Wednesday, April 8, 2026
Google search engine

Homeಆರೋಗ್ಯನಿದ್ರೆಯ ಕೊರತೆಯಿಂದ ಮಧುಮೇಹ, ಹೃದಯ ರೋಗ, ಬೊಜ್ಜಿನ ಅಪಾಯ: ನಿಮ್ಮ ಸ್ಲೀಪ್ ಪ್ಯಾಟರ್ನ್ ಇಂದೇ ಬದಲಿಸಿಕೊಳ್ಳಿ!

ನಿದ್ರೆಯ ಕೊರತೆಯಿಂದ ಮಧುಮೇಹ, ಹೃದಯ ರೋಗ, ಬೊಜ್ಜಿನ ಅಪಾಯ: ನಿಮ್ಮ ಸ್ಲೀಪ್ ಪ್ಯಾಟರ್ನ್ ಇಂದೇ ಬದಲಿಸಿಕೊಳ್ಳಿ!

ಉತ್ತಮ ಮತ್ತು ಪರ್ಯಾಪ್ತ ನಿದ್ರೆ ಕೇವಲ ವಿಶ್ರಾಂತಿಯಲ್ಲ, ಅದು ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೂಲಾಧಾರ. ನಾವು ಮಲಗಿದಾಗ ನಮ್ಮ ಮೆದುಳು ದಿನವಿಡೀ ಸಂಗ್ರಹಿಸಿದ ಮಾಹಿತಿಯನ್ನು ಸಂಸ್ಕರಿಸುತ್ತದೆ ಮತ್ತು ದೇಹವು ತನ್ನನ್ನು ತಾನು ದುರಸ್ತಿ (Repair) ಮಾಡಿಕೊಳ್ಳುತ್ತದೆ. ಸತತವಾಗಿ ನಿದ್ರೆಯ ಕೊರತೆಯುಂಟಾದರೆ ಅದು ಮಾರಣಾಂತಿಕ ಕಾಯಿಲೆಗಳಿಗೆ ದಾರಿಯಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ಹೃದಯದ ಆರೋಗ್ಯದ ಮೇಲೆ ಗಂಭೀರ ಪರಿಣಾಮ

ನಿದ್ರೆಯ ಕೊರತೆಯು ನೇರವಾಗಿ ರಕ್ತದೊತ್ತಡವನ್ನು (Blood Pressure) ಹೆಚ್ಚಿಸುತ್ತದೆ. ದಿನಕ್ಕೆ 7-8 ಗಂಟೆಗಳಿಗಿಂತ ಕಡಿಮೆ ಮಲಗುವವರಲ್ಲಿ ಹೈ ಬಿಪಿ, ಸ್ಟ್ರೋಕ್ ಮತ್ತು ಹೃದಯಾಘಾತದ ಸಾಧ್ಯತೆ ಹೆಚ್ಚು. ವಿಶೇಷವಾಗಿ 5 ಗಂಟೆಗಿಂತ ಕಡಿಮೆ ಮಲಗುವವರಿಗೆ ಹೃದಯಾಘಾತದ ಅಪಾಯ ಗರಿಷ್ಠವಾಗಿರುತ್ತದೆ. ಇದಕ್ಕೆ ಮುಖ್ಯ ಕಾರಣ ‘ಕಾರ್ಟಿಸೋಲ್’ ಎಂಬ ಸ್ಟ್ರೆಸ್ ಹಾರ್ಮೋನ್ ಹೆಚ್ಚಳ ಮತ್ತು ಧಮನಿಗಳಲ್ಲಿ ಉಂಟಾಗುವ ಬ್ಲಾಕೇಜ್‌ಗಳು.

ಮಧುಮೇಹ ಮತ್ತು ಬೊಜ್ಜಿನ ಭೀತಿ

ನಿದ್ರೆಯು ಮೆಟಬಾಲಿಕ್ ಆರೋಗ್ಯದ ಮೇಲೆ ನೇರ ಪ್ರಭಾವ ಬೀರುತ್ತದೆ. ಸರಿಯಾಗಿ ನಿದ್ರೆ ಮಾಡದಿದ್ದರೆ ದೇಹದಲ್ಲಿ ಇನ್ಸುಲಿನ್ ಸಮತೋಲನ ತಪ್ಪುತ್ತದೆ, ಇದರಿಂದ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸುವುದು ಕಷ್ಟವಾಗುತ್ತದೆ. ಅಲ್ಲದೆ, ಹಸಿವನ್ನು ನಿಯಂತ್ರಿಸುವ ಹಾರ್ಮೋನ್‌ಗಳಲ್ಲಿ ವ್ಯತ್ಯಯ ಉಂಟಾಗಿ ಅತಿಯಾದ ಹಸಿವು ಮತ್ತು ಬೊಜ್ಜು ಬೆಳೆಯಲು ಕಾರಣವಾಗುತ್ತದೆ.

