Monday, April 27, 2026
Google search engine

Homeಸ್ಥಳೀಯಮಧುರವಾದ ಗೀತೆಗಳ ಕೇಳುವಿಕೆಯಿಂದ ಸಂತೋಷ ಹೆಚ್ಚಾಗುವುದು : ಉಮ್ಮತ್ತೂರು ಇಂದುಶೇಖರ್

ಮಧುರವಾದ ಗೀತೆಗಳ ಕೇಳುವಿಕೆಯಿಂದ ಸಂತೋಷ ಹೆಚ್ಚಾಗುವುದು : ಉಮ್ಮತ್ತೂರು ಇಂದುಶೇಖರ್

ಚಾಮರಾಜನಗರ : ಮಧುರವಾದ ಗೀತೆಗಳ ಕೇಳುವಿಕೆಯಿಂದ ಸಂತೋಷ ಹೆಚ್ಚಾಗುವುದು. ಇಂಚರ ಗಾಯೋನೋತ್ಸವದ ಮೂಲಕ ರಾಜ್ಯದ ಹಲವು ಕಲಾವಿದರಿಗೆ ವೇದಿಕೆಯನ್ನು ಸೃಷ್ಟಿಸಲಾಗಿದೆ ಸಂಗೀತದ ಮೂಲಕ ಸರ್ವಶಾಂತಿಯನ್ನು ಪಡೆಯಬಹುದು. ಸರ್ವರೋಗಕ್ಕೂ ಸಂಗೀತವೇ ಮದ್ದು ಎಂದು ಜಿಲ್ಲಾ ವಕೀಲರ ಸಂಘದ ನಿಕಟ ಪೂರ್ವ ಅಧ್ಯಕ್ಷ ರಾದ ಉಮ್ಮತ್ತೂರು ಇಂದುಶೇಖರ್ ತಿಳಿಸಿದರು.

ಅವರು ಐಸಿರಿ ಮ್ಯೂಸಿಕ್ ಮೈಸೂರು ಅರ್ಪಿಸುವ ಇಂಚರ ಗಾನೋತ್ಸವ ಸೀಸನ್ ೧ ಉದ್ಘಾಟಿಸಿ ಮಾತನಾಡಿ ಚಾಮರಾಜನಗರ ದಲ್ಲಿ ರಾಜ್ಯದ ಹಲವಾರು ಪ್ರಸಿದ್ಧ ಗಾಯಕರ ಮೂಲಕ ಉತ್ತಮ ಸುಮಧುರ ಕನ್ನಡ ಚಲನ ಚಿತ್ರ ಗೀತೆಗಳ ಕರೋಕೆ ಕಾರ್ಯಕ್ರಮ ಏರ್ಪಡಿಸಿ ಕಲಾವಿದರಿಗೆ ಹಾಗೂ ಕೇಳುಗರಿಗೆ ಮನಸ್ಸು ಸಂತೋಷಪಡಿಸುವ ಕಾರ್ಯ ಇದಾಗಿದೆ. ಸಂಗೀತ ಮನಸ್ಸಿಗೆ ಆನಂದ ನೀಡುವುದು ಎಂದರು.

ಮುಖ್ಯ ಅತಿಥಿಯಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸುರೇಶ್ ಎನ್ ಋಗ್ವೇದಿ ಮಾತನಾಡಿ ಮಾನವನಿಗೆ ಸಂಗೀತ ಆನಂದಮಯವನ್ನುತರುತ್ತದೆ. ಇಂಚರಗಾನೋತ್ಸವದ ಮೂಲಕ ಗಾಯನದ ಹಬ್ಬವನ್ನು ಚಾಮರಾಜನಗರದಲ್ಲಿ ರೂಪಿಸಿದ ಉಮ್ಮತೂರು ಇಂದುಶೇಖರ್ ಅವರಿಗೆ ಧನ್ಯವಾದಗಳು. ರಾಜ್ಯದ ವಿವಿಧ ಕಲಾವಿದರನ್ನು ಚಾಮರಾಜನಗರಕ್ಕೆ ಆಹ್ವಾನಿಸಿ ಸುಮಧುರವಾದ ಸಂಗೀತ ಗಾಯನವನ್ನು ನಡೆಸಿಕೊಟ್ಟ ಎಲ್ಲಾ ಗಾಯಕರಿಗೆ ಅಭಿನಂದನೆಗಳನ್ನು ಸಲ್ಲಿಸಿ ಮುಂದಿನ ದಿನಗಳಲ್ಲಿ ಇಂಚರಗಾನೋತ್ಸವದ ಮೂಲಕ ಮಕ್ಕಳ ಗಾಯನ ಕಾರ್ಯಕ್ರಮವನ್ನು ರೂಪಿಸಿ ಭವಿಷ್ಯದ ಕಲಾವಿದರನ್ನು ರೂಪಿಸುವ ಜವಾಬ್ದಾರಿಯನ್ನು ಇಂದುಶೇಖರ್ ಅವರು ವಹಿಸಿಕೊಳ್ಳಲಿ ಎಂದು ಮನವಿ ಮಾಡಿದರು.

