Monday, April 21, 2025
Google search engine

Homeಅಪರಾಧಕೊಳ್ಳೇಗಾಲದಲ್ಲಿ ಪ್ರತ್ಯೇಕ ಪ್ರಕರಣ: ಶುದ್ದ ಕುಡಿಯುವ ನೀರಿನ ಘಟಕ ಬಾಗಿಲು ಒಡೆದು ಕಾಯಿನ್ ಬಾಕ್ಸ್ ಕಳ್ಳತನ

ಕೊಳ್ಳೇಗಾಲದಲ್ಲಿ ಪ್ರತ್ಯೇಕ ಪ್ರಕರಣ: ಶುದ್ದ ಕುಡಿಯುವ ನೀರಿನ ಘಟಕ ಬಾಗಿಲು ಒಡೆದು ಕಾಯಿನ್ ಬಾಕ್ಸ್ ಕಳ್ಳತನ

ಕೊಳ್ಳೇಗಾಲ: ಸತ್ತೇಗಾಲ, ಮಧುವನಹಳ್ಳಿ ಗ್ರಾಮದಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕದ ಬಾಗಿಲನ್ನು ಒಡೆದು ಕಾಯಿನ್ ಬಾಕ್ಸ್ ನ್ನು ಕಳ್ಳರು ತೆಗೆದುಕೊಂಡು ಪರಾರಿಯಾಗಿದ್ದಾರೆ.

ತಾಲೂಕಿನ ಸತ್ತೇಗಾಲ ಗ್ರಾಮ ಪಂಚಾಯಿತಿಗೆ ಸೇರಿದ ಬಸ್ ನಿಲ್ದಾಣದ ಬಳಿ ಸಾರ್ವನಿಕರ ಉಪಯೋಗಕ್ಕಾಗಿ ಶುದ್ಧ ಕುಡಿಯುವ ನೀರಿನ ಘಟಕವನ್ನು ನಿರ್ಮಿಸಿದ್ದು, ಸಾರ್ವಜನಿಕರಿಗೆ ಅನುಕೂಲವಾಗಿತ್ತು.

ಆ.8ರಂದು ಘಟಕದ ಬಾಗಿಲನ್ನು ಒಡೆದು ಸುಮಾರು 3 ರಿಂದ 4 ಸಾವಿರ ಸಂಗ್ರಹಿಸಿದ್ದ ಕಾಯಿನ್‌ ಬೂತನ್ನು ಕಳ್ಳರು ಕಿತ್ತು ಪರಾರಿಯಾಗಿದ್ದಾರೆ. ಸುಮಾರು 6 ಸಾವಿರ ರೂ. ಬೆಲೆ ಬಾಳುವ ಮೋಟಾರು ಕಳುವಿಗೆ ವಿಫಲ ಯತ್ನ ನಡೆಸಿದ್ದಾರೆ.

ಮಧುವನ ಹಳ್ಳಿ ಯಲ್ಲಿ ಕಳವು: ಮಧುವನಹಳ್ಳಿ ಗ್ರಾಮದ ಜಿ.ವಿ.ಗೌಡನಗರ ಬಡಾವಣೆಯ ಡಾ. ಬಿ.ಆರ್.ಅಂಬೇಡ್ಕರ್ ಭವನದ ಮುಂಭಾಗದಲ್ಲಿದ್ದ ಶುದ್ಧ ಕುಡಿಯುವ ನೀರಿನ ಘಟಕದ ಬಾಗಿಲು ಒಡೆದು ಕಾಯಿನ್ ಬೂತನ್ನು ಕಿತ್ತು ಕಳ್ಳರು ಪರಾರಿಯಾಗಿದ್ದಾರೆ.

ಸತ್ತೇಗಾಲ ಗ್ರಾಮ ಪಂಚಾಯಿತಿ ಪಿಡಿಒ ಜುನೈದ್, ಮಧುವನಹಳ್ಳಿ ಶುದ್ಧ ನೀರು ಘಟಕದ ನಿರ್ವಹಣೆ ಇಂಜಿನಿಯರ್ ರೇವಣ್ಣ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

RELATED ARTICLES
- Advertisment -
Google search engine

Most Popular