ಮಾನಸಿಕ ಆರೋಗ್ಯದ ಮೇಲಾಗುವ ಪರಿಣಾಮಗಳು

ಸಿಟ್ಟು ಮತ್ತು ಕಿರಿಕಿರಿ: ನಿದ್ರೆಯಿಲ್ಲದಿದ್ದರೆ ಭಾವನೆಗಳ ಮೇಲೆ ಹತೋಟಿ ಇರುವುದಿಲ್ಲ. ಮೆದುಳು ದಣಿದು ಮಂಕಾಗಬಹುದು.

ಆತಂಕ ಮತ್ತು ಖಿನ್ನತೆ: ದೀರ್ಘಕಾಲದ ನಿದ್ರಾಹೀನತೆಯು ಎಂಗ್ಸೈಟಿ (Anxiety) ಮತ್ತು ಡಿಪ್ರೆಶನ್‌ನಂತಹ ಗಂಭೀರ ಮಾನಸಿಕ ಸಮಸ್ಯೆಗಳನ್ನು ಪ್ರಚೋದಿಸಬಹುದು.

ಏಕಾಗ್ರತೆಯ ಕೊರತೆ: ಸರಿಯಾದ ನಿದ್ರೆಯಿಲ್ಲದೆ ಕೆಲಸ ಅಥವಾ ಓದಿನ ಮೇಲೆ ಗಮನ ಹರಿಸುವುದು ಸಾಧ್ಯವಾಗುವುದಿಲ್ಲ ಮತ್ತು ನೆನಪಿನ ಶಕ್ತಿಯೂ ಕುಂದುತ್ತದೆ.

ರೋಗನಿರೋಧಕ ಶಕ್ತಿ (Immunity) ಕುಸಿತ

ನಮ್ಮ ದೇಹವು ಸೋಂಕುಗಳ ವಿರುದ್ಧ ಹೋರಾಡುವ ‘ಸೈಟೊಕೈನ್’ ಎಂಬ ಪ್ರೋಟೀನ್‌ಗಳನ್ನು ನಾವು ಮಲಗಿದ್ದಾಗ ಉತ್ಪಾದಿಸುತ್ತದೆ. ನಿದ್ರೆ ಕಡಿಮೆಯಾದಂತೆ ಈ ಪ್ರೋಟೀನ್‌ಗಳ ಪ್ರಮಾಣ ಇಳಿಕೆಯಾಗಿ, ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುತ್ತದೆ. ಇದರಿಂದ ಪದೇ ಪದೇ ಶೀತ, ಜ್ವರ ಅಥವಾ ಇತರ ಸೋಂಕುಗಳು ತಗುಲುವ ಸಾಧ್ಯತೆ ಇರುತ್ತದೆ.

ಉತ್ತಮ ನಿದ್ರೆಗಾಗಿ ಈ ಬದಲಾವಣೆಗಳನ್ನು ಮಾಡಿಕೊಳ್ಳಿ:

ಸ್ಥಿರ ಸಮಯ : ಪ್ರತಿದಿನ ಒಂದೇ ಸಮಯಕ್ಕೆ ಮಲಗುವ ಮತ್ತು ಏಳುವ ಅಭ್ಯಾಸ ಬೆಳೆಸಿಕೊಳ್ಳಿ.

ಸ್ಕ್ರೀನ್ ನಿಂದ ದೂರವಿರಿ : ಮಲಗುವ ಕನಿಷ್ಠ 30 ನಿಮಿಷ ಮೊದಲು ಮೊಬೈಲ್ ಅಥವಾ ಟಿವಿ ನೋಡುವುದನ್ನು ನಿಲ್ಲಿಸಿ.

ಪಾನೀಯಗಳ ನಿಯಂತ್ರಣ : ಮಲಗುವ ಮುನ್ನ ಚಹಾ ಅಥವಾ ಕಾಫಿ ಸೇವಿಸಬೇಡಿ.

ಶಾಂತ ವಾತಾವರಣ : ಮಲಗುವ ಕೋಣೆ ಕತ್ತಲೆಯಿಂದ ಕೂಡಿದ್ದು, ಶಾಂತವಾಗಿರುವಂತೆ ನೋಡಿಕೊಳ್ಳಿ.

ನೆನಪಿಡಿ: ಕೇವಲ 4-5 ಗಂಟೆ ನಿದ್ರೆ ಸಾಕು ಎಂದು ಭಾವಿಸುವುದು ತಪ್ಪು. ದೀರ್ಘಕಾಲದ ಆರೋಗ್ಯಕ್ಕಾಗಿ ಕನಿಷ್ಠ 7-8 ಗಂಟೆಗಳ ಗುಣಮಟ್ಟದ ನಿದ್ರೆ ಅತ್ಯಗತ್ಯ

RELATED ARTICLES
- Advertisment -
Google search engine

Most Popular