ಚಿಕ್ಕಮಗಳೂರು : ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಕೆಲವೇ ಕ್ಷಣಗಳಲ್ಲಿ ಡಿ.ಕೆ ಶಿವಕುಮಾರ್ ಅಧಿಕಾರ ಸ್ವೀಕಾರ ಮಾಡಲಿದ್ದು ಇದೀಗ ಬಿಜೆಪಿ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ಶುಭ ಕೋರಿದ್ದಾರೆ.
ಈ ಕುರಿತು ಮಾತನಾಡಿರುವ ಎಂಎಲ್ ಸಿ ಸಿ.ಟಿ ರವಿ, ಡಿಕೆ ಶಿವಕುಮಾರ್ ಅವರಿಗೆ ಅಗಾಧವಾದ ರಾಜಕೀಯ ಅನುಭವವಿದೆ. ಹುರುಪು ಹುಮ್ಮಸ್ಸು ಇದೆ. ಆದರೆ ಕೊರತೆ ಇರೋದು ಇಚ್ಛಾಶಕ್ತಿ. ರಾಜ್ಯದ ಅಭಿವೃದ್ದಿಗೆ ಆದ್ಯತೆ ನೀಡಲಿ. ದೂರದೃಷ್ಠಿ ಯೋಜನೆಗಳನ್ನ ಜಾರಿ ಮಾಡಲಿ ಎಂದು ಹಾರೈಸಿದ್ದಾರೆ.



