Monday, May 18, 2026
Google search engine

Homeರಾಜಕೀಯಸಿಎಂ ಸ್ಥಾನ ಯಾರೊಬ್ಬರ ಆಸ್ತಿ ಅಲ್ಲ : ಸಿದ್ದರಾಮಯ್ಯ ಬದಲಾದರೆ ಪರಮೇಶ್ವರ್ ಸಿಎಂ : ಕೆ.ಎನ್...

ಸಿಎಂ ಸ್ಥಾನ ಯಾರೊಬ್ಬರ ಆಸ್ತಿ ಅಲ್ಲ : ಸಿದ್ದರಾಮಯ್ಯ ಬದಲಾದರೆ ಪರಮೇಶ್ವರ್ ಸಿಎಂ : ಕೆ.ಎನ್ ರಾಜಣ್ಣ

ತುಮಕೂರು :  ಸಿಎಂ ಸಿದ್ದರಾಮಯ್ಯ ಬದಲಾವಣೆಯಾದರೇ ಗೃಹ ಸಚಿವ ಪರಮೇಶ್ವರ್ ಸಿಎಂ ಆಗಲಿ ಎಂದು ಮಾಜಿ ಸಚಿವ ಕೆ.ಎನ್ ರಾಜಣ್ಣ ತಿಳಿಸಿದ್ದಾರೆ.

ಪರಮೇಶ್ವರ್ ಸಿಎಂ ಆಗಲು ಸಾಧನಾ ಸಮಾವೇಶ ಎಂಬ ವಿಚಾರ ಬಗ್ಗೆ  ಮಾಧ್ಯಮಗಳ ಜೊತೆ ಮಾತನಾಡಿದ ಕೆ.ಎನ್ ರಾಜಣ್ಣ,   ಹೌದು, ನಾವು ಅದನ್ನೇ ಬಯಸುತ್ತೇವೆ. ಸಿದ್ದರಾಮಯ್ಯ ಬದಲಾವಣೆ ಆದರೆ ಪರಮೇಶ್ವರ್  ಸಿಎಂ ಆಗಲಿ. 2013ರಲ್ಲಿ ಪರಮೇಶ್ವರ್ ಗೆದ್ದಿದ್ದರೇ ಸಿಎಂ ‍ಸ್ಥಾನ ಬಿಟ್ಟುಕೊಡ್ತಿದ್ರಾ? ಸಿಎಂ ಸ್ಥಾನ  ಬಿಟ್ಟು ಕೊಡದೇ ಇರಲು ಸಿದ್ದರಾಮಯ್ಯ ಮನೆ ಆಸ್ತಿ ಅಲ್ಲ.  ಸಿಎಂ ಸ್ಥಾನ ಯಾವುದೇ ರಾಜಕಾರಣಿಗಳ ಆಸ್ತಿ ಅಲ್ಲ ಎಂದರು.

ಕೇರಳದಲ್ಲಿ ರಾಜ್ಯ ನಾಯಕತ್ವ ಬದಲಾವಣೆ ಬಗ್ಗೆ ನಿರ್ಣಯ ಆಗಬಹುದು. ಏಕೆಂದರೆ ಇಂದು ಹೈಕಮಾಂಡ್ ಜತೆ ಸಿಎಂ ಬಹಳ ಹೊತ್ತು ಇರುತ್ತಾರೆ.  ಈ ವೇಳೆ ನಾಯಕತ್ವದ ಬಗ್ಗೆ ತೀರ್ಮಾನ ಆಗಬಹುದು.  ಸಿದ್ದರಾಮಯ್ಯ ಮುಂದುವರೆಯಲಿ ಎಂಬುದು ನನ್ನ ಅಭಿಪ್ರಾಯ. ಒಂದು ವೇಳೆ ಬಲಾವಣೆಯಾದರೆ ಜಿ.ಪರಮೇಶ್ವರ್ ಸಿಎಂ ಆಗಲಿ ಎಂದರು.

RELATED ARTICLES
- Advertisment -
Google search engine

Most Popular