ನವದೆಹಲಿ: ದೇಶದ ವಾಹನ ಸವಾರರಿಗೆ ಕೇಂದ್ರ ಸರ್ಕಾರ ಮತ್ತೊಮ್ಮೆ ಬೆಲೆ ಏರಿಕೆಯ ಶಾಕ್ ನೀಡಿದೆ. ಪೆಟ್ರೋಲ್ ದರ ಲೀಟರ್‌ಗೆ 2.83 ರೂ ಹಾಗೂ ಡೀಸೆಲ್ ದರ ಲೀಟರ್‌ಗೆ 2.82 ರೂ ಹೆಚ್ಚಳವಾಗಿದೆ.
ಕಳೆದ ಎರಡು ವಾರಗಳ ಅವಧಿಯಲ್ಲಿ ನಾಲ್ಕು ಬಾರಿ ಇಂಧನ ದರ ಪರಿಷ್ಕರಣೆ ನಡೆದಿದ್ದು, ಜನರಲ್ಲಿ ಆತಂಕ ಹೆಚ್ಚಿಸಿದೆ. ತೈಲ ಕಂಪನಿಗಳು ಜಾಗತಿಕ ಮಾರುಕಟ್ಟೆ ಪರಿಸ್ಥಿತಿಯನ್ನು ಗಮನಿಸಿ ದರ ಹೆಚ್ಚಳ ಮಾಡಿವೆ. ಈವರೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಒಟ್ಟು 7 ರೂಗೂ ಅಧಿಕ ಏರಿಕೆ ಕಂಡಿದೆ.
ದೆಹಲಿಯಲ್ಲಿ ಪೆಟ್ರೋಲ್ ದರ 102.12 ರೂ ಹಾಗೂ ಡೀಸೆಲ್ 95.20 ರೂ ಆಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ 110.89 ರೂ ಮತ್ತು ಡೀಸೆಲ್ 98.80 ರೂ ತಲುಪಿದೆ. ಅಮೆರಿಕ-ಇರಾನ್ ಯುದ್ಧ ಹಾಗೂ ಹರ್ಮುಜ್ ಬಿಕ್ಕಟ್ಟಿನ ಪರಿಣಾಮ ಇಂಧನ ದರ ನಿರಂತರ ಏರಿಕೆಯಾಗುತ್ತಿದೆ.



