ಮಂಡ್ಯ : ಚಲುವರಾಯಸ್ವಾಮಿ ವಿರುದ್ಧ ರಾಜ್ಯಪಾಲರಿಗೆ ಕೃಷಿ ಅಧಿಕಾರಿಗಳ ಹೆಸರಲ್ಲಿ ದೂರು ಸಲ್ಲಿಸಿರುವ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಶಾಸಕ ಡಿಸಿ ತಮ್ಮಣ್ಣ, ನಮ್ಮ ಕೈವಾಡ ಇದೆ ಎನ್ನುವುದಾದರೆ ಸಾಬೀತುಪಡಿಸಲಿ. ನಾವು ತನಿಖೆಗೆ ಸಿದ್ದ ಎಂದು ಹೇಳಿದ್ದಾರೆ.
ದೂರು ಪತ್ರ ಬರೆದಿರೋದು ಜೆಡಿಎಸ್ ನವರು ಎಂದು ಕಾಂಗ್ರೆಸ್ ನಾಯಕರು ಆರೋಪಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಸಾಕ್ಷ್ಯಾಧಾರ ಇದ್ದರೆ ರುಜುವಾತು ಮಾಡಲಿ ಎಂದರು.
ಕಾಂಗ್ರೆಸ್ ನವರು ವರ್ಗಾವಣೆ ಧಂದೆ ಮಾಡ್ತಿದ್ದಾರೆ ಎಂಬ ವಿಚಾರವಾಗಿ ಮಾತನಾಡಿ, ವರ್ಗಾವಣೆ ದಂಧೆ ಮಾಡ್ತಿದ್ದಾರೆ ಅನ್ನೋದನ್ನ ಜನರೆ ಮಾತನಾಡ್ತಿದ್ದಾರೆ. ಕೆಲಸಗಳಲ್ಲಿ ಕಮಿಷನ್ ಕೇಳ್ತಿದ್ದಾರೆ. ಇವೆಲ್ಲವು ನಿಮಗೆ ಗೊತ್ತಿದೆ ಆದರೆ ನೀವು ಯಾವುದನ್ನು ತೋರಿಸುವುದಿಲ್ಲ ಎಂದರು.