Saturday, April 19, 2025
Google search engine

Homeರಾಜ್ಯಸುದ್ದಿಜಾಲಬಳ್ಳಾರಿ: ಜನರಿಗೆ ಕುಡಿಯುವ ನೀರು ಸರಬರಾಜು ಮಾಡುವ ಮದರ್ ಟ್ಯಾಂಕ್ ಅವ್ಯವಸ್ಥೆಆಗರ-ಪಾ.ಸದಸ್ಯ ಮಿಂಚು ಶ್ರೀನಿವಾಸ್...

ಬಳ್ಳಾರಿ: ಜನರಿಗೆ ಕುಡಿಯುವ ನೀರು ಸರಬರಾಜು ಮಾಡುವ ಮದರ್ ಟ್ಯಾಂಕ್ ಅವ್ಯವಸ್ಥೆಆಗರ-ಪಾ.ಸದಸ್ಯ ಮಿಂಚು ಶ್ರೀನಿವಾಸ್ ದೂರು

ಪಾಲಿಕೆ ಆಯುಕ್ತ ರುದ್ರೇಶ್ ಭೇಟಿ, ಪರಿಶೀಲನೆ ಸರಿಪಡಿಸುವ ಭರವಸೆ

ಬಳ್ಳಾರಿ: ನಗರದ 35ನೇ ವಾರ್ಡ್ ಪಾಲಿಕೆ ಸದಸ್ಯ ಮಿಂಚು ಶ್ರೀನಿವಾಸ್ ನಗರಕ್ಕೆ ಕುಡಿಯುವ ನೀರು ಸರಬರಾಜಾಗುವ ಮದರ್ ಟ್ಯಾಂಕ್ ಶುದ್ದಿಯಾಗದೆ 8 ತಿಂಗಳುಗಳೆ ಕಳೆದರೂ ಪಾಲಿಕೆ ಅಧಿಕಾರಿಗಳು ನಿರ್ವಹಣೆ ಬಗ್ಗೆ ಗಮನಹರಿಸುತ್ತಿಲ್ಲ ಹಾಗೂ ಟ್ಯಾಂಕ್ ಪ್ರದೇಶ ಸಂಪೂರ್ಣ ಅನೈತಿಕ ಚಟುವಟಿಕೆಗಳಿಗೆ ತಾಣವಾಗಿದ್ದು ಈ ಹಿಂದೆ ಪ್ರತಿ ತಿಂಗಳಿಗೊಮ್ಮೆ ಬ್ಲೀಚಿಂಗ್ ಪೌಡರ್ ಸಿಂಪಡಿಸಿ ಹುಳ ಕ್ರಿಮಿ ಕೀಟಗಳು ಬಾರದಂತೆ ಗಮನಹರಿಸಲಾಗುತ್ತಿತ್ತು. ಆದರೆ ಇದೀಗ ಸಂಪೂರ್ಣ ಮರೀಚಿಕೆಯಾಗಿದೆ ಎಂದು ಪಾಲಿಕೆ ಮೇಯರ್ ಹಾಗೂ ಆಯುಕ್ತರಿಗೆ ದೂರು ನೀಡಿದ್ದರು. ಇನ್ನು ಈ ಪ್ರದೇಶದಲ್ಲಿ ಪುಂಡಪೋಕರಿಗಳು ಅನೈತಿಕ ಚಟುವಟಿಕೆಗಳಿಗೆ ಅಡ್ಡೆಯಾಗಿಕೊಂಡಿರುವ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿ ಶಾಸಕ ಭರತ್ ರೆಡ್ಡಿ ಅವರ ಗಮನಕ್ಕೂ ತರಲಾಗಿತ್ತು. ಹೀಗಾಗಿ ಇಂದು ಪಾಲಿಕೆ ಆಯುಕ್ತರು ಅಧಿಕಾರಿಗಳ ಜೊತೆಗೂಡಿ ಸ್ಥಳಕ್ಕೆ ಭೇಟಿ ನೀಡಿ , ಪರಿಶೀಲನೆ ನಡೆಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ. ಜನತೆ ಕುಡಿಯುವ ನೀರು ಕಲುಷಿತವಾಗಿ ಅನಾಹುತ ಆಗುವ ಮುನ್ನ ಸಮಸ್ಯೆ ಬಗೆಹರಿಯಲಿ ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

RELATED ARTICLES
- Advertisment -
Google search engine

Most Popular