Wednesday, June 10, 2026
Google search engine

Homeಕ್ರೀಡೆಮಹಿಳಾ ಟಿ20 ವಿಶ್ವಕಪ್ : ಐಸಿಸಿಯಿಂದ ಕಾಮೆಂಟರಿ ಪ್ಯಾನಲ್ ಘೋಷಣೆ; ಮಿಥಾಲಿ, ಅಂಜುಮ್ ಸೇರಿದಂತೆ ಹಲವು...

ಮಹಿಳಾ ಟಿ20 ವಿಶ್ವಕಪ್ : ಐಸಿಸಿಯಿಂದ ಕಾಮೆಂಟರಿ ಪ್ಯಾನಲ್ ಘೋಷಣೆ; ಮಿಥಾಲಿ, ಅಂಜುಮ್ ಸೇರಿದಂತೆ ಹಲವು ದಿಗ್ಗಜರ ಆಯ್ಕೆ

ನವದೆಹಲಿ : ಮಹಿಳಾ ಟಿ20 ವಿಶ್ವಕಪ್ 2026ಕ್ಕಾಗಿ ಐಸಿಸಿ (ICC) ತನ್ನ ಕಾಮೆಂಟರಿ ಮತ್ತು ಬ್ರಾಡ್‌ಕಾಸ್ಟ್ ತಂಡವನ್ನು ಘೋಷಿಸಿದೆ. ಈ ತಂಡದಲ್ಲಿ ವಿಶ್ವದಾದ್ಯಂತದ ಹಲವು ಮಾಜಿ ನಾಯಕರು, ವಿಶ್ವಕಪ್ ವಿಜೇತ ಆಟಗಾರರು ಮತ್ತು ಅನುಭವಿ ಕಾಮೆಂಟೇಟರ್‌ಗಳು ಸ್ಥಾನ ಪಡೆದಿದ್ದಾರೆ. ಇವರು ಟೂರ್ನಿಯುದ್ದಕ್ಕೂ ಪ್ರೇಕ್ಷಕರಿಗೆ ಅತ್ಯುತ್ತಮ ವಿಶ್ಲೇಷಣೆ ಮತ್ತು ರೋಮಾಂಚಕ ಅನುಭವವನ್ನು ನೀಡಲಿದ್ದಾರೆ.

ಕಾಮೆಂಟರಿ ಪ್ಯಾನಲ್‌ನಲ್ಲಿರುವ ಪ್ರಮುಖರು:

ಐಸಿಸಿ ಪ್ರಕಟಿಸಿರುವ ಪಟ್ಟಿಯಲ್ಲಿ ಭಾರತದ ಮಾಜಿ ನಾಯಕಿ ಮಿಥಾಲಿ ರಾಜ್, ಇಂಗ್ಲೆಂಡ್‌ನ ವೇಗಿ ತಾಶ್ ಫರಾಂಟ್, ಮಾಜಿ ಭಾರತೀಯ ಕ್ರಿಕೆಟರ್ ಅಂಜುಮ್ ಚೋಪ್ರಾ, ನ್ಯೂಜಿಲೆಂಡ್‌ನ ಕೇಟಿ ಮಾರ್ಟಿನ್, ಪಾಕಿಸ್ತಾನದ ಮಾಜಿ ನಾಯಕಿ ಸನಾ ಮೀರ್, ಐರ್ಲೆಂಡ್‌ನ ಇಸೋಬೆಲ್ ಜಾಯ್ಸ್ ಮತ್ತು ಭಾರತದ ವೇದಾ ಕೃಷ್ಣಮೂರ್ತಿ ಹಾಗೂ ಮಾಜಿ ಕ್ರಿಕೆಟಿಗ ಸೈಮನ್ ಡೂಲ್ ಅವರ ಹೆಸರುಗಳಿವೆ.

ಈ ತಂಡದಲ್ಲಿ ತಮ್ಮ ದೇಶಕ್ಕಾಗಿ ವಿಶ್ವಕಪ್ ಗೆದ್ದುಕೊಟ್ಟ ಹಲವು ಸದಸ್ಯರಿದ್ದಾರೆ. ಮೇಲ್ ಜೋನ್ಸ್ ಮತ್ತು ಜೂಲಿಯಾ ಪ್ರೈಸ್- ಆಸ್ಟ್ರೇಲಿಯಾದ ವಿಶ್ವಕಪ್ ವಿಜೇತ ತಂಡದ ಸದಸ್ಯರು, ಸ್ಟೇಸಿ-ಆನ್ ಕಿಂಗ್- ವೆಸ್ಟ್ ಇಂಡೀಸ್ ಟಿ20 ವಿಶ್ವಕಪ್ ಗೆದ್ದಾಗ ತಂಡದಲ್ಲಿದ್ದರು. ಈಸಾ ಗುಹಾ ಮತ್ತು ಎಬೋನಿ ರೈನ್‌ಫೋರ್ಡ್-ಬ್ರೆಂಟ್- ಇಂಗ್ಲೆಂಡ್‌ಗೆ ವಿಶ್ವಕಪ್ ಮತ್ತು ಟಿ20 ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಪುರುಷ ಕ್ರಿಕೆಟ್‌ ನ ದಿಗ್ಗಜರ ಸಾಥ್

