Saturday, April 19, 2025
Google search engine

HomeUncategorizedತೋಟಗಾರಿಕೆ ಇಲಾಖೆ ತಾಳೆ ಬೆಳೆ ಪ್ರದೇಶ ವಿಸ್ತರಣೆ ಕಾರ್ಯಕ್ರಮ

ತೋಟಗಾರಿಕೆ ಇಲಾಖೆ ತಾಳೆ ಬೆಳೆ ಪ್ರದೇಶ ವಿಸ್ತರಣೆ ಕಾರ್ಯಕ್ರಮ

ಧಾರವಾಡ : ಮರಿಗೌಡ ಅವರ ಜನ್ಮದಿನಾಚರಣೆ ಅಂಗವಾಗಿ ಇತ್ತೀಚೆಗೆ ತೋಟಗಾರಿಕೆ ಇಲಾಖೆ ಹಾಗೂ 3ಎಫ್ ಆಯಿಲ್ ಪಾಮ್ ಪ್ರೈವೇಟ್ ಲಿಮಿಟೆಡ್ ಕಂಪನಿ ಸಹಯೋಗದಲ್ಲಿ ತಾಳೆ ಬೆಳೆ ಪ್ರದೇಶ ವಿಸ್ತರಣೆ ಕಾರ್ಯಕ್ರಮಕ್ಕೆ ಮಹಾಂತಯ್ಯನವರ ಗದ್ದೆಯಲ್ಲಿ ತಾಳೆ ಸಸಿ ನೆಡುವ ಮೂಲಕ ಚಾಲನೆ ನೀಡಲಾಯಿತು.

ಧಾರವಾಡ ತಾಲೂಕಿನ ತಿಮ್ಮಾಪುರ ಗ್ರಾಮದ ಹಿರೇಮಠ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹಾಗೂ ಉದ್ಘಾಟಕರಾಗಿ ಶಿವಲೀಲಾ ವಿನಯ್ ಕುಲಕರ್ಣಿ ಆಗಮಿಸಿದ್ದರು. ಮರೇವಾಡ ಗ್ರಾ.ಪಂ.ಅಧ್ಯಕ್ಷ ಈರಪ್ಪ ಪೂಜಾರ ಅಧ್ಯಕ್ಷತೆ ವಹಿಸಿ, ಮರೇವಾಡ, ತಿಮ್ಮಾಪುರ, ಅಮ್ಮಿನಬಾವಿ ಗ್ರಾಮಗಳ ರೈತರು ಹಾಗೂ ಗ್ರಾ.ಪಂ.ನ ಸರ್ವ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಧಾರವಾಡ ಜಿಲ್ಲಾ ತೋಟಗಾರಿಕೆ ಉಪನಿರ್ದೇಶಕ ಕಾಶಿನಾಥ ಭದ್ರಣ್ಣವರ, ಅಮ್ಮಿನಬಾವಿ ರೈ. ಸಂ.ಕೇಂದ್ರ ಸಹಾಯಕ ತೋಟಗಾರಿಕೆ ಅಧಿಕಾರಿ ಮಹೇಶ ಪಟ್ಟಣಶೆಟ್ಟಿ ಹಾಗೂ 3ಎಫ್ ಆಯಿಲ್ ಪಾಮ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಏರಿಯಾ ಮ್ಯಾನೇಜರ್ ಮೃತ್ಯುಂಜಯ ಪಾಟೀಲ, ಕ್ಲಸ್ಟರ್ ಅಧಿಕಾರಿ ಸಿದ್ದಪ್ಪ ಕುಂದರಗಿ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular