Thursday, May 14, 2026
Google search engine

Homeದೇಶಪಿಎಂ ಮೋದಿ ವಿಶ್ವದ ಅತ್ಯಂತ ಜನಪ್ರಿಯ ನಾಯಕ : ನಾರ್ವೆ ಪತ್ರಿಕೆ ಪ್ರಶಂಸೆ

ಪಿಎಂ ಮೋದಿ ವಿಶ್ವದ ಅತ್ಯಂತ ಜನಪ್ರಿಯ ನಾಯಕ : ನಾರ್ವೆ ಪತ್ರಿಕೆ ಪ್ರಶಂಸೆ

ನವದೆಹಲಿ : ನಾರ್ವೆಯ ಪ್ರಮುಖ ವ್ಯಾಪಾರ ಸುದ್ಧಿಪತ್ರಿಕೆಯಾದ ‘ದಾಗನ್ಸ್ ನೈರಿಸ್ಲಿವ್’ (DN), ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿಶ್ವದ ಅತ್ಯಂತ ಜನಪ್ರಿಯ ರಾಜಕಾರಣಿ ಎಂದು ಬಣ್ಣಿಸಿದೆ. ಅಷ್ಟೇ ಅಲ್ಲದೆ, ನಾರ್ಡಿಕ್ ದೇಶಗಳ ಪ್ರಧಾನ ಮಂತ್ರಿಗಳು ಪಿಎಂ ಮೋದಿ ಅವರಿಂದ ನಾಯಕತ್ವ ಮತ್ತು ಸಾರ್ವಜನಿಕ ಬೆಂಬಲವನ್ನು ಹೇಗೆ ಗಳಿಸಬೇಕು ಎಂಬುದನ್ನು ಕಲಿಯಬೇಕು ಎಂದು ಸಲಹೆ ನೀಡಿದೆ.

ಪ್ರಧಾನಿ ಮೋದಿ ಅವರು ಮೇ 18 ರಂದು ನಾರ್ವೆಗೆ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ನಾರ್ವೆಯ ರಾಜ ಹರಾಲ್ಡ್ ಅವರು ಮೋದಿಯವರನ್ನು ಸ್ವಾಗತಿಸಲಿದ್ದಾರೆ. ಅವರು ಭಾರತ-ನಾರ್ಡಿಕ್ ಪ್ರಧಾನ ಮಂತ್ರಿಗಳ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ನಾರ್ಡಿಕ್ ದೇಶಗಳ ನಾಯಕರ ಜನಪ್ರಿಯತೆ ಸುಮಾರು 30% ರಷ್ಟಿದ್ದರೆ, ಪಿಎಂ ಮೋದಿಯವರ ಜನಪ್ರಿಯತೆ 70% ಕ್ಕಿಂತ ಹೆಚ್ಚಿದೆ ಎಂದು ಪತ್ರಿಕೆ ಉಲ್ಲೇಖಿಸಿದೆ. ಇಷ್ಟು ದೊಡ್ಡ ಜನಬೆಂಬಲ ಹೊಂದಿರುವ ಮತ್ತೊಬ್ಬ ನಾಯಕ ವಿಶ್ವದಲ್ಲಿ ಇಲ್ಲ ಎಂದು ಅದು ಹೇಳಿದೆ.

ಭಾರತವು ಸುಮಾರು 7% ದರದಲ್ಲಿ ಆರ್ಥಿಕ ಪ್ರಗತಿ ಸಾಧಿಸುತ್ತಿದ್ದು, ಇದು ಚೀನಾ ಸೇರಿದಂತೆ ಇತರ ಪ್ರಮುಖ ದೇಶಗಳಿಗಿಂತ ವೇಗವಾಗಿದೆ. 2050 ರ ವೇಳೆಗೆ ಭಾರತವು ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯಾಗುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ.

ಸೌರ ಮತ್ತು ಪವನ ಶಕ್ತಿಯ ಉತ್ಪಾದನೆಯಲ್ಲಿ ಭಾರತವು ವಿಶ್ವದಲ್ಲೇ 3ನೇ ಸ್ಥಾನದಲ್ಲಿದೆ. ಆರ್ಥಿಕ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆ ಒಟ್ಟೊಟ್ಟಿಗೆ ಸಾಗಬಹುದು ಎಂಬುದನ್ನು ಮೋದಿ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ.

ಭಾರತೀಯ ಜನತಾ ಪಾರ್ಟಿಯು 10 ಕೋಟಿಗೂ ಹೆಚ್ಚು ಸದಸ್ಯರನ್ನು ಹೊಂದಿರುವ ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷ ಎಂದು ಪತ್ರಿಕೆ ಬಣ್ಣಿಸಿದೆ.

ನಾರ್ಡಿಕ್ ನಾಯಕರಿಗೆ ನೀಡಿದ ಸಲಹೆ

ನಾರ್ವೆಯ ಪತ್ರಿಕೆಯು ತನ್ನ ಲೇಖನದಲ್ಲಿ, “ನಾರ್ಡಿಕ್ ನಾಯಕರು ತಮ್ಮ ಭಾರತೀಯ ಸಹವರ್ತಿಯ ಮಾತನ್ನು ಗಮನವಿಟ್ಟು ಕೇಳಬೇಕು. ಅವರ ಜೀವನದ ಹೋರಾಟ, ಸಾಮಾನ್ಯ ಹಿನ್ನೆಲೆಯಿಂದ ಬಂದು ಇಡೀ ದೇಶವನ್ನು ಒಗ್ಗೂಡಿಸಿರುವ ರೀತಿ ಪ್ರೇರಣಾದಾಯಕವಾಗಿದೆ,” ಎಂದು ಬರೆದಿದೆ. (ಏಜೆನ್ಸಿಸ್)

RELATED ARTICLES
- Advertisment -
Google search engine

Most Popular