ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಅರ್.ನಗರ : ಕೆ.ಅರ್.ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಇವರ ವತಿಯಿಂದ ಚಿಕ್ಕವಡ್ಡರಗುಡಿ ಗ್ರಾಮದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ಶಿಬಿರದಲ್ಲಿ ಕೆ ಆರ್ ನಗರದ ಶರತ್ ಕಣ್ಣಿನ ಆಸ್ಪತ್ರೆ ಹಾಗೂ ರೋಟರಿ ಕ್ಲಬ್ ಇವರ ಸಂಯೋಜನೆಯಲ್ಲಿ ಉಚಿತ ನೇತ್ರ ತಪಾಸಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದ ಮೂಲಕ ಚಿಕ್ಕವಡ್ಡರಗುಡಿ ಗ್ರಾಮದ ಸುಮಾರು 90 ಮಂದಿ ತಮ್ಮ ಕಣ್ಣಿನ ತಪಾಸಣೆ ಮಾಡಿಸಿದಾಗ ಅಗತ್ಯ ಕನ್ನಡಕಗಳನ್ನು ವಿತರಿಸಲಾಯಿತ್ತಲ್ಲದೇ 25 ಮಂದಿಗೆ ಶಸ್ತ್ರ ಚಿಕಿತ್ಸೆಗೆ ಶಿಪಾಸರಸ್ಸು ಮಾಡಲಾಯಿತು.
ಕಾರ್ಯಕ್ರಮದಲ್ಲಿ ಡಾ. ಶರತ್, ರೋಟರಿ ಕ್ಲಬ್ ಅಧ್ಯಕ್ಷರಾದ ದಯಾನಂದ, ಮಾಜಿ ಅಧ್ಯಕ್ಷರಾದ ನಾಗರಾಜು ಬಾವಿಕಟ್ಟಿ, ಮೋಹನ್, ಅರುಣ್ ನರಗುಂದ, ವಾರದಯ್ಯ್ ಹಾಗೂ ಶಿಬಿರಧಿಕಾರಿಗಳಾದ ಮಮತಾ, ರಾಘವೇಂದ್ರ, ಮೂಲೆಪೆಟ್ಲು ಪ್ರದೀಪ್, ವಿಭಾಶ್ರೀ, ಸಹನಾ, ಊರಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಇದರ ಜತಗೆ ಅಗ್ನಿ ಶಾಮಕ ದಳದಿಂದ ಅಗ್ನಿ ಸುರಕ್ಷತಾ ಕಾರ್ಯಕ್ರದಲ್ಲಿ ಅಗ್ನಿ ಅವಘಡದ ಕುರಿತು ಕೆ ಆರ್ ನಗರದ ಅಗ್ನಿ ಶಾಮಕ ಠಾಣಾಧಿಕಾರಿಗಳದ ಮೋಹನ್ ಹಾಗೂ ಸಿಬ್ಬಂದಿಗಳು ಅಗ್ನಿ ಸುರಕ್ಷತೆ, ಗ್ಯಾಸ್ ಬಳಸುವ ವಿಧಾನ, ಅಗ್ನಿ ಕರೆಗಳ ವಿವಣೆ, ಹುಲ್ಲಿನ ಮೇದೆಗಳ ರಕ್ಷಣೆ ಬಗ್ಗೆ ಅರಿವು ಮೂಡಿಸಿದರು.
ಈ ಕಾರ್ಯಕ್ರಮದಲ್ಲಿ ಅಗ್ನಿ ಶಾಮಕ ಸಿಬ್ಬಂದಿಗಳು, ಗ್ರಾಮಸ್ಥರು, ಶಿಬಿರಧಿಕಾರಿಗಳಾದ ರಾಘವೇಂದ್ರ, ಮಮತ, ಮೂಲೆಪೆಟ್ಲು ಪ್ರದೀಪ್, ವಿಭಶ್ರೀ, ಸಹನಾ, ಪಾಲ್ಗೊಂಡಿದ್ದರು.



