Wednesday, May 13, 2026
Google search engine

Homeವಿದೇಶಹಾರ್ಮುಜ್ ಬಿಕ್ಕಟ್ಟು : ಆಸ್ಟ್ರೇಲಿಯಾ ಮತ್ತು ಬ್ರಿಟನ್ ನಾಯಕರೊಂದಿಗೆ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ...

ಹಾರ್ಮುಜ್ ಬಿಕ್ಕಟ್ಟು : ಆಸ್ಟ್ರೇಲಿಯಾ ಮತ್ತು ಬ್ರಿಟನ್ ನಾಯಕರೊಂದಿಗೆ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಚರ್ಚೆ

ವಾಷಿಂಗ್ಟನ್‌ : ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರು ಆಸ್ಟ್ರೇಲಿಯಾ ಮತ್ತು ಬ್ರಿಟನ್‌ನ ಹಿರಿಯ ನಾಯಕರೊಂದಿಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದಾರೆ. ಈ ಚರ್ಚೆಯಲ್ಲಿ ಮುಖ್ಯವಾಗಿ ಇರಾನ್ ವಿಷಯ ಮತ್ತು ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸಂಚಾರವನ್ನು ಸುರಕ್ಷಿತವಾಗಿ ಹಾಗೂ ಮುಕ್ತವಾಗಿಡುವ ಬಗ್ಗೆ ಒತ್ತು ನೀಡಲಾಗಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ ತಿಳಿಸಿದೆ.

ರೂಬಿಯೊ ಅವರು ಆಸ್ಟ್ರೇಲಿಯಾದ ವಿದೇಶಾಂಗ ಸಚಿವೆ ಪೆನ್ನಿ ವಾಂಗ್ ಅವರೊಂದಿಗೆ ಮಾತನಾಡಿದರು. ಇಬ್ಬರೂ ನಾಯಕರು “ಸ್ವತಂತ್ರ ಮತ್ತು ಮುಕ್ತ ಇಂಡೋ-ಪೆಸಿಫಿಕ್ ವಲಯ”ವನ್ನು ಉತ್ತೇಜಿಸುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು. ಅಮೆರಿಕ-ಆಸ್ಟ್ರೇಲಿಯಾ ಮೈತ್ರಿಯು ಈ ಪ್ರದೇಶದ ಭದ್ರತೆಗೆ ಅತ್ಯಂತ ನಿರ್ಣಾಯಕ ಎಂದು ರೂಬಿಯೊ ಬಣ್ಣಿಸಿದ್ದಾರೆ.

ರೂಬಿಯೊ ಅವರು ಬ್ರಿಟನ್‌ನ ವಿದೇಶಾಂಗ ಕಾರ್ಯದರ್ಶಿ ಯೆವೆಟ್ ಕೂಪರ್ ಅವರೊಂದಿಗೂ ಪ್ರತ್ಯೇಕವಾಗಿ ಚರ್ಚೆ ನಡೆಸಿದರು. ಈ ಮಾತುಕತೆಯಲ್ಲೂ ಹೋರ್ಮುಜ್ ಜಲಸಂಧಿಯಲ್ಲಿ ಸಮುದ್ರ ಮಾರ್ಗಗಳನ್ನು ಮುಕ್ತವಾಗಿಡುವ ವಿಚಾರವೇ ಪ್ರಮುಖವಾಗಿತ್ತು.

ಹಾರ್ಮುಜ್ ಜಲಸಂಧಿಯ ಮಹತ್ವ

ಹಾರ್ಮುಜ್ ಜಲಸಂಧಿಯು ವಿಶ್ವದ ಅತ್ಯಂತ ಪ್ರಮುಖ ಸಮುದ್ರ ಮಾರ್ಗಗಳಲ್ಲಿ ಒಂದಾಗಿದೆ. ಇದು ಪರ್ಷಿಯನ್ ಗಲ್ಫ್ ಅನ್ನು ಓಮನ್ ಕೊಲ್ಲಿ ಮತ್ತು ಅರಬ್ಬಿ ಸಮುದ್ರಕ್ಕೆ ಸಂಪರ್ಕಿಸುತ್ತದೆ. ವಿಶ್ವದ ತೈಲ ರಫ್ತಿನ ಬಹುಪಾಲು ಭಾಗವು ಇದೇ ಮಾರ್ಗದ ಮೂಲಕ ಸಾಗುತ್ತದೆ. ಈ ಮಾರ್ಗದಲ್ಲಿ ಯಾವುದೇ ಅಡೆತಡೆ ಉಂಟಾದರೆ, ಅದು ಜಾಗತಿಕ ತೈಲ ಮಾರುಕಟ್ಟೆ ಮತ್ತು ಅಂತರಾಷ್ಟ್ರೀಯ ವ್ಯಾಪಾರದ ಮೇಲೆ ತೀವ್ರ ಪರಿಣಾಮ ಬೀರುತ್ತದೆ.

ಭಾರತದ ದೃಷ್ಟಿಕೋನ : ಭಾರತವು ತನ್ನ ಅಗತ್ಯದ ಹೆಚ್ಚಿನ ಕಚ್ಚಾ ತೈಲವನ್ನು ಗಲ್ಫ್ ದೇಶಗಳಿಂದ ಆಮದು ಮಾಡಿಕೊಳ್ಳುವುದರಿಂದ, ಈ ಪ್ರದೇಶದ ಬೆಳವಣಿಗೆಗಳ ಮೇಲೆ ತೀವ್ರ ನಿಗಾ ಇರಿಸಿದೆ.

ಇಥಿಯೋಪಿಯಾದೊಂದಿಗೆ ಮಾತುಕತೆ : ಮಾರ್ಕೊ ರೂಬಿಯೊ ಅವರು ಇಥಿಯೋಪಿಯಾದ ವಿದೇಶಾಂಗ ಸಚಿವ ಗೆಡಿಯನ್ ತಿಮೋಥಿಯೋಸ್ ಅವರನ್ನೂ ಭೇಟಿಯಾದರು. ಪೂರ್ವ ಆಫ್ರಿಕಾದಲ್ಲಿ ಸಂಘರ್ಷಗಳನ್ನು ಕಡಿಮೆ ಮಾಡುವಲ್ಲಿ ಮತ್ತು ವಿವಾದಗಳನ್ನು ಪರಿಹರಿಸುವಲ್ಲಿ ಇಥಿಯೋಪಿಯಾದ ಪಾತ್ರವನ್ನು ಅವರು ಶ್ಲಾಘಿಸಿದರು. ಉಭಯ ದೇಶಗಳ ನಡುವಿನ ಭದ್ರತಾ ಪಾಲುದಾರಿ ಮತ್ತು ವ್ಯಾಪಾರ ಅವಕಾಶಗಳ ಬಗ್ಗೆಯೂ ಇಲ್ಲಿ ಚರ್ಚಿಸಿದ್ದಾರೆಂದು ತಿಳಿದು ಬಂದಿದೆ. (ಏಜೆನ್ಸಿಸ್)

RELATED ARTICLES
- Advertisment -
Google search engine

Most Popular