Saturday, April 19, 2025
Google search engine

Homeಸ್ಥಳೀಯಲಯನ್ಸ್ ಕ್ಲಬ್ ಆಫ್ ಮೈಸೂರ್ ಪ್ಯಾಲೆಸ್ ಸಿಟಿ ವತಿಯಿಂದ ಅಂತರಾಷ್ಟ್ರೀಯ ಲಯನ್(ಸಿಂಹ) ದಿನಾಚರಣೆ

ಲಯನ್ಸ್ ಕ್ಲಬ್ ಆಫ್ ಮೈಸೂರ್ ಪ್ಯಾಲೆಸ್ ಸಿಟಿ ವತಿಯಿಂದ ಅಂತರಾಷ್ಟ್ರೀಯ ಲಯನ್(ಸಿಂಹ) ದಿನಾಚರಣೆ

4 ನೇ ಬಾರಿಗೆ ಲಯನ್ ( ಸಿಂಹ) ದತ್ತು ಸ್ವೀಕಾರ ಮತ್ತು 2.5 ಲಕ್ಷರೂ ಮೊತ್ತದ ದೇಣಿಗೆ ನೀಡಿ ಒಟ್ಟು 12 ಪ್ರಾಣಿ ಪಕ್ಷಿಗಳನ್ನು ದತ್ತು ತೆಗೆದುಕೊಳ್ಳುವ ಕಾರ್ಯಕ್ರಮ

ಮೈಸೂರು: ಇಂದು ಬೆಳಿಗ್ಗೆ ಲಯನ್ಸ್ ಕ್ಲಬ್ ಆಫ್ ಮೈಸೂರ್ ಪ್ಯಾಲೆಸ್ ಸಿಟಿ ವತಿಯಿಂದ ಅಂತರಾಷ್ಟ್ರೀಯ ಲಯನ್ ( ಸಿಂಹ ) ದಿನಾಚರಣೆ ಪ್ರಯುಕ್ತ ಮೈಸೂರಿನ ಜಯಚಾಮರಾಜೇಂದ್ರ ಮೃಗಾಲಯದಲ್ಲಿ ಸತತ 4 ನೇ ಬಾರಿಗೆ ಲಯನ್ ( ಸಿಂಹ) ದತ್ತು ಸ್ವೀಕಾರ ಮತ್ತು 2.5 ಲಕ್ಷರೂ ಮೊತ್ತದ ದೇಣಿಗೆ ನೀಡಿ ಒಟ್ಟು 12 ಪ್ರಾಣಿ ಪಕ್ಷಿಗಳನ್ನು ದತ್ತು ತೆಗೆದುಕೊಳ್ಳುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು .

ಮೃಗಾಲಯ ಪ್ರಾಧಿಕಾರದ ನಿರ್ದೇಶಕರಾದ ಶ್ರೀ ಮಹೇಶ್ ರವರಿಗೆ ಅಂತರಾಷ್ಟ್ರೀಯ ಲಯನ್ ಸಂಸ್ಥೆಯ ಜಿಲ್ಲೆ317 G ರಾಜ್ಯಪಾಲರಾದ ಲಯನ್ ಡಾ|| ಎನ್ ಕೃಷ್ಣೇಗೌಡ ರವರು ಚೆಕ್ಕನ್ನು ಹಸ್ತಾಂತರಿ ಸಿರುತ್ತಾರೆ. ಇದೆ ಸಂದರ್ಭದಲ್ಲಿ ಮಾತನಾಡಿ ಪ್ಯಾಲೆಸ್ ಸಿಟಿ ಸಂಸ್ಥೆ ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳುವ ಮೂಲಕ ಹಲವಾರು ಸೇವಾ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದ್ದಾರೆ, 105 ವರ್ಷವುಳ್ಳ ಲಯನ್ ಸಂಸ್ಥೆ ಮಹಾಮಾರಿ ಕೋವಿಡ್ ಸಂದರ್ಭದಲ್ಲಿ ಸಹ ನೂರಾರು ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳುವ ಮೂಲಕ ಮೂಕ ಪ್ರಾಣಿಗಳ ಜೊತೆಯೂ ನಾವಿದ್ದೀವಿ ಎಂಬ ಸಂದೇಶ ನೀಡಿ, ನಿರಂತರ ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳುವ ಮೂಲಕ ಎಲ್ಲಾ ಲಯನ್ ಸದಸ್ಯರು ಜೊತೆಗೂಡಿ ಸೇವೆ ಮಾಡುತ್ತಿರುವ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.

ಜಿಲ್ಲಾ ಸಂಪುಟ ಕಾರ್ಯದರ್ಶಿ ಲಯನ್ ವೆಂಕಟೇಶ್, ಜಿಲ್ಲಾ ಸಂಪುಟ ಖಜಾಂಚಿ ಕಾಂತರಾಜು, ಪ್ಯಾಲೆಸ್ ಸಿಟಿ ಕ್ಲಬ್ ಅಧ್ಯಕ್ಷರಾದ ವಾಸು, ಕಾರ್ಯದರ್ಶಿ ಪುಟ್ಟಸ್ವಾಮಿಗೌಡ, ಖಜಾಂಚಿ ಲಕ್ಷ್ಮಣ್, ಸಾರ್ವಜನಿಕ ಸಂಪರ್ಕ ಅಧಿಕಾರಿ ಲಯನ್ ಜೆ ಲೋಕೇಶ್, ಲಯನ್ ಸದಸ್ಯರುಗಳಾದ ಜಯಕುಮಾರ್, ಡಿ ಪಿ ಪ್ರಕಾಶ್, ನಂದೀಶ್, ಎಂ ಆರ್ ಮೋಹನ್, ನಾಗೇಶ್ ಮೂರ್ತಿ, ಕೆ ಎಸ್ ಪ್ರಕಾಶ್, ಜಿ ಶಿವಕುಮಾರ್, ಶಂಕರ್, ಡಾ||ವೈ ಎಂ ಶಿವಕುಮಾರ್, ಸಂದೀಪ್, ಸಿ ಎಸ್ ರಾಜೇಂದ್ರ, ಎಚ್ಎಸ್ ರಾಜು, ಮಹದೇವಸ್ವಾಮಿ ಹಾಗೂ ಇತರ ಸದಸ್ಯರು ಹಾಜರಿದ್ದರು.

RELATED ARTICLES
- Advertisment -
Google search engine

Most Popular