ಮಂಡ್ಯ: ರಾಷ್ಟ್ರಮಟ್ಟದಲ್ಲಿ ಸದ್ದುಮಾಡಿದ್ದ ಪೇ ಸಿಎಂ ಅಭಿಯಾನದಂತೆ ಪೇ ಸಿಎಸ್ ಅಭಿಯಾನ ನಡೆಸುತ್ತಿದ್ದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
ಮಂಡ್ಯದ ಸಂಜಯ ವೃತ್ರದಲ್ಲಿ ಪೇ ಸಿಎಸ್ ಪೋಸ್ಟರ್ ಹಿಡಿದು ಕಾಂಗ್ರೆಸ್ ವಿರುದ್ಧ ಬಿಜೆಪಿ ಕಾರ್ಯಕರ್ತರು ಅಭಿಯಾನ ನಡೆಸುತ್ತಿದ್ದರು.
ಮಂಡ್ಯದ ಸಂಜಯ ವೃತ್ತದಲ್ಲಿ ಕಾರ್ಯಕರ್ತರು ಅಂಟಿಸಿದ್ದ ಪೇ ಸಿಎಸ್ ಪೋಸ್ಟರ್ ಅನ್ನು ಪೊಲೀಸರು ಕಿತ್ತಾಕಿದ್ದಾರೆ.
ಪ್ರತಿಭಟನೆ ಮಾಡುತ್ತಿದ್ದಾಗ ಪೊಲೀಸರು ತಡೆದಿದ್ದಕ್ಕೆ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದು, ಪ್ರತಿಭಟನೆ ಮಾಡುವುದು ಸಂವಿಧಾನದ ಹಕ್ಕು. ನಮ್ಮ ಹಕ್ಕನ್ನು ಕಸಿದುಕೊಳ್ಳುತ್ತಿದ್ದೀರಿ ಎಂದು ಪೊಲೀಸರ ವಿರುದ್ಧ ಕಿಡಿಕಾರಿದರು.
ಎಎಸ್ಪಿ ತಮ್ಮಯ್ಯ ನೇತೃತ್ವದಲ್ಲಿ ಪೊಲೀಸರು ಎರಡು ಜೀಪಿನಲ್ಲಿ ಕಾರ್ಯಕರ್ತರನ್ನು ತುಂಬಿಕೊಂಡು ಹೋಗಿದ್ದಾರೆ. ಪೋಸ್ಟರ್ ಅಂಟಿದಿ ಬಿಜೆಪಿ ಕಾರ್ಯಕರ್ತರಾದ ಮಂಜುನಾಥ್ ಮತ್ತು ಶಿವಕುಮಾರ್ ಆರಾಧ್ಯ ರನ್ನು ಬಂಧಿಸಲಾಗಿದೆ.
ಕಾರ್ಯಕರ್ತರು ಇದೇ ವೇಳೆ ಕೃಷಿ ಸಚಿವ ಚಲುವರಾಯಸ್ವಾಮಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೇಸಿಎಂ ಆಯ್ತು ಇದೀಗ ಪೇಸಿಎಸ್.!
ಸಚಿವ ಚಲುವರಾಯಸ್ವಾಮಿ ಮೇಲಿನ ಆರೋಪಕ್ಕೆ ಬಿಜೆಪಿ ವ್ಯಂಗ್ಯವಾಡಿದ್ದು, QR ಕೋಡ್‌ನಲ್ಲಿ ಚಲುವರಾಯಸ್ವಾಮಿ ಫೋಟೋ ಹಾಕಿ ಪೇಸಿಎಸ್ ಅಭಿಯಾನ ನಡೆಸಲಾಗಿದೆ. ಬಿಜೆಪಿ ಅಧಿಕಾರದಲ್ಲಿದ್ದ ವೇಳೆ 40% ಕಮಿಷನ್ ಆರೋಪಿಸಿ ಕಾಂಗ್ರೆಸ್ ಪೇಸಿಎಂ ಅಭಿಯಾನ ನಡೆಸಿತ್ತು. ಇದೀಗ ಪೇಸಿಎಸ್ ಅಭಿಯಾನದ ಮೂಲಕ ಬಿಜೆಪಿ ತಿರುಗೇಟು ನೀಡಿದೆ.
QR ಕೋಡ್ ಸ್ಕ್ಯಾನ್ ಮಾಡಿ ಚಲುವರಾಯಸ್ವಾಮಿ ಭ್ರಷ್ಟಾಚಾರ ಹೊರ ಬರಬಹುದು. ಯಾವುದೇ ಟ್ರಾನ್ಸ್ ಫರ್ ಡೀಲ್ ಗಳಿದ್ದರೆ ಪೇಸಿಎಸ್ ಮಾಡಿ. 6 ರಿಂದ 8 ಲಕ್ಷ ತೆಗೆದುಕೊಳ್ಳಲಾಗುವುದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಂಗ್ಯವಾಡಿದ್ದು, ಕಾಂಗ್ರೆಸ್ ಭ್ರಷ್ಟಾಚಾರದ ಚಲುವರಾಯಸ್ವಾಮಿ ಪೇ ಎಂದು ಬಿಜೆಪಿಗರು ಟೀಕಿಸಿದ್ದಾರೆ.
ಕಳೆದ 2 ತಿಂಗಳಲ್ಲಿ ಕೃಷಿ ಸಚಿವರ ಚಲುವರಾಯಸ್ವಾಮಿ 2 ಆರೋಪ ಎದುರಿಸುತ್ತಿದ್ದಾರೆ. ಚಲುವರಾಯಸ್ವಾಮಿ ಮೇಲಿನ ಆರೋಪಗಳನ್ನು ಇಟ್ಟುಕೊಂಡು ಸರ್ಕಾರಕ್ಕೆ ಮುಜುಗರ ತರಲು ಬಿಜೆಪಿ ಪ್ಲಾನ್ ಮಾಡಿದೆ.