Sunday, April 20, 2025
Google search engine

Homeರಾಜ್ಯಇಂದಿನ ಯುವ ಜನಾಂಗ ಸತ್ಯಾಸತ್ಯತೆಯನ್ನು ತಿಳಿಯುವ ಪ್ರಯತ್ನ ಮಾಡಬೇಕು

ಇಂದಿನ ಯುವ ಜನಾಂಗ ಸತ್ಯಾಸತ್ಯತೆಯನ್ನು ತಿಳಿಯುವ ಪ್ರಯತ್ನ ಮಾಡಬೇಕು

ದಾವಣಗೆರೆ: ಗಾಂಧೀಜಿಯವರ ಜೀವನವೇ ಒಂದು ಸಂದೇಶವಾಗಿದ್ದು ಅವರಿಗೆ ಸತ್ಯಹರಿಶ್ಚಂದ್ರನ ಕಥೆ ಸದಾ ಕಾಡುತ್ತಿತ್ತು, ಇಂದಿನ ಯುವ ಜನಾಂಗ ಸತ್ಯಾಸತ್ಯತೆಯನ್ನು ತಿಳಿಯುವ ಪ್ರಯತ್ನ ಮಾಡಬೇಕೆಂದು ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ. ತಿಳಿಸಿದರು.

ಅವರು ಜಿಲ್ಲಾ ಅಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಮಹಾನಗರ ಪಾಲಿಕೆ, ಎನ್.ಸಿ.ಸಿ, ಎನ್.ಎಸ್.ಎಸ್.ಘಟಕ, ಗ್ರಾಮ ಸ್ವರಾಜ್ ಅಭಿಯಾನದ ಸಂಯುಕ್ತಾಶ್ರಯದಲ್ಲಿ ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ಏರ್ಪಡಿಸಲಾದ ಕ್ವಿಟ್ ಇಂಡಿಯಾ ಚಳುವಳಿ ಒಂದು ನೆನಪು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಗಾಂಧೀಜಿಯವರು ಸತ್ಯಹರಿಶ್ಚಂದ್ರರ ಕಥೆಯನ್ನು ಓದುತ್ತಿದ್ದರು. ಆದರೆ ನಮ್ಮ ಯುವ ಜನಾಂಗ ಹೆಚ್ಚು ಸಾಮಾಜಿಕ ಜಾಲತಾಣಗಳ ಮೇಲೆ ಅವಲಂಭಿತವಾಗಿದ್ದು ಇಲ್ಲಿ ಸತ್ಯವನ್ನು ಮರೆ ಮಾಚುವ ಪ್ರಸಂಗ ಬರಬಾರದು ಮತ್ತು ಸತ್ಯತೆ ಬಗ್ಗೆ ಪರಿಶೀಲನೆಯನ್ನು ಮಾಡಬೇಕೆಂದು ವಿದ್ಯಾರ್ಥಿಗಳ ಕುರಿತು ಕಿವಿ ಮಾತು ಹೇಳಿದರು.

ಸ್ವಾತಂತ್ರ್ಯ ಬಂದು 75 ವರ್ಷಗಳಾಗಿದ್ದು ಅಮೃತ ಮಹೋತ್ಸವವನ್ನು ಆಚರಣೆ ಮಾಡಿಕೊಳ್ಳುತ್ತಿದ್ದೇವೆ. ಸ್ವಾತಂತ್ರ್ಯ ಪೂರ್ವದ 1942 ರ ಆಗಸ್ಟ್ 8 ರಂದು 83 ವರ್ಷಗಳ ಹಿಂದೆ ಕ್ವಿಟ್ ಇಂಡಿಯಾ ಚಳುವಳಿ ಆರಂಭವಾಗಿತ್ತು. ಕ್ವಿಟ್ ಇಂಡಿಯಾ ಚಳುವಳಿ ಸ್ವಾತಂತ್ರ್ಯ ಗಳಿಸಲು ಸಮುದಾಯ ಚಳುವಳಿಯಾಗಿತ್ತು, ಆಗ ಎಲ್ಲರ ಉದ್ದೇಶ ಒಂದೇ ಆಗಿತ್ತು ಬ್ರಿಟಿಷರನ್ನು ಭಾರತದಿಂದ ತೊಲಗಿಸಿ ಸ್ವಾಂತ್ರಂತ್ರ್ಯ ಗಳಿಸುವುದಾಗಿತ್ತು ಎಂದರು.

