Monday, April 21, 2025
Google search engine

Homeಸ್ಥಳೀಯಹೋಬಳಿ ಮಟ್ಟದ ಕ್ರೀಡಾಕೂಟ

ಹೋಬಳಿ ಮಟ್ಟದ ಕ್ರೀಡಾಕೂಟ

ಹನಗೋಡು: ಹನಗೋಡು ಭಾಗ ಸೇರಿದಂತೆ ಹುಣಸೂರು ತಾಲೊಕಿನಲ್ಲಿ ಉತ್ತಮ ಕ್ರೀಡಾಪಟುಗಳಿದ್ದು, ಶಿಕ್ಷಕರು ಇವರನ್ನು ಗುರುತಿಸಿ ಅವರ ಪ್ರತಿಭೆಗಳನ್ನು ಹೊರತರುವ ಕೆಲಸವಾಗಬೇಕಾಗಿದೆ ಎಂದು ತಾ.ಪಂ. ಮಾಜಿ ಸದಸ್ಯ ಎಚ್.ಆರ್.ರಮೇಶ್ ತಿಳಿಸಿದರು.
ಹನಗೋಡು ಮಧು ಬಡಾವಣೆ ಆವರಣದಲ್ಲಿ ಏರ್ಪಡಿಸಿದ ಪ್ರಾಥಮಿಕ ಶಾಲೆಗಳ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಮಾತನಾಡಿ ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವಿಕೆ ಮುಖ್ಯ, ಆದರೆ ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಬೇಕು, ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ದೈಹಿಕವಾಗಿ ಸದೃಢರಾಗಬಹುದೆಂದು ಸಲಹೆ ನೀಡಿದರು.
ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಆಧ್ತಕ್ಷ ನರಸಿಂಹ ಮಾತನಾಡಿ ವಿದ್ಯಾರ್ಥಿಗಳು ಮಾನಸಿಕವಾಗಿ ಬೆಳವಣಿಗೆಯಾಗ ಬೇಕಾದರೆ ಪಠ್ಯ ಚಟುವಟಿಕೆಗಳ ಜೊತೆ ಪಠ್ಯೇತರ ಚಟುವಟಿಗಳು ಸಹ ಅತ್ಯವಶ್ಯಕವಾಗಿದೆ. ಸರ್ಕಾರ ಇತ್ತೀಚಿನ ದಿನಗಳಲ್ಲಿ ಶಿಕ್ಷಣ-ಕ್ರೀಡೆಗಳಿಗಾಗಿ ಕೋಟ್ಯಾಂತರ ರೂ.ಗಳನ್ನು ವ್ಯಯ ಮಾಡುತ್ತಿದೆ. ಇದನ್ನು ಎಲ್ಲಾ ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.
ಹನಗೋಡು ಗ್ರಾ.ಪಂ. ಅಧ್ಯಕ್ಷ ಚನ್ನಯ್ಯ ಕ್ರೀಡಾ ಕೂಟವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ನೌಕರರ ಸಂಘದ ಆದ್ಯಕ್ಷ ಗೋವಿಂದೆಗೌಡ, ತಾ.ಕಸಾಪ ಅಧ್ಯಕ್ಷ ಹರವೆ ಮಹದೇವ್, ಗ್ರಾ.ಪಂ.ಸದಸ್ಯರಾದ ಸಂತೋಷ್, ಶಿವಣ್ಣ, ಕೆ.ಈ. ಈಶ್ವರ್, ಛಾಯಾನಾಗೇಗೌಡ, ಮಾದೇವ ನಾಯ್ಕ, ಬೋರೇಗೌಡ ಶಿಕ್ಷಕರಾದ ರಂಗಸ್ವಾಮಿ, ಮಂಜುನಾಥ್, ಶಶಿಕುಮಾರ್, ಪ್ರಸನ್ನ, ಪ್ರವೀಣ್, ಸುಬ್ಬೇಗೌಡ, ಕಾಂತರಾಜ್, ಮಹದೇವಯ್ಯ, ದೈಹಿಕ ಶಿಕ್ಷಣಾಧಿಕಾರಿ ಲೋಕೇಶ್, ಮುಖ್ಯಶಿಕ್ಷಕಿ ಇಂದ್ರ, ದೈಹಿಕ ಶಿಕ್ಷಕ ನಾಗರಾಜ್, ತಾ.ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ನಟರಾಜ್, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ರಮೇಶ್ ಸೇರಿದಂತೆ ಇತರರು ಭಾಗವಹಿಸಿದರು.

RELATED ARTICLES
- Advertisment -
Google search engine

Most Popular