Wednesday, June 10, 2026
Google search engine

Homeರಾಜ್ಯಸುದ್ದಿಜಾಲವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣೆ- ಪುರಸಭೆ ಮಾಜಿ ಸದಸ್ಯ ಉಮೇಶ್

ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣೆ- ಪುರಸಭೆ ಮಾಜಿ ಸದಸ್ಯ ಉಮೇಶ್

ಕೆ.ಆರ್.ನಗರ : ಸಾ.ರಾ.ಸ್ನೇಹ ಬಳಗದ ವತಿಯಿಂದ ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕು ವ್ಯಾಪ್ತಿಯಲ್ಲಿ 8 ನೇ ತರಗತಿಯಿಂದ ಸ್ನಾತಕೋತ್ತರ ಪದವಿಯವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕಗಳನ್ನು ನೀಡಲಾಗುತ್ತಿದೆ ಎಂದು ಪುರಸಭೆ ಮಾಜಿ ಸದಸ್ಯ ಉಮೇಶ್ ಹೇಳಿದರು.

ಪಟ್ಟಣದ ಹಾಸನ- ಮೈಸೂರು ರಸ್ತೆಯಲ್ಲಿರುವ ಬಿ.ಎಸ್.ಮಾದಪ್ಪ ಸ್ಮಾರಕ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಬಳಗದ ವತಿಯಿಂದ ಕೊಡಮಾಡಲಾಗುತ್ತಿರುವ ನೋಟ್ ಪುಸ್ತಕ ವಿತರಿಸಿ ಆನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಎರಡು ತಾಲೂಕಿನಲ್ಲಿ ವ್ಯಾಸಂಗ ಮಾಡುತ್ತಿರುವ ಜೊತೆಗೆ ಜಿಲ್ಲೆಯ ಇತರ ತಾಲೂಕುಗಳಿಗೆ ತೆರಳಿ ವ್ಯಾಸಂಗ ಮಾಡುತ್ತಿರುವ ನಮ್ಮ ತಾಲೂಕುಗಳ ಎಲ್ಲರಿಗೂ ಸಹ ನೋಟ್ ಪುಸ್ತಕ ಕೊಡಲಾಗುತ್ತದೆ ಎಂದು ತಿಳಿಸಿದ ಅವರು 26 ಸಾವಿರ ವಿದ್ಯಾರ್ಥಿಗಳಿಗೆ ಇದರ ಪ್ರಯೋಜನ ದೊರೆಯಲಿದೆ ಎಂದು ಮಾಹಿತಿ ನೀಡಿದರು.

ಪ್ರತಿ ವಿದ್ಯಾರ್ಥಿಗೆ ತಲಾ 6 ದೊಡ್ಡ ಅಳತೆಯ ನೋಟ್ ಪುಸ್ತಕಗಳನ್ನು ಕೊಡಲಾಗುತ್ತಿದ್ದು ಇದಕ್ಕೆ ನಮ್ಮ ನಾಯಕರಾದ ಸಾ.ರಾ.ಮಹೇಶ್ ಅವರು 80 ಲಕ್ಷ ವ್ಯಯ ಮಾಡಲಾಗುತ್ತಿದ್ದು ಇಂತಹ ಸಮಾಜ ಮುಖಿ ಮತ್ತು ಶೈಕ್ಷಣಿಕ ಪರವಾದ ಕೆಲಸ ಮಾಡುತ್ತಿರುವ ಅವರು ರಾಜ್ಯದ ರಾಜಕೀಯ ನಾಯಕರಿಗೆ ಮಾದರಿಯಾಗಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಇತರೆ ಕ್ಷೇತ್ರಗಳಿಗೆ ಮಾಡುವ ಸಹಾಯ ಮತ್ತು ದಾನಕ್ಕಿಂತ ವಿದ್ಯಾರ್ಥಿಗಳಿಗೆ ನೀಡುವ ಪ್ರೋತ್ಸಾಹ ಅತ್ಯಂತ ಮೌಲ್ಯಯುತವಾಗಿದ್ದು ಇದನ್ನು ಅರಿತು ಮಕ್ಕಳು ಚೆನ್ನಾಗಿ ಕಲಿತು ಉತ್ತಮ ಮತ್ತು ಉನ್ನತ ಶಿಕ್ಷಣ ಪಡೆದು ಪೋಷಕರ ಜತೆಗೆ ತಾವು ಕಲಿತ ಶಾಲೆಗೆ ಕೀರ್ತಿ ತರಬೇಕು ಎಂದು ಕರೆ ನೀಡಿದರು.
ಸಾ.ರಾ.ಸ್ನೇಹ ಬಳಗದ ಅಧ್ಯಕ್ಷ ವಿಜಯ್ ಕುಮಾರ್, ಪ್ರಧಾನ ಕಾರ್ಯದರ್ಶಿ ಸಿ.ಜೆ.ಆನಂದ್ ಕುಮಾರ್, ಪುರಸಭೆ ಮಾಜಿ ಸದಸ್ಯ ಕೆ.ಎಲ್.ಜಗದೀಶ್, ಜೆಡಿಎಸ್ ಅಧ್ಯಕ್ಷ ಹಂಪಾಪುರ ಕುಮಾರ್, ಜೆಡಿಎಸ್ ವಕ್ತಾರ ಕೆ.ಎಲ್.ರಮೇಶ್ ಮಾತನಾಡಿದರು.

ನಗರ ಜೆಡಿಎಸ್ ಕಾರ್ಯದರ್ಶಿ ರುದ್ರೇಶ್, ಗ್ರಾ.ಪಂ.ಮಾಜಿ ಸದಸ್ಯ ಬಾಲಾಜಿಗಣೇಶ್, ಮುಖಂಡರಾದ ಹೆಚ್.ಪಿ.ಶಿವಣ್ಣ, ಸಿದ್ದಪ್ಪ, ಮಹೇಶ್, ಸಂತೋಷ್, ನಾಗೇಶ್, ಚಂದಗಾಲುರಾಘು, ಸುರೇಶ್, ಎಂ.ಜೆ.ಮನು, ಕೆ.ಎಂ. ಶಂಕರ್, ಸಂಜಯ್, ಮನೋಹರ, ಹೆಚ್.ಕೆ.ಕೀರ್ತಿ, ರಾಜಲಕ್ಷ್ಮಿ, ದ್ರಾಕ್ಷಾಯಿಣಿ, ಮೋಹನ್ ಕುಮಾರಿ, ಸೇರಿದಂತೆ ಮಾದಪ್ಪ ಪ್ರೌಢಶಾಲೆಯ ಶಿಕ್ಷಕ ಗಣೇಶ್ ಪ್ರಸಾದ್ ಸೇರಿದಂತೆ ಇತರ ಶಿಕ್ಷಕರು ಮತ್ತು‌ ಮುಖಂಡರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

RELATED ARTICLES
- Advertisment -
Google search engine

Most Popular