರಹಗಳಿಗೆ ಸಂಸ್ಕಾರದಿ ಪೂಜೆಗಳು ನಡೆಯಲಿದ್ದು ಭಾನುವಾರ ಬೆಳಿಗ್ಗೆ 6.00 ಗಂಟೆಗೆ ಸಾಂಸ್ಕೃತಿಕ ಕಲಾ ತಂಡ
ಕೇರಳದ ಚಂಡ ಮದ್ದಲೆ ಕಲಾತಂಡ ,ಕಂಸಾಳೆ, ನಂದಿ ಧ್ವಜವೀರಗಾಸೆ, ಡೊಳ್ಳು ಕುಣಿತ, ನಗಾರಿ
ನಾದಸ್ವರ ಇನ್ನಿತರ ಕಲಾತಂಡಗಳೊಂದಿಗೆ ಸಕ್ಕರೆ ಗ್ರಾಮದ ಕಾವೇರಿ ನಂದಿಯಿಂದ ಮೆರವಣಿಗೆ ಮೂಲಕ ಗಂಗೆ ತರುವುದು ಮಾಯಿಗೌಡನಹಳ್ಳಿ ಶ್ರೀ ಮಹದೇಶ್ವರ ದೇವಸ್ಥಾನಕ್ಕೆ ವಿದ್ಯುಕ್ತವಾಗಿ 108 ಕಳಸದೊಂದಿಗೆ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಗುವುದು ಎಂದರು.
ಭಾನುವಾರ ಸಂಜೆ 5.00 ಗಂಟೆಗೆ ಅಂತರ ರಾಷ್ಟ್ರೀಯ ಖ್ಯಾತಿಯ ಜಾನಪದ ಗಾಯಕ ಶ್ರೀ ಸಿ.ಎಂ. ನರಸಿಂಹಮೂರ್ತಿ ಮತ್ತು ಸಂಗಡಿಗರಿಂದ ಜಾನಪದ ಝೇಂಕಾರ ಕಾರ್ಯಕ್ರಮ ಸೋಮವಾರ ಬೆಳಿಗ್ಗೆ 9.00 ಗಂಟೆಗೆ ಶ್ರೀ ಪುಟ್ಟೇಗೌಡರು ಮತ್ತು ತಂಡದವರಿಂದ, ಜನಪದ ಮತ್ತು ಭಕ್ತಿಗೀತೆ ಗಾಯನ ನಡೆಯಲಿದ್ದು ಎರಡು ದಿನ ಮಧ್ಯಾನ ಪ್ರಸಾದ ವಿನಿಯೋಗವಿರುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಐ.ಎ.ಎಸ್.ಅಧಿಕಾರಿ ಡಿ.ಭಾರತಿ, ಮಹದೇಶ್ವರ ಸೇವಾ ಸಮಿತಿಯ ಆಶಿ ಮಲ್ಲಿಕಾರ್ಜುನ್,ಎಂ.ಎನ್.ಮಹದೇವ್, ಅಂಕನಹಳ್ಳಿ ಷಣ್ಮುಖ, ಮಂಜುನಾಥ,ಸೋಮೇಶ್, ಶಿವನಂದ್,ರಘು,ಸುರೇಶ್,ಮಹದೇವ,ಪೂಜಾರಿ,ದಶರಥ, ಸೋಮಶೇಖರಯ್ಯ, ಮಂಜು ಆರಾಧ್ಯ ರವಿ,ರಾಜಶೇಖರಯ್ಯ,ನಂಜೇಶ್,ಮಹದೇವ್, ಪೋಸ್ಟ್ ಲೋಕಿ ಇದ್ದರು.



