ಬಾಗಲಕೋಟೆ: ನಿವೃತ್ತಿಹೊಂದಿದ ಭಾರತೀಯ ಸೈನಿಕನಿಗೆ ಕೆರೂರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡುವ ಮೂಲಕ ಅದ್ದೂರಿಯಾಗಿ ಸ್ವಾಗತ ಕೋರಲಾಗಿದೆ.

ಬದಾಮಿ ತಾಲೂಕಿನ ಕೆರೂರ ನಗರದ ನಿವಾಸಿ ಯಲ್ಲಪ್ಪ ಚೂರಿ 21 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿ, ನಿವೃತ್ತರಾಗಿದ್ದಾರೆ. ಅವರಿಗೆ ಗ್ರಾಮಸ್ಥರು ಹಾಗೂ ಕುಟುಂಬಸ್ಥರಿಂದ ಸ್ವಾಗತ ಕೋರಿದ್ದಾರೆ.
ನಿವೃತ್ತ ಸೈನಿಕರು, ಸೇನೆಯ ಅಧಿಕಾರಿಗಳು ಸಭೆಯಲಿ ಭಾಗಿಯಾಗಿದ್ದಾರೆ. ಇದೇ ವೇಳೆ ಮಾಜಿ ಸೈನಿಕರಿಗೆ ಸಾಧಕರು ಹಾಗೂ ಕೆಲವು ಗಣ್ಯರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
