ಗದಗ: ಶಕ್ತಿ ಯೋಜನೆಯ ಎಫೆಕ್ಟ್ ನಿಂದಾಗಿ ತಾಯಿಯೊಬ್ಬಳು ಮಗು ಹೊತ್ತುಕೊಂಡು ಬಸ್ ನ ಬಾಗಿಲಲ್ಲೇ ಕುಳಿತು ಪ್ರಯಾಣ ನಡೆಸಿರೋ ಘಟನೆ ಗದಗ ನಗರದಲ್ಲಿ ನಡೆದಿದೆ.ಗದಗ ನಗರದಿಂದ ಜಿಲ್ಲಾಸ್ಪತ್ರೆಗೆ ಹೋಗುವ ಬಸ್ ನಲ್ಲಿ ಕುಳಿತು ಮಹಿಳೆ ಪ್ರಯಾಣ ಮಾಡಿದ್ದಾಳೆ.ಸುಮಾರು ಒಂದು ವರ್ಷದ ಮಗುವನ್ನ ಕಂಕುಳಲ್ಲಿಟ್ಟುಕೊಂಡು ಬಸ್ ನ ಬಾಗಿಲಿನ ಮೆಟ್ಟಿಲು ಮೇಲೆ ಕುಳಿತರೂ ಸಹ, ಪ್ರಯಾಣಿಕರು ಯಾರೊಬ್ಬರೂ ಸಹ ಸೀಟ್ ಬಿಟ್ಟು ಕೊಡದೇ ಅಮಾನವೀಯ ವರ್ತನೆ ತೋರಿದ್ದಾರೆ.
ಸ್ವಲ್ಪ ಯಾಮಾರಿದ್ರೂ ತಾಯಿ ಹಾಗೂ ಮಗುವಿಗೆ ಅಪಾಯ ಗ್ಯಾರಂಟಿ ಅಂತ ಅರಿತರೂ ಸಹ,ಬಸ್ ನ ಚಾಲಕ ಹಾಗೂ ನಿರ್ವಾಹಕ ಮುನ್ನೆಚ್ಚರಿಕೆ ಕ್ರಮವಾಗಿ ಮಹಿಳೆಯನ್ನ ಒಳಗೆ ಕಳುಹಿಸದೇ ನಿರ್ಲಕ್ಷ್ಯ ತೋರಿದ್ದಾರೆ.ಈಗಾಗಲೇ ಗದಗನಲ್ಲಿ ಬಸ್ ನಿಂದ ಇಳಿಯಲು ಹೋಗಿ ಓರ್ವ ಮಹಿಳೆ ಸಾವನ್ನಪ್ಪಿರುವ ಘಟನೆ ನಡೆದ್ರೂ,ಕೆಎಸ್ ಆರ್ ಟಿಸಿ ಸಿಬ್ಬಂದಿ ಮಾತ್ರ ಇನ್ನೂ ಬುದ್ಧಿ ಕಲಿತಂತೆ ಕಾಣ್ತಿಲ್ಲ.ಫ್ರೀ ಬಸ್ ಮಾಡಿದಾಗಿನಿಂದಲೂ ಬಸ್ ಗಳಲ್ಲಿ ಜನ ಪ್ರಯಾಣ ಮಾಡಲು ಹೈರಾಣ ಪಡುವಂತಾಗಿದೆ.