Thursday, June 11, 2026
Google search engine

Homeರಾಜಕೀಯಹಿಂದುಳಿದ ವರ್ಗ ಅನುದಾನ ಹಂಚಿಕೆ : ರಾಜೀನಾಮೆ ಬಳಿಕ ಆದೇಶ ಅಸಂವಿಧಾನಿಕ : ಛಲವಾದಿ ನಾರಾಯಣಸ್ವಾಮಿ

ಹಿಂದುಳಿದ ವರ್ಗ ಅನುದಾನ ಹಂಚಿಕೆ : ರಾಜೀನಾಮೆ ಬಳಿಕ ಆದೇಶ ಅಸಂವಿಧಾನಿಕ : ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು : ಹಿಂದುಳಿದ ವರ್ಗ ಇಲಾಖೆಯಲ್ಲಿ ಅನುದಾನ ಹಂಚಿಕೆ ತಾರತಮ್ಯ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ಕೆಲವು ಸ್ವಾಮೀಜಿಗಳು ಜನರು ಈಗ ಇದನ್ನು ಪ್ರಶ್ನೆ ಮಾಡುತ್ತಿದ್ದಾರೆ.  ರಾಜೀನಾಮೆ ಬಳಿಕ  ಸಿದ್ದರಾಮಯ್ಯ ಅದೇಶಕ್ಕೆ ಸಹಿ ಹಾಕಬಾರದಿತ್ತು ಈ ಕ್ರಮ ಅಸಂವಿಧಾನಿಕ. ಈಗಿನ ಸಿಎಂ ಡಿಕೆ  ಶಿವಕುಮಾರ್ ಗೆ ಹೇಳಿ ಆದೇಶ ಮಾಡಿಸಬಹುದಿತ್ತು. ಆಗ ಸಿದ್ದರಾಮಯ್ಯ ಉಸ್ತುವಾರಿ ಮುಖ್ಯಮಂತ್ರಿ ಅಷ್ಟೆ ಆಗಿದ್ದರು ತಕ್ಷಣ ಈ ಅನುದಾನವನ್ನು ಡಿಕೆ ಶಿವಕುಮಾರ್ ತಡೆ ಹಿಡಿಯಬೇಕು ಎಂದು ಆಗ್ರಹಿಸಿದರು.

ಸಿದ್ದರಾಮಯ್ಯ ಸಿಎಂ ಸ್ಥಾನದಿಂದ ಕೆಳೆಗಿಳಿಯವಾಗ ಹಿಂದುಳಿದ ವರ್ಗಗಳ ವರದಿ ಸ್ವೀಕಾರ ಮಾಡಿದರು.  ಅನುಭವವಿದ್ದ ಸಿಎಂ ಈ ರೀತಿ ಸಣ್ಣತನದಿಂದ ಏಕೆ ನಡೆದುಕೊಂಡರು.  ರಾಕೇಶ್ ಹೆಸರಿನಲ್ಲಿರುವ ಸಂಸ್ಥೆಗೆ ಯಾಕೆ ಅನುದಾನ ಕೊಡಬೇಕಿತ್ತು ಇದೆಲ್ಲವನ್ನೂ ಡಿಕೆ ಶಿವಕುಮಾರ್ ಸರಿಮಾಡಬೇಕು ಎಂದು ಛಲವಾದಿ ನಾರಾಯಣಸ್ವಾಮಿ ಒತ್ತಾಯಿಸಿದರು.

RELATED ARTICLES
- Advertisment -
Google search engine

Most Popular