ಬಾಗಲಕೋಟ: ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ಅಡಿ ನೇಕಾರರಿಗೆ ಕೈಗೆಲಸ ಕೊಡುವ ನಿಟ್ಟಿನಲ್ಲಿ ವಿದ್ಯಾ ವಿಕಾಸ ಯೋಜನೆಗೆ ಸಮವಸ್ತ್ರ ಪೂರೈಕೆ ಆದೇಶ ಶಿಕ್ಷಣ ಇಲಾಖೆಯಿಂದ ಬರದಿರುವ ಕಾರಣ ನೀಡಿ ಕೈಮಗ್ಗ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಗುರುದತ್ ಹೆಗಡೆ ಮೌಖಿಕ ಆದೇಶ ನೀಡಿದ ಕಾರಣ ಕೈಮಗ್ಗ ಅಭಿವೃದ್ಧಿ ನಿಗಮದ ಶಾಖಾ ಕಚೇರಿಗಳು ಭೀಮು ಪೂರೈಕೆ ಸ್ಥಗಿತ ಗೊಳಿಸಿದ ಕಾರಣ ಸ್ಥಳೀಯ ಕೈಮಗ್ಗ ನೇಕಾರರು ಶಾಖಾ ಕಚೇರಿ ಎದುರು ಕುಳಿತು ಪ್ರತಿಭಟಿಸಿದರು. ಇದೇ ವೇಳೆ ಪ್ರತಿಭಟನಾ ಸ್ಥಳಕ್ಕೆ ಇಲಕಲ್ಲ ಕೆಎಚ್ಡಿಸಿ ಯೋಜನಾಧಿಕಾರಿ ಎನ್.ಬಿ.ಪಾಟೀಲ್ ಆಗಮಿಸಿ ನಿಗಮದ ಬಡ ನೇಕಾರರಿಂದ ಮನವಿ ಸ್ವೀಕರಿಸಿ,ಮೇಲಾಧಿಕಾರಿಗಳ ಮೌಖಿಕ ಸೂಚನೆ ಮೇರೆಗೆ ಭೀಮು ಪೂರೈಕೆ ಸ್ಥಗಿತಗೊಳಿಸಲಾಗಿದೆ ಎಂದು ಅಸಹಾಯಕತನ ವ್ಯಕ್ತಪಡಿಸಿ ವಿದ್ಯಾವಿಕಾಸ ಯೋಜನೆ ಸರ್ಕಾರ ಮುಂದುವರೆಸಿ ಸಮವಸ್ತ್ರ ಪೂರೈಕೆ ಮಾಡಲು ಆದೇಶ ನೀಡಿದ್ದಲ್ಲಿ ಮತ್ತೆ ಭೀಮು ನೀಡಲಾಗುವುದು ಎಂದರು.
ಸದ್ಯ ಭೀಮು ಸೇರಿದಂತೆ ಕಚ್ಚಾವಸ್ತುಗಳ ಪೂರೈಕೆ ಸ್ಥಗಿತವಾಗಿರುವುದು ಬಡ ನೇಕಾರರ ಹೊಟ್ಟೆಯ ಮೇಲೆ ಸರ್ಕಾರ ಹೊಡೆದಿದೆ ಎಂದು ಪ್ರತಿಭಟನಾ ನಿರತ ನೇಕಾರರು ಆಕ್ರೋಶ ವ್ಯಕ್ತಪಡಿಸಿದರು.