ನವದೆಹಲಿ : ಐಸಿಸಿ ಸೋಮವಾರ ಬಿಡುಗಡೆ ಮಾಡಿದ ಪುರುಷರ ವಾರ್ಷಿಕ ಏಕದಿನ ಶ್ರೇಯಾಂಕದಲ್ಲಿ ಭಾರತ ತಂಡ ಮೊದಲ ಸ್ಥಾನವನ್ನು ಉಳಿಸಿಕೊಂಡಿದೆ. ಆದರೆ, ಅಗ್ರಸ್ಥಾನದಲ್ಲಿದ್ದ ಭಾರತದ ಪಾಯಿಂಟ್ಸ್ ಸ್ವಲ್ಪ ಕಡಿಮೆಯಾಗಿದೆ.
ಭಾರತ ನಂ.1: ಭಾರತದ ರೇಟಿಂಗ್ 119 ರಿಂದ 118ಕ್ಕೆ ಇಳಿಕೆಯಾಗಿದೆ.
ನ್ಯೂಜಿಲೆಂಡ್ ಎರಡನೇ ಸ್ಥಾನ: 113 ರೇಟಿಂಗ್ ಪಾಯಿಂಟ್ಸ್‌ಗಳೊಂದಿಗೆ ನ್ಯೂಜಿಲೆಂಡ್ ಎರಡನೇ ಸ್ಥಾನದಲ್ಲಿದ್ದು, ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ವ್ಯತ್ಯಾಸ ಈಗ ಕೇವಲ 5 ಪಾಯಿಂಟ್ಸ್‌ಗಳು ಮಾತ್ರ.
ಆಸ್ಟ್ರೇಲಿಯಾ ಮೂರನೇ ಸ್ಥಾನ: ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ 109 ರೇಟಿಂಗ್‌ನೊಂದಿಗೆ ಮೂರನೇ ಸ್ಥಾನದಲ್ಲಿ ಮುಂದುವರಿದಿದೆ.
ದಕ್ಷಿಣ ಆಫ್ರಿಕಾಕ್ಕೆ ಲಾಭ: ಒಂದು ಸ್ಥಾನ ಜಿಗಿದಿರುವ ದಕ್ಷಿಣ ಆಫ್ರಿಕಾ (102 ರೇಟಿಂಗ್) ನಾಲ್ಕನೇ ಸ್ಥಾನಕ್ಕೇರಿದೆ.
ಕುಸಿದ ಪಾಕಿಸ್ತಾನ: ನಾಲ್ಕು ರೇಟಿಂಗ್ ಪಾಯಿಂಟ್ಸ್ ಕಳೆದುಕೊಂಡಿರುವ ಪಾಕಿಸ್ತಾನ (98 ರೇಟಿಂಗ್) ಐದನೇ ಸ್ಥಾನಕ್ಕೆ ಕುಸಿದಿದೆ.
ಪ್ರಮುಖ ಬದಲಾವಣೆಗಳು:
ಐರ್ಲೆಂಡ್ ಜಿಗಿತ: ಜಿಂಬಾಬ್ವೆಯನ್ನು ಹಿಂದಿಕ್ಕಿ ಐರ್ಲೆಂಡ್ 11ನೇ ಸ್ಥಾನಕ್ಕೆ ತಲುಪಿದೆ.
ಯುಎಸ್ಎ ಸಾಧನೆ: ಸ್ಕಾಟ್ಲೆಂಡ್ ತಂಡವನ್ನು ಹಿಂದಿಕ್ಕಿ ಯುಎಸ್ಎ (USA) 13ನೇ ಸ್ಥಾನಕ್ಕೇರಿದೆ.
ನೇಪಾಳಕ್ಕೆ ಹಿನ್ನಡೆ: ನೇಪಾಳ ತಂಡ 25ನೇ ಸ್ಥಾನಕ್ಕೆ ಕುಸಿದಿದೆ.
ಭಾರತ ಏಕದಿನ ಮತ್ತು ಟಿ20 ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ ತಂಡ ಪುರುಷರ ಟೆಸ್ಟ್ ಶ್ರೇಯಾಂಕ ಹಾಗೂ ಮಹಿಳೆಯರ ಏಕದಿನ ಮತ್ತು ಟಿ20 ಶ್ರೇಯಾಂಕದಲ್ಲಿ ನಂ.1 ಸ್ಥಾನದಲ್ಲಿದೆ. (ಏಜೆನ್ಸಿಸ್)



