ಬೇಸಿಗೆಯ ಈ ಉರಿ ಬಿಸಿಲಿನಲ್ಲಿ ದೇಹವನ್ನು ಹೈಡ್ರೇಟೆಡ್ ಆಗಿ ಇರಿಸಿಕೊಳ್ಳಲು ಮಾಕ್‌ಟೈಲ್‌ಗಳು ಅತ್ಯುತ್ತಮ ಆಯ್ಕೆ. ಇವು ಕೇವಲ ರುಚಿಯಷ್ಟೇ ಅಲ್ಲದೆ, ಇವುಗಳಲ್ಲಿ ಬಳಸುವ ಪದಾರ್ಥಗಳು ನೈಸರ್ಗಿಕವಾಗಿ ತಂಪು ಗುಣವನ್ನು ಹೊಂದಿವೆ.

ಕಲ್ಲಂಗಡಿ-ಪುದೀನಾ ಮಾಕ್‌ಟೈಲ್
ಕಲ್ಲಂಗಡಿಯಲ್ಲಿ ನೀರಿನಂಶ ಹೆಚ್ಚಾಗಿರುವುದರಿಂದ ಇದು ಬೇಸಿಗೆಗೆ ಪರ್ಫೆಕ್ಟ್.
ತಯಾರಿಸುವ ವಿಧಾನ : ಕಲ್ಲಂಗಡಿ ರಸಕ್ಕೆ ತಾಜಾ ಪುದೀನಾ ಎಲೆಗಳು ಮತ್ತು ನಿಂಬೆ ರಸವನ್ನು ಸೇರಿಸಿ.
ಪ್ರಯೋಜನ : ಇದು ನಿರ್ಜಲೀಕರಣದಿಂದ ರಕ್ಷಿಸುತ್ತದೆ. ಇದರಲ್ಲಿರುವ ವಿಟಮಿನ್ A ಮತ್ತು C ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಮಾವು-ಪುದೀನಾ ಮಾಕ್ ಟೈಲ್
ಮಾವಿನ ಹಣ್ಣು ಎಂದರೆ ಎಲ್ಲರಿಗೂ ಇಷ್ಟ. ಇದರ ಕಾಂಬಿನೇಷನ್ ಅದ್ಭುತವಾಗಿರುತ್ತದೆ.
ತಯಾರಿಸುವ ವಿಧಾನ : ತಾಜಾ ಮಾವಿನ ಹಣ್ಣಿನ ತುಂಡುಗಳು, ನಿಂಬೆ ರಸ ಮತ್ತು ಪುದೀನಾ ಎಲೆಗಳನ್ನು ಸೇರಿಸಿ ತಯಾರಿಸಿ.
ಪ್ರಯೋಜನ: ಇದು ತಕ್ಷಣ ದೇಹಕ್ಕೆ ತಂಪು ನೀಡುತ್ತದೆ ಮತ್ತು ಆಂಟಿಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿದೆ. ಮಕ್ಕಳು ಮತ್ತು ದೊಡ್ಡವರಿಬ್ಬರಿಗೂ ಇದು ಇಷ್ಟವಾಗುತ್ತದೆ.

ಲೆಮನ್-ಜಿಂಜರ್ ಮಾಕ್‌ಟೈಲ್
ಜೀರ್ಣಕ್ರಿಯೆ ಮತ್ತು ರಿಫ್ರೆಶ್‌ಮೆಂಟ್‌ಗಾಗಿ ಇದು ಬೆಸ್ಟ್ ಡ್ರಿಂಕ್.
ತಯಾರಿಸುವ ವಿಧಾನ: ನಿಂಬೆ ರಸಕ್ಕೆ ತುರಿದ ಶುಂಠಿ (ಅಥವಾ ಶುಂಠಿ ಸಿರಪ್), ಸ್ವಲ್ಪ ಕಪ್ಪು ಉಪ್ಪು ಮತ್ತು ಪುದೀನಾ ಸೇರಿಸಿ. ಇದಕ್ಕೆ ಸೋಡಾ ಮತ್ತು ಐಸ್ ಕ್ಯೂಬ್ಸ್ ಹಾಕಿದರೆ ರುಚಿ ಹೆಚ್ಚುತ್ತದೆ.
ಪ್ರಯೋಜನ: ಶುಂಠಿ ಜೀರ್ಣಕ್ರಿಯೆಗೆ ಸಹಾಯ ಮಾಡಿದರೆ, ನಿಂಬೆ ಹಣ್ಣು ದೇಹವನ್ನು ಡಿಟಾಕ್ಸ್ ಮಾಡುತ್ತದೆ.
ಹಸಿ ಮಾವು-ನಿಂಬೆ-ಪುದೀನಾ ಮಾಕ್‌ಟೈಲ್

ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಇದು ರಾಮಬಾಣ.
ತಯಾರಿಸುವ ವಿಧಾನ: ಹಸಿ ಮಾವಿನ ಹಣ್ಣಿನ ತಿರುಳು , ನಿಂಬೆ ರಸ, ಪುದೀನಾ, ಕಪ್ಪು ಉಪ್ಪು ಮತ್ತು ಹುರಿದ ಜೀರಿಗೆ ಪುಡಿಯನ್ನು ಬಳಸಿ ಇದನ್ನು ತಯಾರಿಸಲಾಗುತ್ತದೆ.
ಪ್ರಯೋಜನ: ಇದು ಬಿಸಿಲಿನ ಹೊಡೆತದಿಂದ ರಕ್ಷಿಸುತ್ತದೆ ಮತ್ತು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ.

ಎಳನೀರು-ಜೀರಿಗೆ ಮಾಕ್‌ಟೈಲ್
ನೈಸರ್ಗಿಕ ಎಲೆಕ್ಟ್ರೋಲೈಟ್‌ಗಳ ಗಣಿ ಈ ಪಾನೀಯ.
ತಯಾರಿಸುವ ವಿಧಾನ : ತಾಜಾ ಎಳನೀರಿಗೆ ಹುರಿದ ಜೀರಿಗೆ ಪುಡಿ, ಸ್ವಲ್ಪ ಕಪ್ಪು ಉಪ್ಪು ಮತ್ತು ಸ್ವಲ್ಪ ನಿಂಬೆ ರಸವನ್ನು ಸೇರಿಸಿ.
ಪ್ರಯೋಜನ: ಜೀರಿಗೆಯು ಜೀರ್ಣಕ್ರಿಯೆಯನ್ನು ಸುಧಾರಿಸಿದರೆ, ಎಳನೀರು ದೇಹದ ಎಲೆಕ್ಟ್ರೋಲೈಟ್ ಸಮತೋಲನವನ್ನು ಕಾಪಾಡುತ್ತದೆ.
ಗಮನಿಸಿ: ಈ ಎಲ್ಲಾ ಮಾಕ್‌ಟೈಲ್‌ಗಳನ್ನು ಐಸ್ ಕ್ಯೂಬ್‌ಗಳೊಂದಿಗೆ ಸರ್ವ್ ಮಾಡಿದರೆ ಕುಡಿಯಲು ಇನ್ನು ಹೆಚ್ಚಿನ ಮಜಾ ನೀಡುತ್ತವೆ. ಇವು ನಿಮ್ಮನ್ನು ದಿನವಿಡೀ ಲವಲವಿಕೆಯಿಂದ ಇಡುತ್ತವೆ!



