ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಅರ್.ನಗರ : ಕೆ.ಅರ್.ನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 2025-26ನೇ ರಾಷ್ಟೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರ ತಾಲೂಕಿನ ಚಿಕ್ಕ ವಡ್ಡರಗುಡಿ ಗ್ರಾಮದಲ್ಲಿ ಆರಂಭಗೊಂಡಿತು
ಸುಮಾರು 7 ದಿನಗಳ ಕಾಲ ನಡೆಯುವ ಈ ಶಿಬಿರವನ್ನು ಕಾಲೇಜಿನ ಪ್ರಾಂಶುಪಾಲಾರದ ಡಾ. ಬಿ. ಎಸ್. ಜಯ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಶುಭಕೋರಿದರು.
ನಂತರ ಮಾತನಾಡಿದ ಅವರು ಶಿಬಿರವು ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ, ನಾಯಕತ್ವ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವ 7 ದಿನಗಳ ವಿಶೇಷ ಕಾರ್ಯಕ್ರಮವಾಗಿದೆ. ದತ್ತುಗ್ರಾಮಗಳಲ್ಲಿ ಸ್ವಚ್ಛತೆ, ಸಸಿ ನೆಡುವುದು, ಸಾಕ್ಷರತೆ, ಮತ್ತು ಆರೋಗ್ಯ ಜಾಗೃತಿಯಂತಹ ಚಟುವಟಿಕೆಗಳ ಮೂಲಕ ಗ್ರಾಮೀಣಾಭಿವೃದ್ಧಿಗೆ ಕೊಡುಗೆ ನೀಡಲಾಗುತ್ತದೆ ಎಂದು ತಿಳಿಸಿದರು.
ನಂತರ ಸಿ.ಡಿ.ಸಿ.ಸದಸ್ಯರಾದ ರಾಜಯ್ಯ ರವರು ಮಾತಾಡಿ ಎನ್. ಎಸ್.ಎಸ್ ಕಾರ್ಯಕ್ರಮದ ಹುಟ್ಟು ಹಾಗೂ ಬೆಳೆದು ಬಂದ ದಾರಿಯನ್ನ ನೆನೆದು ಶಿಬಿರರ್ಥಿಗಳು ಈ ಕಾರ್ಯಕ್ರಮವನ್ನು ಸದುಪಯೋಗ ಪಡಿಸಿಕೊಂಡು ಎಲ್ಲಾ ಕಾರ್ಯದಲ್ಲೂ ಪಾಲ್ಗೊಂಡು ಉತ್ತಮವಾಗಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಕಿವಿ ಮಾತು ಹೇಳಿದರು.
ಈ ಕಾರ್ಯಕ್ರಮದಲ್ಲಿ ಸಿ. ಡಿ.ಸಿ ಸದಸ್ಯರಾದ ರಾಜೇಶ್, ಉಪನ್ಯಾಸಕರಾದ ಮಹೇಶ್, ಕಿರಣ್ ಕುಮಾರ್, ಸುಂದರ್, ನಂದಿನಿ, ಮಧು, ಶಿಬಿರಧಿಕಾರಿಗಳದ ರಾಘವೇಂದ್ರ, ಮಮತಾ, ಮೂಲೆಪೆಟ್ಲು ಪ್ರದೀಪ್, ವಿಭಾಶ್ರೀ,ಸಹನಾ ಹಾಗೂ ಗ್ರಾಮದ ಮುಖಂಡರು ಮತ್ತು ಗ್ರಾಮದ ಎಲ್ಲಾ ಸಾರ್ವಜನಿಕರು ಪಾಲ್ಗೊಂಡಿದ್ದರು.



