ಚಾಮರಾಜನಗರ : ಬಾಲ್ಯ ಸ್ನೇಹಿತರು ಹೃದಯದಲ್ಲಿ ನೆಲೆಸುತ್ತಾರೆ. ಅಧಿಕಾರ, ಬಡತನ, ಸಿರಿತನ, ಜಾತಿ ಮತ ಭೇದವಿಲ್ಲದ ಪ್ರೀತಿಯೇ ಸ್ನೇಹ. ಸ್ನೇಹ ಅಮೂಲ್ಯವಾದ ಐಶ್ವರ್ಯಕ್ಕಿಂತ ಮಿಗಿಲು. ಸ್ನೇಹವನ್ನು ಶಾಶ್ವತವಾಗಿ ಉಳಿಸಿಕೊಳ್ಳುವುದು ಕಷ್ಟಸಾಧ್ಯವಿದೆ ಎಂದು ಜಿಲ್ಲಾ ಯುವ ಸಂಘಟನೆಗಳ ಅಧ್ಯಕ್ಷರು,ಸಂಸ್ಕೃತಿ ಚಿಂತಕ, ರಾಷ್ಟ್ರ ಯುವ ಪ್ರಶಸ್ತಿ. ಪುರಸ್ಕೃತ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಅವರು ಜೈಹಿಂದ್ ಪ್ರತಿಷ್ಠಾನ, ಋಗ್ವೇದಿ ಯೂತ್ ಕ್ಲಬ್ ಹಮ್ಮಿಕೊಂಡಿದ್ದ ಸ್ನೇಹಿತರ ದಿನಾಚರಣೆ ಯಲ್ಲಿ ಮಾತನಾಡಿ ಜೂನ್ 8ಪ್ರತಿವರ್ಷ ಸ್ನೇಹಿತರ ದಿನ ಆಚರಿಸಲಾಗುತ್ತಿದೆ. ಸ್ನೇಹಕ್ಕೆ ಗಡಿಯ ಹಂಗಿಲ್ಲ. ದೇಶ ವಿದೇಶ,ಜಾತಿ,ಧರ್ಮ ಮೀರಿದ ಸ್ನೇಹ ವಿದೆ. ಪ್ರತಿಯೊಬ್ಬ ವ್ಯಕ್ತಿಯ ಮನಸ್ಸು ಅರಿತು ಭಾವನೆಗೆ ಸ್ಪಂದಿಸುವ ಸ್ನೇಹ ಅಮರ. ಸ್ನೇಹಕ್ಕೆ ಮೋಸಹೋಗುವ ಅಪಾಯ ವಿದೆ. ಪರಿಶುದ್ಧ ಸ್ನೇಹಕ್ಕೆ ಹಣಕಾಸು ವ್ಯವಹಾರ ಸಲ್ಲದು. ಪುರಾಣಗಳಲ್ಲಿ ಸ್ನೇಹಕ್ಕೆ ಅಪಾರ ಗೌರವ,ಪ್ರೀತಿ, ಇಚ್ಛೆ,ನಿಷ್ಠೆ ಕಾಣಬಹುದು ಶ್ರೀ ಕೃಷ್ಣ ಕುಚೇಲ,ದುರ್ಯೋದನ ಕರ್ಣರ. ಸ್ನೇಹದ ಶಕ್ತಿ ನೋಡಬಹುದು. ಸ್ನೇಹಕ್ಕೆ ಬೆಲೆ ನೀಡಿದಾಗ ಬದುಕಿನಲ್ಲಿ ಸಂತೋಷ ಆನಂದ ಕಾಣಬಹುದು. ಸ್ನೇಹದಿಂದ ಕಷ್ಟ ವನ್ನು ಪರಿಹರಿಸಿ ಸುಖದ ದಾರಿ ಸಾಗಬಹುದು. ಉತ್ತಮ ಸ್ನೇಹಿತರಿಂದ ವ್ಯಕ್ತಿತ್ವ ರೂಪಿಸಿಕೊಳ್ಳಬಹುದು ಎಂದರು.
