ಮೈಸೂರು : ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ 15 ನಿರ್ದೇಶಕ ಸ್ಥಾನಗಳಿಗೆ ಮೇ.1 ರಂದು ಚುನಾವಣೆ ನಡೆಯಲಿದ್ದು ಆಕಾಂಕ್ಷಿಗಳಾಗಿ ಬಹುತೇಕ ಶಿಕ್ಷಕರು ಸ್ಪರ್ದಾ ಕಣದಲ್ಲಿದ್ದಾರೆ.
ನಿರ್ದೇಶಕ ಸ್ಥಾನದ ಆಕಾಂಕ್ಷಿಗಳಾಗಿ ಸ್ಪರ್ದಿಸಿರುವ ಟಿ.ಕೆ.ಕೆಂಚೇಗೌಡ, ಎಸ್.ಎಲ್.ಕೃಷ್ಣಸ್ವಾಮಿ, ಕೆ.ಎಸ್.ಮಧುಸೂದನ್, ಜಿ.ಮಹೇಶ್, ಡಿ.ಮಾಲೇಗೌಡ, ಜಿ.ಜೆ.ಪ್ರಕಾಶ್, ಎಸ್.ರಘು, ಎಂ.ಶಿವಪ್ಪ, ಸುರೇಶ್, ವೆಂಕಟೇಶ.ವಿ, ಹೆಚ್.ಅಂಬುಜಾ, ರಾಧ, ರೇಣುಕಾ, ಪಿ.ಎನ್.ಶಾಮಲಾ, ಹೆಚ್.ಎ.ಸುಮತಿ ಅವರ ತಂಡದೊಂದಿಗೆ ಎದುರಾಳಿ ತಂಡ ಕಣದಲ್ಲಿದೆ.

ಮಾಲೇಗೌಡ, ಎಸ್.ರಘು, ಎಂ.ಶಿವಪ್ಪ ಮತ್ತು ಸುಮತಿ ಅವರುಗಳ ನೇತೃತ್ವದ ತಂಡ ಶಿಕ್ಷಕ ಬಾಂಧವರ ಮನೆ ಮನೆಗೆ ತೆರಳಿ ತಮ್ಮನ್ನು ಬೆಂಬಲಿಸುವಂತೆ ಕೋರುವುದರ ಜತೆಗೆ ನಾವು ಚುನಾಯಿತರಾದರೆ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವ ಭರವಸೆಯ ಮಾತುಗಳನ್ನಾಡುತ್ತಿದ್ದಾರೆ.
ಪ್ರಚಾರದ ಸಂದರ್ಭದಲ್ಲಿ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸೋಮೇಗೌಡ, ಪರಸ್ಪರ ಸ್ನೇಹ ಬಳಗದ ಅಧ್ಯಕ್ಷ ಟಿ.ಪುರುಷೋತ್ತಮ್ ಮತ್ತು ಕ್ರಿಯಾಶೀಲಾ ಶಿಕ್ಷಕರಾದ ಸೈಯದ್ ರಿಜ್ವಾನ್, ಭಗವಾನ್ ಮತ್ತು ಬಳಗದ ಎಲ್ಲಾ ಸದಸ್ಯರು ತಂಡದ ಗೆಲುವಿಗೆ ಶ್ರಮಿಸುತ್ತಿದ್ದು ಗೆಲುವಿನ ಭರವಸಡ ವ್ಯಕ್ತಪಡಿಸುತ್ತಿದ್ದಾರೆ.
ಚುನಾವಣಾ ಪ್ರಚಾರದ ಸಂಧರ್ಭದಲ್ಲಿ ಉತ್ತರ ವಲಯದಿಂದ ಅವಿರೋಧವಾಗಿ ಆಯ್ಕೆಯಾಗಿರುವ ಮೈಸೂರು ಸತ್ಯ ನಗರದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಸರ್ಮಧಿ ಖಾನಂ ಮತ್ತು ಅವರ ತಂಡದವರನ್ನು ಪರಸ್ಪರ ಬಳಗದವರು ಅಭಿನಂದಿಸಿದರು.

ಈ ಸಂದರ್ಭದಲ್ಲಿ ಶಿಕ್ಷಕರಾಸ ಬಲರಾಮ್, ಧನಂಜಯ, ಕಿರಣ, ಮಧು, ಮಹದೇವ್, ಮಣಿಕಂಠ, ಮಂಜುಳ, ಪ್ರೇಮ, ರಾಣಿ, ಶಂಕರೇಗೌಡ, ಶಿವಕುಮಾರ್, ಶ್ರೀಧರ, ಸುನಂದ, ವಾಸು, ದೀಪಕ್, ರೇಖಾ, ಕಾಂತರಾಜು, ಮಂಜುನಾಥ್, ಅನುಕಲಾ, ಬಲರಾಮ್ ಸೇರಿದಂತೆ ಇನ್ನಿತರರು ಮತ ಭೇಟಿಯಲ್ಲಿ ಭಾಗಿಯಾಗಿದ್ದಾರೆ.



