Tuesday, April 21, 2026
Google search engine

Homeರಾಜ್ಯಸುದ್ದಿಜಾಲಕಬ್ಬಿನ ಹೆಚ್ಚುವರಿ ಹಣ ಪಾವತಿಗೆ ಆಗ್ರಹಿಸಿ ಪ್ರತಿಭಟನೆ

ಕಬ್ಬಿನ ಹೆಚ್ಚುವರಿ ಹಣ ಪಾವತಿಗೆ ಆಗ್ರಹಿಸಿ ಪ್ರತಿಭಟನೆ

ಮೈಸೂರು: ರಾಜ್ಯ ಸರ್ಕಾರ ನಿಗದಿ ಮಾಡಿರುವ ಹೆಚ್ಚುವರಿ ಹಣ ನೂರು ರೂಪಾಯಿ ಕಬ್ಬು ಬೆಳೆಗಾರರಿಗೆ ಪಾವತಿ ಮಾಡದ ನಡೆಯನ್ನು ಖಂಡಿಸಿ ನೂರಾರು ರೈತರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟಿಸಿದರು. ನೂರಾರು ರೈತರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತಾ ಕಚೇರಿಯ ಒಳಗೆ ನುಗ್ಗಲು ಯತ್ನಿಸಿದ್ದು, ಪೊಲೀಸರು ತಡೆಯಲೆತ್ನಿಸಿ ಕೊನೆಗೆ ಡಿಸಿ ಕಚೇರಿ ಬಾಗಿಲಲ್ಲೇ ಧರಣಿ ನಡೆಸಿದರು.

ಬಳಿಕ ಲೀಡ್ ಬ್ಯಾಂಕ್ ಮುಖ್ಯಸ್ಥ ಕೃಷ್ಣಮೂರ್ತಿ ಚಳುವಳಿ ಜಾಗಕ್ಕೆ ಬಂದು ಚಿನ್ನ ಗಿರವಿ ಸಾಲ ಸಿಬಿಲ್ ಸ್ಕೋರ್ ಕೇಳಬಾರದು. ಚಿನ್ನ ಪರೀಕ್ಷೆ ಮಾಡುವ ಶುಲ್ಕ150 ರಿಂದ 200 ಪಡೆದುಕೊಳ್ಳಬಹುದು ಹೆಚ್ಚುವರಿ ಪಡೆದುಕೊಂಡರೆ ದೂರು ನೀಡಬಹುದು ಎಂದು ತಿಳಿಸಿದರು.

ಕಾವೇರಿ ಗ್ರಾಮೀಣ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕ ಪ್ರಮೋದ್ ನೋನಿ ಮಾತನಾಡಿ ಒಟಿಎಸ್ ಸಾಲ ತಿರುವಳಿ ಬಗ್ಗೆ ಮೇ 8 ರಂದು ರಾಜ್ಯಮಟ್ಟದ ಕಾರ್ಯನಿರ್ವಹಕ ವವ್ಯಸ್ಥಾಪಕರು ಮೈಸೂರಿನಲ್ಲಿ ಸಭೆ ನಡೆಸಿ ಸಮಸ್ಯೆ ಬಗೆಹರಿಸುವವರು ಎಂದರು.
ಜಿಲ್ಲೆಯ ವಿದ್ಯುತ್ ಸಮಸ್ಯೆಗಳಿಗೆ ಶೀಘ್ರದಲ್ಲಿ ರೈತ ಮುಖಂಡರ ಜೊತೆ ಸಭೆ ನಡೆಸಿ ಸಮಸ್ಯೆ ಬಗೆಹರಿಸುವುದಾಗಿ ಕಾರ್ಯನಿರ್ವಾಹಕ ಅಭಿಯಂತರು ತಿಳಿಸಿದರು.

ಈ ವೇಳೆ ಪ್ರತಿಭಟನಾಕಾರವನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್, ರೈತರ ಸಂಕಷ್ಟ ಅರಿಯದ ಬಣ್ಣಾರಿ ಸಕ್ಕರೆ ಕಾರ್ಖಾನೆ ರೈತರನ್ನ ನಿರಂತರ ಶೋಷಣೆ ಮಾಡುತ್ತಿದೆ.
ಪ್ರತಿ ವರ್ಷವು ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡುತ್ತಲೇ ರೈತರನ್ನು ವಂಚಿಸುತ್ತ ಸಕ್ಕರೆ ಕಾರ್ಖಾನೆ ನಡೆಸುತ್ತಿರುವ ಬಣ್ಣಾರಿ ಕಾರ್ಖಾನೆ ಮಾಲೀಕರನ್ನು ಜೈಲಿಗೆ ಕಳಿಸಬೇಕು. ಇಂತಹ ಉಪಠಳದಿಂದಲೇ ರೈತರು ಕಬ್ಬು ಬೆಳೆಯನ್ನ ಕಡಿಮೆ ಮಾಡಿದ್ದಾರೆ. 15 ಲಕ್ಷ ಟನ್ ಕಬ್ಬು ಅರೆಯುವ ಸಾಮರ್ಥ್ಯ ಇರುವ ಬಣ್ಣಾರಿ ಕಾರ್ಖಾನೆಗೆ ಕೇವಲ ಏಳುವರೆ ಲಕ್ಷ ಟನ್ ಮಾತ್ರ ಸರಬರಾಜು ಮಾಡಿದ್ದಾರೆ. ಈ ಕಬ್ಬಿನ ಹೆಚ್ಚು ಹೆಚ್ಚುವರಿ ಹಣ ಏಳುವರೆ ಕೋಟಿ ರೈತರಿಗೆ ಪಾವತಿಸದೆ ನಾಟಕವಾಡುತ್ತಿದ್ದಾರೆ. ಕೂಡಲೇ ಜಿಲ್ಲಾಧಿಕಾರಿಗಳು ಸಕ್ಕರೆ ಗೋಧಾಮ ವಶಕ್ಕೆ ಪಡೆದು ಸಕ್ಕರೆ ಮಾರಾಟ ಮಾಡಿ ರೈತರ ಹಣ ಕೂಡಿಸಬೇಕು ಎಂದು ಒತ್ತಾಯಿಸಿದರು.

ಕೇಂದ್ರ ಸರ್ಕಾರ ಎಥಾಲ್ ಅನ್ನು ಪೆಟ್ರೋಲ್ ಜೊತೆ ಶೇಕಡ ಇಪ್ಪತ್ತರಷ್ಟು ಮಿಶ್ರಣ ಮಾಡಲು ಸೂಚನೆ ನೀಡಿರುವುದು ಸ್ವಾಗತಾರ್ಹ ಎಂದರು. ಚಳವಳಿ ನಿರತ ರೈತರು ಕಬ್ಬಿನ ಹಣ ಕೊಡಿಸುವ ತನಕ ನಿರಂತರ ಪ್ರತಿಭಟನಾ ಧರಣಿ ನಡೆಸಲು ತೀರ್ಮಾನಿಸಿರುವುದಾಗಿ ಹೇಳಿದರು.

ಇಂದಿನ ಚಳವಳಿಯಲ್ಲಿ ಅತ್ತಹಳ್ಳಿ ದೇವರಾಜ್, ಬರಡನಪುರ ನಾಗರಾಜ್, ಕಿರಗಸೂರು ಶಂಕರ್, ಮೂಕಳ್ಳಿ ಮಹದೇವಸ್ವಾಮಿ, ಪಟೇಲ್ ಶಿವಮೂರ್ತಿ, ಉಡಿಗಾಲ ರೇವಣ್ಣ, ಸೋಮಶೇಖರ್, ಮಾರ್ಬಳ್ಳಿ ನೀಲಕಂಠಪ್ಪ, ವರಕೋಡು ನಾಗೇಶ್, ಲಕ್ಷ್ಮೀಪುರ ವೆಂಕಟೇಶ್,, ಕುರುಬೂರು ಸಿದ್ದೇಶ್, ದೇವನೂರು ವಿಜಯೇಂದ್ರ, ಮಹದೇವಸ್ವಾಮಿ, ಕೆಂಡಗಣ್ಣಪ್ಪ, ನಾಗೇಶ್, ಕುರುಬೂರು ಪ್ರದೀಪ್, ಪ್ರಸಾದ್ ನಾಯಕ, ಗೌರಿಶಂಕರ್, ಗುರುಸ್ವಾಮಿ, ಅಂಬಳೆ ಮಂಜುನಾಥ್, ಪರಶಿವಮೂರ್ತಿ, ಸಾತಗಳ್ಳಿ ಬಸವರಾಜ, ಸುಂದರಪ್ಪ, ಸತೀಶ್, ದೇವನೂರು ಮಹಾದೇವಪ್ಪ, ರಂಗರಾಜು, ಕೆಂಡಗಣಸ್ವಾಮಿ, ಶಿವಸ್ವಾಮಿ, ರವಿಕುಮಾರ್, ನಂಜುಂಡಸ್ವಾಮಿ, ನಾಗೇಂದ್ರ, ಕಮಲಮ್ಮ ಸೇರಿ ಇನ್ನಿತರರು ಇದ್ದರು.

RELATED ARTICLES
- Advertisment -
Google search engine

Most Popular