Saturday, April 19, 2025
Google search engine

Homeರಾಜ್ಯಮುಂದಿನ ಪ್ರಧಾನಿ ಆಗುವ ಯೋಗ ಒಬ್ಬ ಮಹಿಳೆಗಿದೆ: ಸ್ಫೋಟಕ ಭವಿಷ್ಯ ನುಡಿದ ಕಾಲಜ್ಞಾನಿ ಡಾ. ಯಶ್ವಂತ...

ಮುಂದಿನ ಪ್ರಧಾನಿ ಆಗುವ ಯೋಗ ಒಬ್ಬ ಮಹಿಳೆಗಿದೆ: ಸ್ಫೋಟಕ ಭವಿಷ್ಯ ನುಡಿದ ಕಾಲಜ್ಞಾನಿ ಡಾ. ಯಶ್ವಂತ ಗುರೂಜಿ

ತುಮಕೂರು: ಮುಂದಿನ ಪ್ರಧಾನಿ ಆಗುವ ಯೋಗ ಒಬ್ಬ ಮಹಿಳೆಗಿದೆ ಎಂದು ತುಮಕೂರಿನ ನೊಣವಿನಕೆರೆಯಲ್ಲಿ ಕಾಲಜ್ಞಾನಿ ಡಾ. ಯಶ್ವಂತ ಗುರೂಜಿ ಸ್ಫೋಟಕ ಭವಿಷ್ಯ ನುಡಿದಿದ್ದಾರೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯುತ್ತೆ ಅಂತಾ ಗುರೂಜಿ ಭವಿಷ್ಯ ನುಡಿದಿದ್ದು, ಆ ಭವಿಷ್ಯ ನಿಜ ಆಗಿದೆ. ಇದೀಗ ರಾಷ್ಟ್ರ ರಾಜಕಾರಣದ ಭವಿಷ್ಯ ನುಡಿದಿದ್ದಾರೆ.

ಇಂದಿರಾಗಾಂಧಿ ನಂತರ ರಾಷ್ಟ್ರ ರಾಜಕಾರಣದ ಚುಕ್ಕಾಣಿಯನ್ನು ಮಹಿಳೆಯೇ ಹಿಡಿಯಲಿದ್ದಾರೆ. ಮಹಾಶಿವರಾತ್ರಿ ಹಬ್ಬದ ನಂತರ ಒಂದು ಶಕ್ತಿ ಅಂದರೆ ಒಂದು ಸ್ತ್ರೀ ದೇಶವನ್ನು ಆಳುತ್ತಾರೆ ಎಂದು ಕಾಲಜ್ಞಾನದ ಭವಿಷ್ಯವಾಣಿ ಹೇಳುತ್ತಿದೆ ಎಂದಿದ್ದಾರೆ.

35 ವರ್ಷಗಳ ಹಿಂದಿನ ದಿನಮಾನಗಳಲ್ಲಿ ಒಂದು ಸ್ತ್ರಿ ದೇಶವನ್ನು ಆಳಿರುತ್ತಾಳೆ.  ಮತ್ತೆ ಮಹಾಶಿವರಾತ್ರಿ ನಂತರ ರಾಷ್ಟ್ರ ರಾಜಕಾರಣದಲ್ಲಿ ದೊಡ್ಡ ಬದಲಾವಣೆ ಆಗಲಿದೆ. ಕಾಲಜ್ಞಾನ ಭವಿಷ್ಯದ ಪ್ರಕಾರ ಒಂದು ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವಿಲ್ಲ. ಅತಂತ್ರ ಪರಿಸ್ಥಿತಿ ಆಗುತ್ತದೆ. ಮಿತ್ರಗಳ ಪಕ್ಷಗಳ ಸಹಾಯದಿಂದ ಒಂದು ಪಕ್ಷ ಅಧಿಕಾರಕ್ಕೆ ಬರುತ್ತೆ. ಇಂತಹದ್ದೇ ಪಕ್ಷ ಅಧಿಕಾರದ ಗದ್ದುಗೆ ಏರುತ್ತದೆ ಎಂದು ಹಾಗೂ ಪ್ರಧಾನಿ ಯೋಗವಿರುವ ಸ್ತ್ರೀ ಯಾರೆಂದು ಮಕರ ಸಂಕ್ರಮಣದ ಹಬ್ಬದಂದು ಹೇಳಲಾಗ್ತದೆ. ಈಗಿನ ಸಂವತ್ಸರದ ಫಲಾಫಲಗಳನ್ನು ನೋಡಿದಾಗ ಒಬ್ಬ ಸ್ತ್ರೀ ದೇಶ ಆಳ್ತಾಳೆ ಎಂದು ಹೇಳಿದ್ದಾರೆ.

ಮಹಾಶಿವರಾತ್ರಿ ಹಬ್ಬದ ಒಳಗೆ ಲೋಕಸಭೆ ಚುನಾವಣೆ ನಡೆದರೆ  ಪ್ರಧಾನಿ ಮೋದಿಗೆ ಅವಕಾಶವಿದೆ. ಮಾರ್ಚ್ ನಂತರ ಚುನಾವಣೆ ನಡೆದ್ರೆ ಬೇರೆ ಪಕ್ಷ ಅಧಿಕಾರಕ್ಕೆ ಬರುತ್ತದೆ. ಆ ಒಬ್ಬ ಮಹಿಳೆಯೇ ಪ್ರಧಾನಿ ಆಗೋ ಯೋಗವಿದೆ. ಆ ಸ್ತ್ರೀ ಯಾವುದೇ ಪಕ್ಷದವರು ಆಗಿರಬಹುದು. ಆ ಸ್ತ್ರೀ ದೇಶ ಆಳೋದು ಶತಃ ಸಿದ್ಧ ಎಂದು ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular