Wednesday, June 3, 2026
Google search engine

Homeಸ್ಥಳೀಯಮೊದಲ ದಿನವೇ ವಿಧಾನಸೌಧಕ್ಕೆ ಡಿಕೆ ಶಿವಕುಮಾರ್ ಪ್ರದಕ್ಷಿಣೆ

ಮೊದಲ ದಿನವೇ ವಿಧಾನಸೌಧಕ್ಕೆ ಡಿಕೆ ಶಿವಕುಮಾರ್ ಪ್ರದಕ್ಷಿಣೆ

ಬೆಂಗಳೂರು : ರಾಜ್ಯದ ನೂತನ ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಡಿ.ಕೆ ಶಿವಕುಮಾರ್ ವಿಧಾನಸೌಧಕ್ಕೆ ಆಗಮಿಸಿ ಪ್ರದಕ್ಷಿಣೆ ಹಾಕಿದ್ದಾರೆ.

ವಿಧಾನಸೌಧಕ್ಕೆ ಆಗಮಿಸಿದ ಸಿಎಂ ಡಿ.ಕೆ ಶಿವಕುಮಾರ್ ವಿಧಾನಸೌಧದ ಸುತ್ತ ಪ್ರದಕ್ಷಿಣೆ ಹಾಕಿ  ಮಹಾತ್ಮ ಗಾಂಧೀಜಿ,  ಜವಾಹರ್ ಲಾಲ್ ನೆಹರು, ಬಸವಣ್ಣ ಕೆಂಪೇಗೌಡ ಡಾ.ಬಿ.ಆರ್ ಅಂಬೇಡ್ಕರ್ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು.

ನೂತನ ಸಿಎಂ ಡಿಕೆ ಶಿವಕುಮಾರ್ ಗೆ ಸಚಿವರಾದ ಕೆ.ಎಚ್ ಮುನಿಯಪ್ಪ, ಶರಣಪ್ರಕಾಶ್ ಪಾಟೀಲ್ ಸೇರಿ ಹಲವರು ಸಾಥ್ ನೀಡಿದರು. ಕೆಲವೇ ಕ್ಷಣಗಳಲ್ಲಿ ಸಿಎಂ ಡಿಕೆ ಶಿವಕುಮಾರ್ ಸಚಿವ ಸಂಪುಟ ಸಭೆ ನಡೆಸಲಿದ್ದಾರೆ ಎನ್ನಲಾಗಿದೆ.

RELATED ARTICLES
- Advertisment -
Google search engine

Most Popular