ಕನ್ನಡ ಭಾಷೆಯ ಸಾವಿರಾರು ಹಾಡುಗಳು ಜಗತ್ಪ್ರಸಿದ್ಧವಾಗಿದೆ. ನೂರಾರು ವರ್ಷಗಳ ಸುಮಧುರವಾದ ಕನ್ನಡದ ಹಾಡುಗಳು ಪ್ರತಿಯೊಬ್ಬ ಕನ್ನಡಿಗನ ನಾಲಿಗೆಯಲ್ಲಿ ಸದಾ ಕಾಲ ಪ್ರತಿಧ್ವನಿಸುತ್ತ ನೆಮ್ಮದಿ ವಾತಾವರಣವನ್ನು ಸೃಷ್ಟಿ ಮಾಡಿದೆ. ಸಾಹಿತ್ಯ,ಸಂಗೀತ ಗಾಯನದ ಮೂಲಕ ಕನ್ನಡ ಸಾಹಿತ್ಯ ಸಂಸ್ಕೃತಿ ಪರಂಪರೆಯನ್ನು ಸದಾ ಕಾಲ ಉಳಿಸಿದ ಕೀರ್ತಿ ಕಲಾವಿದರಿಗೆ ಸಲ್ಲುತ್ತದೆ ಎಂದರು.

ಗಾಯಕರು ಹಾಗೂ ನಟರಾದ ಪಿಬಿ ಶ್ರೀನಿವಾಸ,ಎಸ್ ಪಿ ಬಾಲಸುಬ್ರಹ್ಮಣ್ಯ, ಜಾನಕಿ ಡಾ.ರಾಜಕುಮಾರ್, ಡಾ.ವಿಷ್ಣುವರ್ಧನ್, ಡಾ ಅಂಬರೀಷ್, ಶಂಕರ್ ನಾಗ್, ಡಾ.ಪುನೀತ್ ರಾಜಕುಮಾರ್ ಮುಂತಾದವರ ಗೀತೆಗಳನ್ನು ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿರುವ ಕಲಾವಿದರು. ಗಾಯನ ಗಮನ ಸೆಳೆಯಿತು. ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ ೬:೦೦ ವರೆಗೆ ನಿರಂತರವಾಗಿ ಹತ್ತಾರು ಹಾಡುಗಳನ್ನು ಗಾಯಕರು ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್. ಸ್ವಾಮಿ, ನಿವೃತ್ತ ಪ್ರಾಂಶುಪಾಲ ಎನ್. ನಾಗರಾಜು,ಜನಪದ ಗಾಯಕ ಸುರೇಶ್ ನಾಗರದನಹಳ್ಳಿ ಮುಖಂಡರಾದ ಆಲೂರು ಮಲ್ಲು, ಕೂಸಣ್ಣ ಕರಿ ನಂಜನಪುರ, ಆನಂದ ಭಗೀರಥ,ಪುಟ್ಟುವರ್ಧನ್, ಡಾ ಸುಗಂಧರಾಜ್,ಐಸಿರಿ ಸುರೇಶ್, ಲೋಕಾಯುಕ್ತ ಗುರುಶಾಂತು, ಜಯಜಾಗೃತಿ, ಎ. ಎಸ್ ಐ ಮಹದೇವಪ್ಪ,ಹರಿಪ್ರಸಾದ್,ಜಗದೀಶ್ ಕುತ್ನಿಕರ್, ರೂಪಶ್ರೀ, ಮಹದೇವಸ್ವಾಮಿ,ಕೋಮಲ ಕಠಾರಿ,ದೀಪಾ ಪಾಟೀಲ್, ರುಕ್ಮಿಣಿ, ಕೃಷ್ಣ, ಅನ್ನಪೂರ್ಣ ವಿ,ಗೋವಿಂದರಾಜು ಎಚ್. ಡಿ. ಕೋಟೆ, ಪ್ರಾರ್ಥನ,ಇದ್ದರು

RELATED ARTICLES
- Advertisment -
Google search engine

Most Popular