Sunday, April 20, 2025
Google search engine

Homeರಾಜ್ಯಸುದ್ದಿಜಾಲಗೌಡಗೆರೆ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರ ಅವಿರೋಧ ಆಯ್ಕೆ

ಗೌಡಗೆರೆ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರ ಅವಿರೋಧ ಆಯ್ಕೆ

ನಾಯಕನಹಟ್ಟಿ: ಗೌಡಗೆರೆ ಗ್ರಾಮ ಪಂಚಾಯಿತಿಯಲ್ಲಿ ಎರಡನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಗಳಿಗೆ ಚುನಾವಣೆ ನಡೆಯಿತು. ಸಾಮಾನ್ಯ ಮಹಿಳೆ ಅಧ್ಯಕ್ಷ ಸ್ಥಾನಕ್ಕೆ ಮತ್ತು ಪರಿಶಿಷ್ಟ ಜಾತಿ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾಗಿದ್ದು ಅಧ್ಯಕ್ಷ ಸ್ಥಾನಕ್ಕೆ ಶ್ರೀಮತಿ ರಾಧಮ್ಮ ಬೋರಣ್ಣ, ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಸಣ್ಣಪ್ಪ ನಾಮಪತ್ರ ಸಲ್ಲಿಸಿದರು .

ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳ ವಿರುದ್ಧ ಯಾರೊಬ್ಬರೂ ನಾಮಪತ್ರ ಸಲ್ಲಿಸದ ಕಾರಣದಿಂದಾಗಿ ಅಧ್ಯಕ್ಷ ಸ್ಥಾನಕ್ಕೆ ಉಮೇದುವಾರಿಕೆ ಸಲ್ಲಿಸಿದ್ಧವರ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾ ಅಧಿಕಾರಿ ಕೆ ಎಚ್ ದಯಾನಂದ್ ತಿಳಿಸಿದ್ದಾರೆ. ಇನ್ನು ಗ್ರಾಮ ಪಂಚಾಯತಿಯ ವ್ಯಾಪ್ತಿಯ ಹಳ್ಳಿಗಳ ಸಾರ್ವಜನಿಕರು ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಇನ್ನು ಇದೆ ವೇಳೆ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಟಿ ರಂಗಪ್ಪ ಮಾತನಾಡಿ ನೂತನ ಅಧ್ಯಕ್ಷ ರಾಧಮ್ಮ ಬೋರಣ್ಣ ಹಾಗೂ ಉಪಾಧ್ಯಕ್ಷ ಸಣ್ಣಪ್ಪ ರವರು ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ವತೋಮುಖ ಅಭಿವೃದ್ಧಿಗಾಗಿ ಸರ್ವ ಸದಸ್ಯರ ಜೊತೆಗೂಡಿ ಉತ್ತಮ ಆಡಳಿತ ನಡೆಸುವಂತೆ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಅಭಿನಂದನೆ ತಿಳಿಸಿದರು.

ಇದೇ ಸಂದರ್ಭದಲ್ಲಿ ಪಟೇಲ್ ಜಿ ಎಂ ತಿಪ್ಪೇಸ್ವಾಮಿ ಎತ್ತಿನಹಟ್ಟಿ ಗೌಡ್ರು ಮಲ್ಲೂರಹಟ್ಟಿ ಗೌಡ್ರು ತಿಪ್ಪೇಸ್ವಾಮಿ. ಜಿ ಆರ್ ಅಶ್ವಥ್ ನಾಯಕ್, ಗೌಡ್ರು ಧನಂಜಯ್, ಗೌಡ್ರು ಸಣ್ಣ ರುದ್ರಪ್ಪ, ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಹನುಮಣ್ಣ ಭೀಮಗೊಂಡನಹಳ್ಳಿ, ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಎಸ್ ಓ ತಿಪ್ಪೇಸ್ವಾಮಿ, ಎಚ್ ಸಿ ತಿಪ್ಪೇಸ್ವಾಮಿ ರೈತ ಸೇವಾ ಸಹಕಾರ ಸಂಘ ನಾಯಕನಹಟ್ಟಿ, ಜಿ. ಬಿ. ಮುದಿಯಪ್ಪ, ಟಿ. ಬಸಪ್ಪ ನಾಯಕ, ಎಚ್‌ ಬಿ ತಿಪ್ಪೇಸ್ವಾಮಿ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರು ಜೋಗಿಹಟ್ಟಿ ಮಲ್ಲೂರಹಟ್ಟಿ ಜಿ ಆರ್ ನಾಗರಾಜ್, ಗೌಡಗೆರೆ ರಂಗನಾಥ್, ಕಾಂಗ್ರೆಸ್ ಪಕ್ಷದ ಓಬಿಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ ಟಿ ತಿಪ್ಪೇಸ್ವಾಮಿ ಗೌಡಗೆರೆ, ಶಂಕ್ರಪ್ಪ ಭೀಮಗೊಂಡನಹಳ್ಳಿ, ಜಿ ಡಿ ಆರ್ ತಿಪ್ಪೇಸ್ವಾಮಿ, ರಂಗಸ್ವಾಮಿ ಭೀಮಗೊಂಡನಹಳ್ಳಿ, ಗ್ರಾಮ ಪಂಚಾಯತಿಯ ಸದಸ್ಯರಾದ ಜಿ ಒ ಓಬಳೇಶ್, ಟಿ ರಂಗಪ್ಪ, ಶಾಂತಮ್ಮ, , ಮಂಜಕ್ಕ, ನಾಗಣ್ಣ ರೇವಕ್ಕ, ಬಿ ಸರೋಜಮ್ಮ, ಕೆ ಎಚ್ ಮಂಜುಳಾ, ಸೇರಿದಂತೆ ಪಿಡಿಒ ಕೆ ಗಂಗಾಧರ್ ನಾಯ್ಕ, ಸೇರಿದಂತೆ ಸಮಸ್ತ ಗೌಡಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ವಿವಿಧ ಹಳ್ಳಿಗಳ ಗ್ರಾಮಸ್ಥರು ಇದ್ದರು.

RELATED ARTICLES
- Advertisment -
Google search engine

Most Popular