ಉದ್ಘಾಟನೆಯನ್ನು ಜಿಲ್ಲಾ ಯುವ ಸಂಘಟನೆಗಳ ಒಕ್ಕೂಟದಪ್ರಧಾನ ಕಾರ್ಯದರ್ಶಿ
ದೊಡ್ಡಮೋಳೆ ಸುರೇಶ್ ಮಾತನಾಡಿ ಸ್ನೇಹದ ದಿನದ ಮಹತ್ವವನ್ನು ಸಾರುವ ಜೂನ್ ಎಂಟು ನಮಗೆಲ್ಲರಿಗೂ ಸಂತೋಷ ತರುವ ದಿನ.ಬಾಲ್ಯ ಸ್ನೇಹಿತರು,ವ್ಯಾಸಂಗದ ಸ್ನೇಹಿತರು, ಕುಟುಂಬದ ಸ್ನೇಹಿತರು,ಸಮಾಜದ ಸ್ನೇಹಿತರನ್ನು ಮತ್ತೆ ಮತ್ತೆ ಕಾಣುವ ಮಾತನಾಡಿಸುವ ಶುಭಾಶಯ ತಿಳಿಸುವ ದಿನವಾಗಿ ಈ ದಿನವನ್ನು ಬಳಸಿಕೊಳ್ಳಬಹುದು. ಒತ್ತಡದ ಬದುಕಿನಲ್ಲಿರುವ ಮನುಷ್ಯ ಇಂದು ಯಾರ ಬಳಿ ಮಾತನಾಡಲು ಸಮಯವಿಲ್ಲದಾಗಿದೆ.ಸಾಮಾಜಿಕ ಹೊಂದಾಣಿಕೆ ಕುಟುಂಬದ ಹೊಂದಾಣಿಕೆ ಬಹು ಮುಖ್ಯವಾದದ್ದು. ಸ್ನೇಹ ಶಾಶ್ವತವಾದ ಸುಖ ನೀಡುವ ಒಂದು ಪರಿಪೂರ್ಣವಾದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಸಾಧ್ಯವಾಗುವುದು ಸ್ನೇಹದಿಂದ ಸಾಧ್ಯವಿದೆ. ಋಗ್ವೇದಿ ಯೂತ್ ಕ್ಲಬ್ ಸ್ನೇಹ ದಿನದ ಮೂಲಕ ಜಾಗೃತಿ ಕಾರ್ಯವನ್ನು ಮಾಡುತ್ತಿದೆ. ಸಮಾಜಕ್ಕೆ ಸಂದೇಶಗಳ ನೀಡುವ ಜೊತೆಗೆ ಅರ್ಥಪೂರ್ಣ ಕಾರ್ಯಕ್ರಮವನ್ನು ರೂಪಿಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕು ಎಂದು ತಿಳಿಸಿದರು.
ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಉಪಾದ್ಯಕ್ಷರಾದ ಶಿವರಾಮ್ ತೆಳ್ಳನೂರು ಮಾತನಾಡಿ ಪ್ರತಿಯೊಬ್ಬರಲ್ಲೂ ಸ್ನೇಹ, ವಿಶ್ವಾಸ, ನಂಬಿಕೆಯ ಗುಣಗಳು ಹೆಚ್ಚಾಗಲಿ. ಸ್ನೇಹಿತರ ದಿನದ ಮೂಲಕ ಪ್ರತಿಯೊಬ್ಬರ ಸಂತೋಷಕ್ಕೆ ನಾವು ಕಾರಣರಾಗೋಣ ಎಂದರು. ಯುವ ಸದಸ್ಯರಿಗೆ ಗಿಡ ನೀಡಿ ಸ್ನೇಹತ್ವ ತಿಳಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರು ಉಪನ್ಯಾಸಕರಾದ ಬಸವಣ್ಣ,
ಋಗ್ವೇದಿ ಯೂತ್ ಕ್ಲಬ್ ಸದಸ್ಯರಾದ ಸಂಜು ಮಹಾದೇವಪ್ರಸಾದ್, ಪ್ರಕಾಶ್, ಗಣೇಶ, ಮಹದೇವ ಶೆಟ್ಟಿ ಸಿದ್ದರಾಜು ಹಾಗೂ ಯುವತಿಯರು ಇದ್ದರು .



