Friday, May 1, 2026
Google search engine

Homeರಾಜ್ಯಶಿವಮೊಗ್ಗ-ಬೆಂಗಳೂರು ನಡುವಿನ ಇಂಡಿಗೋ ವಿಮಾನ ಹಾರಾಟ ಸ್ಥಗಿತ..!

ಶಿವಮೊಗ್ಗ-ಬೆಂಗಳೂರು ನಡುವಿನ ಇಂಡಿಗೋ ವಿಮಾನ ಹಾರಾಟ ಸ್ಥಗಿತ..!

ಶಿವಮೊಗ್ಗ: ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದ್ದರೂ, ಇಂಡಿಗೋ ವಿಮಾನಯಾನ ಸಂಸ್ಥೆಯು ಹಲವು ಕಾರಣಗಳನ್ನ ನೀಡಿ ಬೆಂಗಳೂರು ಮತ್ತು ಶಿವಮೊಗ್ಗ ನಡುವಿನ ಹಾರಾಟವನ್ನ ನಿಲ್ಲಿಸಿದೆ. ಏ.30ರ ಮಧ್ಯಾಹ್ನ 2:30ಕ್ಕೆ ವಿಮಾನ ಕೊನೆ ಹಾರಾಟ ಮಾಡಿದ್ದು, ಈ ಮೂಲಕ ಕೇವಲ 33 ತಿಂಗಳಲ್ಲೇ ಇಂಡಿಗೋ ಸಂಸ್ಥೆ ಪ್ರಯಾಣ ಸ್ಥಗಿತಗೊಳಿಸಿದಂತಾಗಿದೆ.

2023ರ ಆಗಸ್ಟ್ 11 ರಂದು ಇಂಡಿಗೋ ತನ್ನ ಮೊದಲ ಸೇವೆ ಆರಂಭಿಸಿತ್ತು. ಇದರಿಂದ ಮಲೆನಾಡು ಮತ್ತು ಮಧ್ಯ ಕರ್ನಾಟಕದ ಜನರಿಗೆ ಅನುಕೂಲವಾಗಿತ್ತು. 33 ತಿಂಗಳ ಅವಧಿಯಲ್ಲಿ 1 ಲಕ್ಷಕ್ಕೂ ಹೆಚ್ಚು ಜನರಿಗೆ ಸಂಸ್ಥೆ ಸೇವೆ ಒದಗಿಸಿತ್ತು. ತನ್ನ ವೆಬ್‍ಸೈಟ್‍ನಲ್ಲಿ ಇಂದಿನಿಂದ ಬೆಂಗಳೂರು–ಶಿವಮೊಗ್ಗ ನಡುವಿನ ಟಿಕೆಟ್ ಬುಕ್ಕಿಂಗ್ ಸ್ಥಗಿತಗೊಳಿಸಿದೆ.

ಉಡಾನ್ ಯೋಜನೆಯಡಿ ರಾಜಧಾನಿಗೆ ಸಂಚಾರ ಸಾಧ್ಯವಿಲ್ಲ. ಅಲ್ಲದೇ ಡಿಜಿಸಿಎ ವಿಧಿಸಿದ ಹೊಸ ನಿಯಮಗಳಿಂದ ಪೈಲಟ್ ಹಾಗೂ ಸಿಬ್ಬಂದಿ ಕೊರತೆ ಕಂಡು ಬರುತ್ತಿದೆ ಹೀಗಾಗಿ ಬೆಂ-ಶಿವಮೊಗ್ಗ ವಿಮಾನ ಸೇವೆಯನ್ನ ಸ್ಥಗಿತಗೊಳಿಸಿದೆ.

ಈ ಹಿಂದೆ ಶಿವಮೊಗ್ಗ – ಬೆಂಗಳೂರು ನಡುವೆ ಸಂಚಾರಕ್ಕೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಒಪ್ಪಂದದಂತೆ ರಾಜ್ಯ ಸರ್ಕಾರ ಪ್ರತಿ ಟಿಕೆಟ್‌ಗೆ 500 ರೂ. ಸಹಾಯಧನ ನೀಡುತ್ತಿತ್ತು. 2025ರ ಆಗಸ್ಟ್‌ಗೆ ಒಪ್ಪಂದ ಅಂತ್ಯವಾಗಿತ್ತು. ಆದರೂ ಇಂಡಿಗೋ ಇಷ್ಟು ದಿನ ಸೇವೆ ನೀಡಿತ್ತು. ಇದೀಗ ಒಪ್ಪಂದ ನವೀಕರಣಕ್ಕೆ ರಾಜ್ಯ ಸರ್ಕಾರ ವಿಳಂಬ ಮಾಡುತ್ತಿದೆ.

ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್ ವ್ಯವಸ್ಥೆ ಪೂರ್ಣಗೊಂಡಿಲ್ಲ. ಮಳೆಗಾಲದ ಅವಧಿಯಲ್ಲಿ ವಿಮಾನ ರದ್ದು, ಲ್ಯಾಂಡಿಂಗ್ ಸಮಸ್ಯೆ ಉದ್ಭವಿಸಬಹುದು. ಹೀಗೆ ಹಲವು ಕಾರಣಗಳನ್ನು ಮುಂದಿಟ್ಟುಕೊಂಡು ಹಾರಾಟ ಸ್ಥಗಿತಗೊಳಿಸಲಾಗಿದೆ. 

RELATED ARTICLES
- Advertisment -
Google search engine

Most Popular