Thursday, April 9, 2026
Google search engine

Homeಸಿನಿಮಾ'ಧುರಂಧರ್ 2' ಚಿತ್ರಕ್ಕೆ ಕಾನೂನು ಸಂಕಷ್ಟ: 'ಓಯೇ ಓಯೇ' ಹಾಡಿನ ವಿಚಾರವಾಗಿ ತ್ರಿಮೂರ್ತಿ ಫಿಲ್ಮ್ಸ್‌ನಿಂದ ಸಮರ

‘ಧುರಂಧರ್ 2’ ಚಿತ್ರಕ್ಕೆ ಕಾನೂನು ಸಂಕಷ್ಟ: ‘ಓಯೇ ಓಯೇ’ ಹಾಡಿನ ವಿಚಾರವಾಗಿ ತ್ರಿಮೂರ್ತಿ ಫಿಲ್ಮ್ಸ್‌ನಿಂದ ಸಮರ

ಮುಂಬೈ : ಆದಿತ್ಯ ಧರ್ ನಿರ್ದೇಶನದ ‘ಧುರಂಧರ್ 2’ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆಯುತ್ತಿರುವ ಬೆನ್ನಲ್ಲೇ ಕಾನೂನು ಸಂಕಷ್ಟಕ್ಕೆ ಸಿಲುಕಿದೆ. 90ರ ದಶಕದ ಸೂಪರ್‌ ಹಿಟ್ ಹಾಡೊಂದನ್ನು ಅನುಮತಿಯಿಲ್ಲದೆ ಬಳಸಿದ್ದಕ್ಕಾಗಿ ಚಿತ್ರತಂಡದ ಮೇಲೆ ಕಾಪಿರೈಟ್ ಪ್ರಕರಣ ದಾಖಲಿಸಲಾಗಿದೆ.

ಪ್ರಕರಣದ ಹಿನ್ನೆಲೆ ಏನು?

ಮಾಧ್ಯಮವೊಂದರ ವರದಿಯ ಪ್ರಕಾರ ಖ್ಯಾತ ನಿರ್ಮಾಣ ಸಂಸ್ಥೆ ‘ತ್ರಿಮೂರ್ತಿ ಫಿಲ್ಮ್ಸ್’, ಆದಿತ್ಯ ಧರ್ ಅವರ ‘B62 ಸ್ಟುಡಿಯೋಸ್’ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದೆ. 1989ರ ಸೂಪರ್‌ ಹಿಟ್ ಚಿತ್ರ ‘ತ್ರಿದೇವ್’ನ ಜನಪ್ರಿಯ ಹಾಡು ‘ಹಮ್ ಪ್ಯಾರ್ ಕರ್ನೆ ವಾಲೆ’ (ಓಯೇ ಓಯೇ) ಅನ್ನು ಧುರಂಧರ್ 2 ಚಿತ್ರದಲ್ಲಿ ಅನಧಿಕೃತವಾಗಿ ಬಳಸಲಾಗಿದೆ ಎಂಬುದು ಇವರ ಆರೋಪ.

ಮೂಲ ಹಾಡು ಕಲ್ಯಾಣ್ ಜಿ-ಆನಂದ್ ಜಿ ಮತ್ತು ವಿಜು ಶಾ ಸಂಗೀತ ಸಂಯೋಜನೆಯಲ್ಲಿದ್ದು ಸಾಹಿತ್ಯ ಆನಂದ್ ಬಕ್ಷಿ ಅವರದ್ದು, ಗಾಯನ ಅಮಿತ್ ಕುಮಾರ್ ಮತ್ತು ಸಪ್ನಾ ಮುಖರ್ಜಿ ಅವರದ್ದು. ತ್ರಿಮೂರ್ತಿ ಫಿಲ್ಮ್ಸ್ ಪ್ರಕಾರ, ಈ ಹಾಡಿನ ಹಕ್ಕುಗಳನ್ನು ಪಡೆಯದೆಯೇ ಚಿತ್ರದಲ್ಲಿ ಬಳಸಲಾಗಿದೆ, ಇದು ನೇರವಾದ ಕಾಪಿರೈಟ್ ಉಲ್ಲಂಘನೆಯಾಗಿದೆ.

ಹಾಗಾದರೆ ತ್ರಿಮೂರ್ತಿ ಫಿಲ್ಮ್ಸ್ ಬೇಡಿಕೆಗಳೇನು?

ವರದಿಗಳ ಪ್ರಕಾರ, ಈ ಹಾಡಿನ ಬಳಕೆಯನ್ನು ಕೂಡಲೇ ನಿಲ್ಲಿಸಬೇಕು ಮತ್ತು ಅದರಿಂದಾದ ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಸಂಸ್ಥೆ ಆಗ್ರಹಿಸಿದೆ. ಚಿತ್ರಮಂದಿರಗಳು, ಸ್ಟ್ರೀಮಿಂಗ್ ಪ್ಲಾಟ್‌ ಫಾರ್ಮ್‌ಗಳು ಮತ್ತು ಪ್ರಚಾರದ ವಿಡಿಯೋಗಳಲ್ಲಿ ಈ ಹಾಡಿನ ಬಳಕೆಯನ್ನು ನಿರ್ಬಂಧಿಸುವಂತೆ ಅವರು ಒತ್ತಾಯಿಸಿದ್ದಾರೆ.

ಬಾಕ್ಸ್ ಆಫೀಸ್‌ನಲ್ಲಿ ಧುರಂಧರ್ 2 ಅಬ್ಬರ

ಕಾನೂನು ವಿವಾದಗಳ ನಡುವೆಯೂ ಚಿತ್ರವು ಗಳಿಕೆಯಲ್ಲಿ ಹೊಸ ಇತಿಹಾಸ ಸೃಷ್ಟಿಸುತ್ತಿದೆ.

ದೇಶೀಯ ಗಳಿಕೆ : ಕೇವಲ 21 ದಿನಗಳಲ್ಲಿ ಭಾರತದಲ್ಲಿ ₹1,041.27 ಕೋಟಿ (ನೆಟ್) ಕಲೆಕ್ಷನ್ ಮಾಡಿದೆ.
ಜಾಗತಿಕ ಗಳಿಕೆ : ವಿಶ್ವಾದ್ಯಂತ ಬರೋಬ್ಬರಿ ₹1,653.67 ಕೋಟಿ ಗಳಿಸಿದೆ.

ವಿದೇಶಿ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಮೂರನೇ ಭಾರತೀಯ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದು ಅಮೀರ್ ಖಾನ್ ಅವರ ‘ದಂಗಲ್’ ಸೇರಿದಂತೆ ಹಲವು ಬಿಗ್ ಬಜೆಟ್ ಚಿತ್ರಗಳ ದಾಖಲೆಯನ್ನು ಮುರಿದಿದೆ.

ಒಂದು ಕಡೆ ಸಾವಿರಾರು ಕೋಟಿ ಗಳಿಕೆಯ ಸಂಭ್ರಮವಿದ್ದರೆ, ಮತ್ತೊಂದೆಡೆ ಹಳೆಯ ಹಾಡಿನ ಹಕ್ಕುಗಳ ವಿವಾದ ಚಿತ್ರತಂಡಕ್ಕೆ ತಲೆನೋವಾಗಿ ಪರಿಣಮಿಸಿದೆ. (ಏಜೆನ್ಸಿಸ್‌)

RELATED ARTICLES
- Advertisment -
Google search engine

Most Popular