ಯಳಂದೂರು ಆ ೦೮ : ಸಮೀಪದ ಗೂಳಿಪುರ ಗ್ರಾಮ ಪಂಚಾಯ್ತಿಯಲ್ಲಿ ಪ್ರಧಾನ ಮಂತ್ರಿ ಆವಾಜ್ ಯೋಜನೆ ಅಡಿ ೨೦೨೧ – ೨೨ನೇ ಸಾಲಿನ ಮನೆ ಮಂಜೂರಾತಿ ಪತ್ರವನ್ನು ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿ ವಸಂತ ಹಾಗೂ ಸದಸ್ಯರಾದ ಬೂದಂಬಳ್ಳಿ ಗಿರೀಶ್ ರವರು ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯ ಬೂದಂಬಳ್ಳಿ ಗಿರೀಶ್ ಮಾತನಾಡಿ ಈ ವರ್ಷದಲ್ಲಿ ನಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯ ವಾರ್ಡ್ನ ನಿವಾಸಿಗಳಾದ ಬೂದಂಬಳ್ಳಿ ಗ್ರಾಮದ ಶಿಲ್ಪಾ ನಾಗರಾಜ್ ಹಾಗೂ ಬೂದಂಬಳ್ಳಿ ಮೋಳೆ ಭಾಗ್ಯಲಕ್ಷ್ಮಿ, ಕುಮಾರ್, ರಂಗಮ್ಮ, ಚಿನ್ನಮ್ಮ, ರುದ್ರಮ್ಮ ಎಂಬ ನಿವಾಸಿಗಳಿಗೆ ಮಂಜೂರಾತಿ ಪತ್ರವನ್ನು ನೀಡಲಾಗಿದೆ. ಮಂಜೂರಾತಿ ಪತ್ರ ಪಡೆದ ನಂತರ ಅದನ್ನು ವ್ಯರ್ಥ ಮಾಡದೇ ಆದಷ್ಟು ಬೇಗನೆ ಮನೆ ಕಟ್ಟಿಕೊಂಡು ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು. ಮನೆ ಕಟ್ಟುವ ಮೊದಲೇ ಇನ್ನೆರಡು ದಿನದಲ್ಲಿ ಮೊದಲ ಕಂತಿನ ಹಣ ಫಲಾನುಭವಿಯ ಖಾತೆಗೆ ಜಮಾ ಆಗಲಿದ್ದು, ಅದೇ ಹಣದಿಂದ ಮನೆ ಕೆಲಸ ಪ್ರಾರಂಭಮಾಡಬಹುದು. ೧೫ ದಿನಗಳ ಒಳಗಾಗಿ ಪೂರಕ ದಾಖಲೆ ಪತ್ರಗಳನ್ನು ಸಲ್ಲಿಸಿ ಜಿಪಿಎಸ್ ಮಾಡಿಸಿಕೊಳ್ಳಬೇಕು. ನಂತರ ಕಾಮಗಾರಿ ಆರಂಭಿಸಬೇಕು. ೪ ಹಂತದಲ್ಲಿ ಅನುದಾನದ ಹಣ ತಮ್ಮ ಬ್ಯಾಂಕ್ ಖಾತೆಗೆ ಜಮೆ ಆಗಲಿದೆ. ೬ ತಿಂಗಳ ಒಳಗಾಗಿ ಕೆಲಸ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಭಿರುದ್ದಿ ಅಧಿಕಾರಿ ವಸಂತ, ಪಂಚಾಯತಿ ಕಾರ್ಯದರ್ಶಿ ನಾಗರಾಜ್, ಸದಸ್ಯರಾದ ನಾಗಣ್ಣ, ಬೂದಂಬಳ್ಳಿ ಶಂಕರ್, ಜಡೇಸ್ವಾಮಿ, ಮುಖಂಡ ಬಸವರಾಜ್‌ನ ಸೇರಿದಂತೆ ಇತರರು ಹಾಜರಿದ್ದರು.