9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಎಲ್.ಪಿ.ಸಿ ವಾರಂಟ್ ಅಸಾಮಿಯನ್ನು ಬಂಧಿಸಲಾಗಿದೆ. ಸುಹಾನ್ @ ಸೋನು, ಬಂಧಿತ ವ್ಯಕ್ತಿ.
ಆರೋಪಿತನ ವಿರುದ್ದ ವಿವಿಧ ಠಾಣೆಗಳಲ್ಲಿ ಕೇಸ್ ಗಳು ದಾಖಲಾಗಿತ್ತು. ಉರ್ವ ಪೊಲೀಸ್ ಠಾಣಾ ಅ.ಕ್ರ. 62/2016, ಕಲಂ. 399, 120(B) ಐಪಿಸಿ
ಕೇಸ್, ಉರ್ವ ಪೊಲೀಸ್ ಠಾಣಾ ಅ.ಕ್ರ 126/2017, ಕಲಂ 120(B), 399, 402, 188 ಐಪಿಸಿ ಕೇಸ್,
ಮಂಗಳೂರು ಉತ್ತರ ಪೊಲೀಸ್ ಠಾಣಾ ಅ.ಕ್ರ, 32/2020 ಕಲಂ. 143 147 148 504 506 323 324 ಜೊತೆಗೆ 149 ಐಪಿಸಿ ಕೇಸ್ ದಾಖಲಾಗಿತ್ತು.
ಆರೋಪಿತನು ಮಂಗಳೂರು ನಗರದ ಉರ್ವ ಪೊಲೀಸ್ ಠಾಣೆ ಮತ್ತು ಮಂಗಳೂರು ಉತ್ತರ ಪೊಲೀಸ್ ಠಾಣೆಯ ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ಇತನ ವಿರುದ್ದ ಉರ್ವ ಪೊಲೀಸ್ ಠಾಣಾ ಪ್ರಕರಣದಲ್ಲಿ ನ್ಯಾಯಾಲಯವು ಎಲ್.ಪಿ.ಸಿ ವಾರಂಟ್ ಹೊರಡಿಸಿತ್ತು. ಆರೋಪಿಯನ್ನು ಮಹಾರಾಷ್ಟ್ರ ರಾಜ್ಯ ಮುಂಬೈನಲ್ಲಿ ಉರ್ವ ಪೊಲೀಸ್ ಠಾಣಾ ಎಎಸ್ಐ ಲಕ್ಷ್ಮಣ್ ಮತ್ತು ಸಿಬ್ಬಂದಿರವರು ಪತ್ತೆಮಾಡಿ ದಸ್ತಗಿರಿ ಮಾಡಿದ್ದು, ಆರೋಪಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.