ಪುರುಷರ ಕ್ರಿಕೆಟ್‌ನ ಕೆಲವು ಪ್ರಮುಖ ವ್ಯಕ್ತಿಗಳೂ ಈ ಪ್ಯಾನಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆಸ್ಟ್ರೇಲಿಯಾದ ಎರಡು ಬಾರಿಯ ವಿಶ್ವಕಪ್ ವಿಜೇತ ಮ್ಯಾಥ್ಯೂ ಹೇಡನ್, ಭಾರತದ ದಿನೇಶ್ ಕಾರ್ತಿಕ್, ವೆಸ್ಟ್ ಇಂಡೀಸ್‌ನ ಮಾಜಿ ಆಲ್‌ರೌಂಡರ್ ಕಾರ್ಲೋಸ್ ಬ್ರಾಥ್‌ವೈಟ್, ಅನುಭವಿಗಳಾದ ನಾಸಿರ್ ಹುಸೇನ್, ಇಯಾನ್ ಬಿಷಪ್ ಮತ್ತು ಇಯಾನ್ ಸ್ಮಿತ್.

ನಿರೂಪಕರು ಮತ್ತು ಬ್ರಾಡ್‌ಕಾಸ್ಟ್ ತಂಡ

ಚಾರ್ಲ್ಸ್ ಡಾಗ್ನಾಲ್, ನಟಾಲಿಯ ಜರ್ಮೋನೋಸ್, ಅಲಾನ್ ವಿಲ್ಕಿನ್ಸ್, ಲಾರಾ ಮೆಕ್‌ಗೋಲ್ಡ್ರಿಕ್, ಜತಿನ್ ಸಪ್ರೂ, ಕಾಸ್ ನಾಯ್ಡು, ರೌನಕ್ ಕಪೂರ್ ಮತ್ತು ಅಲಿ ಮಿಚೆಲ್ ಅವರು ಪ್ರೇಕ್ಷಕರಿಗೆ ಪಂದ್ಯದ ವಿಶ್ಲೇಷಣೆ ಮತ್ತು ಮೈದಾನದ ವಿಶೇಷ ಮಾಹಿತಿಗಳನ್ನು ತಲುಪಿಸಲಿದ್ದಾರೆ.

ಟೂರ್ನಿಯ ವೇಳಾಪಟ್ಟಿ ಮತ್ತು ವಿವರ:

ಆತಿಥ್ಯ: ಇಂಗ್ಲೆಂಡ್.

ಆರಂಭ: ಜೂನ್ 12 (ಇಂಗ್ಲೆಂಡ್ ಮತ್ತು ಶ್ರೀಲಂಕಾ ನಡುವೆ ಮೊದಲ ಪಂದ್ಯ).

ಫೈನಲ್: ಜುಲೈ 5, ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ.

ಒಟ್ಟು ತಂಡಗಳು: 12 ತಂಡಗಳು.

ಒಟ್ಟು ಪಂದ್ಯಗಳು: 33 ಪಂದ್ಯಗಳು.

“ಈ ಬಾರಿ ಎಲ್ಲಾ ತಂಡಗಳಲ್ಲಿ ಅದ್ಭುತ ಪ್ರತಿಭೆಗಳಿದ್ದಾರೆ” ಎಂದು ಮಿಥಾಲಿ ರಾಜ್ ಹೇಳಿದರೆ, ಇಂಗ್ಲೆಂಡ್‌ನ ಮೈದಾನಗಳು ಈ ದೊಡ್ಡ ಟೂರ್ನಿಗೆ ಭವ್ಯ ವೇದಿಕೆ ಕಲ್ಪಿಸಲಿವೆ ಎಂದು ಈಸಾ ಗುಹಾ ಅಭಿಪ್ರಾಯಪಟ್ಟಿದ್ದಾರೆ. ಮಹಿಳಾ ಕ್ರಿಕೆಟ್‌ನ ಮಟ್ಟ ಈಗ ತುಂಬಾ ಸುಧಾರಿಸಿದ್ದು, ಈ ಟೂರ್ನಿ ಹೊಸ ಪೀಳಿಗೆಗೆ ಸ್ಫೂರ್ತಿಯಾಗಲಿದೆ ಎಂದು ನಾಸಿರ್ ಹುಸೇನ್ ತಿಳಿಸಿದ್ದಾರೆ. (ಏಜೆನ್ಸಿಸ್)

RELATED ARTICLES
- Advertisment -
Google search engine

Most Popular