ಗಾಂಧೀಜಿಯವರು ಈ ದೇಶದ ಮಹಾನ್ ಸಂತ, ಕ್ವಿಟ್ ಇಂಡಿಯಾ ಚಳುವಳಿಯನ್ನು ನಾವು ಎರಡು ಕಾರಣಕ್ಕಾಗಿ ನೆನಪಿಸಿಕೊಳ್ಳಬೇಕಾಗಿದೆ. ಮೊದಲನೆಯದು ಈ ಚಳುವಳಿಯು ನಡೆಯುವ ಪೂರ್ವದಲ್ಲಿ ಸ್ವಾತಂತ್ರ್ಯಕ್ಕಾಗಿ ಅನೇಕ ಚಳುವಳಿಗಳು ನಡೆದುಹೋಗಿವೆ. ಎರಡನೆಯದಾಗಿ ಈ ಚಳುವಳಿಯ ನಂತರ ಮತ್ತಾವುದೇ ಚಳುವಳಿ ನಡೆಯಲಿಲ್ಲ, 1947 ರ ಆಗಸ್ಟ್ 15 ಕ್ಕೆ ಸ್ವಾತಂತ್ರ್ಯ ಸಿಗುತ್ತದೆ.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಇಟ್ನಾಳ್, ಮಹಾನಗರ ಪಾಲಿಕೆ ಆಯುಕ್ತರಾದ ರೇಣುಕಾ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೊಟ್ರೇಶ್, ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಹೆಚ್.ಎಂ.ಮರುಳಸಿದ್ದಪ್ಪ, ಎನ್.ಎಸ್.ಎಸ್.ವಿಭಾಗೀಯ ಅಧಿಕಾರಿ ಪ್ರದೀಪ್, ಎನ್.ಸಿ.ಸಿ.ಸುಬೇದಾರ್ ಮಾಲುಂಜಾಕರ್, ಹವಾಲ್ದಾರ್ ಧರ್ಮವೀರ್, ಗ್ರಾಮ ಸ್ವರಾಜ್ ಅಭಿಯಾನ್ ಆವರಗೆರೆ ರುದ್ರಮುನಿ, ಸ್ವಾತಂತ್ರ್ಯ ಯೋಧರ ಉತ್ತರಾಧಿಕಾರಿಗಳ ಸಂಘದ ಯುವ ಕಾರ್ಯಕರ್ತೆ ಉಷಾರಾಣಿ, ಚಿತ್ರಿಕಿ ಶಿವಕುಮಾರ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ತೇಜಸ್ವಿ ಪಟೇಲ್ ಹಾಗೂ ವಿವಿಧ ಕಾಲೇಜಿನ ಉಪನ್ಯಾಸಕರು, ಎನ್.ಸಿ.ಸಿ. ಕೆಡೆಟ್, ಎನ್.ಎಸ್.ಎಸ್.ಸ್ವಯಂ ಸೇವಕರು ಭಾಗವಹಿಸಿದ್ದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಧನಂಜಯ ಪ್ರಾಸ್ತಾವಿಕವಾಗಿ ಮಾತನಾಡಿ ಗಾಂಧಿ ಭವನದಲ್ಲಿ ಗಾಂಧೀಜಿಯ ಚಿಂತನೆಗಳ ಕುರಿತು ಚಟುವಟಿಕೆಗಳು ನಿರಂತರವಾಗಿ ನಡೆಯಬೇಕಾಗಿದೆ. ಮತ್ತು ಇಲ್ಲಿ ಸುಸಜ್ಜಿತವಾದ ಗ್ರಂಥಾಲಯವು ಆರಂಭವಾಗಲಿದ್ದು ಓದುಗರಿಗೆ ಮುಕ್ತ ಅವಕಾಶ ಇರುತ್ತದೆ. ಗ್ರಂಥಾಲಯವನ್ನು ಶೀಘ್ರದಲ್ಲಿಯೇ ಆರಂಭಿಸಲಾಗುತ್ತದೆ. ಶಾಲಾ, ಕಾಲೇಜಿನ ವಿದ್ಯಾರ್ಥಿಗಳು ಗಾಂಧೀ ಭವನಕ್ಕೆ ಭೇಟಿ ನೀಡಿ ಇಲ್ಲಿನ ಗಾಂಧಿ ಗ್ಯಾಲರಿ ಮತ್ತು ದಂಡಿ ಯಾತ್ರೆಯ ಪುತ್ಥಳಿಗಳನ್ನು ವೀಕ್ಷಣೆ ಮಾಡಲು ಅವಕಾಶ ಕಲ್ಪಿಸಲಾಗಿದ್ದು ಜಿಲ್ಲೆಯ ಮಕ್ಕಳಿಗೆ ವೀಕ್ಷಣಾ ಸ್ಥಳವನ್ನಾಗಿ ಪರಿಚಯಿಸಬಹುದಾಗಿದೆ ಎಂದರು. ಕಾರ್ಯಕ್ರಮದಲ್ಲಿ ಇಟ್ಪಾ ಕಲಾವಿದರಾದ ಐರಣಿ ಚಂದ್ರು ಮತ್ತು ತಂಡದವರು ಜಾಗೃತಿ ಮತ್ತು ದೇಶಭಕ್ತಗೀತೆಗಳನ್ನು ಹಾಡಿದರು.

RELATED ARTICLES
- Advertisment -
Google search engine

Most Popular