Tuesday, June 30, 2026
Google search engine

Homeರಾಜ್ಯಡೀಸೆಲ್ ಬೆಲೆ ಏರಿಕೆ : ಸಾರಿಗೆ ನಿಗಮಗಳಿಗೆ ಸಂಕಷ್ಟ : ಬಸ್ ದರ ಏರಿಕೆಗೆ ಸಾರ್ವಜನಿಕರಿಂದ...

ಡೀಸೆಲ್ ಬೆಲೆ ಏರಿಕೆ : ಸಾರಿಗೆ ನಿಗಮಗಳಿಗೆ ಸಂಕಷ್ಟ : ಬಸ್ ದರ ಏರಿಕೆಗೆ ಸಾರ್ವಜನಿಕರಿಂದ ತೀವ್ರ ವಿರೋಧ

ಬೆಂಗಳೂರು : ರಾಜ್ಯದಲ್ಲಿ ಸಾರಿಗೆ ಬಸ್ ಟಿಕೆಟ್ ದರ ಏರಿಕೆಯಾಗುವ ಸಾಧ್ಯತೆ ಇದೆ. ಡೀಸೆಲ್ ಬೆಲೆ ಏರಿಕೆ, ನೌಕರರ ವೇತನ ಹೆಚ್ಚಳ ಮತ್ತು ಶಕ್ತಿ ಯೋಜನೆಯ ಅನುಷ್ಠಾನದಿಂದ ನಾಲ್ಕು ಸಾರಿಗೆ ನಿಗಮಗಳು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ಈ ನಿಟ್ಟಿನಲ್ಲಿ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಸೇರಿದಂತೆ ಎಲ್ಲ ನಿಗಮಗಳು ಬಸ್ ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸಿವೆ. ಕಳೆದ ಆರು ತಿಂಗಳಲ್ಲಿ ನಾಲ್ಕು ಬಾರಿ ಡೀಸೆಲ್ ಬೆಲೆ ಏರಿಕೆಯಾಗಿದ್ದು, ಪ್ರತಿ ತಿಂಗಳು 40 ಕೋಟಿ ರೂಪಾಯಿ ನಷ್ಟವಾಗುತ್ತಿದೆ ಎಂದು ನಿಗಮಗಳು ತಿಳಿಸಿವೆ. ಅಲ್ಲದೆ, ಜುಲೈ ತಿಂಗಳಿನಿಂದ ನೌಕರರಿಗೆ ಶೇಕಡಾ 12.5 ರಷ್ಟು ವೇತನ ಹೆಚ್ಚಳ ಮಾಡಬೇಕಿದೆ ಮತ್ತು 1,271 ಕೋಟಿ ರೂಪಾಯಿ ವೇತನ ಹಿಂಬಾಕಿಯನ್ನೂ ಪಾವತಿಸಬೇಕಾಗಿದೆ.

ಶಕ್ತಿ ಯೋಜನೆಯ ಬಾಕಿ ಹಣ 5,000 ಕೋಟಿ ರೂಪಾಯಿ ಬಿಡುಗಡೆಯಾಗಬೇಕಿದೆ. ಈ ಎಲ್ಲ ಕಾರಣಗಳಿಂದಾಗಿ ದರ ಏರಿಕೆ ಅನಿವಾರ್ಯ ಎಂದು ನಿಗಮಗಳು ವಾದಿಸಿವೆ. ಕೆಎಸ್‌ಆರ್‌ಟಿಸಿ ಶೇಕಡಾ 33 ರಷ್ಟು ಮತ್ತು ಬಿಎಂಟಿಸಿ ಶೇಕಡಾ 44 ರಷ್ಟು ದರ ಏರಿಕೆಗೆ ಅನುಮತಿ ಕೋರಿವೆ. ಸಾರಿಗೆ ಸಚಿವರಾದ ಬೈರತಿ ಸುರೇಶ್ ಅವರು ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ, ಪ್ರಯಾಣಿಕರಿಗೆ ಹೊರೆಯಾಗದಂತೆ ಮತ್ತು ನಿಗಮಗಳ ಸಂಕಷ್ಟ ನಿವಾರಣೆಯಾಗುವ ರೀತಿಯಲ್ಲಿ ಮುಂದಿನ ಕ್ಯಾಬಿನೆಟ್ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಈ ಪ್ರಸ್ತಾಪವು ಸಾರ್ವಜನಿಕರಿಂದ ತೀವ್ರ ವಿರೋಧಕ್ಕೆ ಗುರಿಯಾಗಿದೆ.

RELATED ARTICLES
- Advertisment -
Google search engine

Most Popular