ಮೈಸೂರು: ಧಾರ್ಮಿಕ ಆಚರಣೆಗಳಿಂದ ಮತ್ತು ದೈವಾನುಗ್ರಹದಿಂದ ಜೀವನದಲ್ಲಿ ನೆಮ್ಮದಿ ಲಭಿಸುತ್ತದೆ. ಅಧಿಕಸ್ಯ ಅಧಿಕ ಲಾಭಂ ಎನ್ನುವ ಶಾಸ್ತ್ರಾಭಿಪ್ರಾಯವಿದೆ. ದೇವರ ಪ್ರೀತಿಗಾಗಿ ಮಾಡಿದ ಎಲ್ಲಾ ಕರ್ಮಗಳೂ ಅಧಿಕ ಪಟ್ಟಿನ ಪುಣ್ಯ ಫಲ ನೀಡಲಿವೆ. ಕುಟುಂಬದ ನೆಮ್ಮದಿ ಹಾಗೂ ಆರೋಗ್ಯ, ಸಂಪತ್ತಿಗೆ ನೆರವಾಗಲಿವೆ ಎಂದು ಹೊಯ್ಸಳ ಕರ್ನಾಟಕ ಸಂಘದ ಕಾರ್ಯಾಧ್ಯಕ್ಷ ಕೆ.ಆರ್.ಸತ್ಯನಾರಾಯಣ್ ಅಭಿಪ್ರಾಯಪಟ್ಟರು.
ನಗರದ ವಿಶ್ವೇಶ್ವರ ನಗರದಲ್ಲಿರುವ ಕೆ.ವಿ.ಆರ್ ಕಲ್ಯಾಣ ಮಂಟಪದಲ್ಲಿ ವಿಪ್ರ ಜಾಗೃತಿ ವೇದಿಕೆಯ ೧೦ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಲೋಕ ಕಲ್ಯಾಣಕ್ಕಾಗಿ ೨೫ ವಿಪ್ರ ದಂಪತಿಗಳಿಂದ ಗಿರಿಜಾ ಕಲ್ಯಾಣ ಮಹೋತ್ಸವ ಆಯೋಜಿಸಿದ್ದ ಸಂದರ್ಭದಲ್ಲಿ ಅಧಿಕಮಾಸದ ಧಾರ್ಮಿಕ ಕಾರ್ಯಕ್ರಮದ ಬಗ್ಗೆ ಮಾತನಾಡಿದ ಅವರು, ಭೂಮಿಯಲ್ಲಿನ ಸರ್ವರಿಗೂ ಒಳಿತಾಗಲಿ, ಆರೋಗ್ಯ, ಸುಖ, ಸಂಪತ್ತು ಲಭಿಸಲೆಂದು ಲೋಕ ಕಲ್ಯಾಣಾರ್ಥ ಹೋಮಗಳು, ಹಾಗೂ ಬೆಳಗಿನಿಂದಲೇ ಕಲ್ಯಾಣೋತ್ಸವದ ಪ್ರಯುಕ್ತ ನಾನಾ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಕಾರ್ಯಕ್ರಮದಲ್ಲಿ ವಿಷ್ಣು ಸಹಸ್ರನಾಮ ಪಾರಾಯಣ, ಮಂತ್ರ ಜಪ ಸಂಕಲ್ಪ, ಪುರುಷ ಸೂಕ್ತ, ಶ್ರೀಸೂಕ್ತ, ಪುಷ್ಪಾರ್ಚನೆ, ಕುಂಕುಮಾರ್ಚನೆ, ಭಜನೆ ಸೇವೆಗಳು ಜರುಗಿದವು.
ಕಾರ್ಯಕ್ರಮದಲ್ಲಿ ಶಾಸಕ ಟಿ.ಎಸ್.ಶ್ರೀವತ್ಸ, ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್, ಮಹರ್ಷಿ ಶಿಕ್ಷಣ ಸಂಸ್ಥೆಯ ಭವಾನಿ ಶಂಕರ್, ಸಮಾಜ ಸೇವಕ ಕೆ.ರಘುರಾಂ ವಾಜಪೇಯಿ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಉಪಾಧ್ಯಕ್ಷ ನ ಶ್ರೀಕಂಠ ಕುಮಾರ್, ಬ್ರಾಹ್ಮಣ ಯುವ ವೇದಿಕೆ ಸಂಘಟನಾ ಕಾರ್ಯದರ್ಶಿ ಅಜಯ್ ಶಾಸ್ತ್ರಿ, ವಿಪ್ರ ಜಾಗೃತಿ ವೇದಿಕೆಯ ಕಾರ್ಯದರ್ಶಿ ಮುಳ್ಳೂರು ಸುರೇಶ್, ಖಜಾಂಚಿ ಮಂಜುನಾಥ್, ಉಪಾಧ್ಯಕ್ಷ ನಾಗರಾಜ್, ಸುಚೀಂದ್ರ, ಹಾಗೂ ಇನ್ನಿತರರು ಭಾಗವಹಿಸಿದ್ದರು.